Automobile
ಮುಂಚೆ ಕಾರು ಪ್ರತಿಷ್ಟೆಯ ಸಂಕೇತವಾಗಿತ್ತು ಆದರೆ ಈಗ ಅವಶ್ಯಕತೆ ಆಗಿಬಿಟ್ಟಿದೆ. ವಿಶ್ವದಲ್ಲಿ ಅತಿ ಹೆಚ್ಚು ಕಾರುಗಳನ್ನು ಹೊಂದಿರುವ ದೇಶದಲ್ಲಿ ಭಾರತ ಸಹ ಒಂದು. ಕೆಲವೇ ವರ್ಷಗಳಲ್ಲಿ ಕಾರು ಖರೀದಿ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಈಗ ಹೊಸ ವರದಿಯೊಂದು ಪ್ರಕಟವಾಗಿದ್ದು ಕಾರಿನಲ್ಲಿ ಪ್ರಯಾಣಿಸುವವರ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರ ತಂಡದಿಂದ ಅಧ್ಯಯನವೊಂದು ನಡೆದಿದ್ದು, ಅಧ್ಯಯನದ ವರದಿಯಂತೆ, ಕಾರಿನ ಒಳಗಡೆ ಹಲವು ಹಾನಿಕಾರಕ ವಾಯುಗಳು ಪತ್ತೆಯಾಗಿವೆ. ಈ ಹಾನಿಕಾರಕ ಅಂಶಗಳಲ್ಲಿ ಕೆಲವುಗಳು ಕ್ಯಾನ್ಸರ್ ಕಾರಕವೂ ಆಗಿವೆ ಎನ್ನುತ್ತಿದೆ ವರದಿ.
ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರ ತಂಡದ ವತಿಯಿಂದ ಮಾಡಲಾದ ಅಧ್ಯಯನಕ್ಕೆ 2015 ರಿಂದ 2022 ರ ಒಳಗೆ ಬಿಡುಗಡೆ ಆದ 101 ಕಾರುಗಳನ್ನು ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ. ಶೇಕಡ 90 ಪ್ರತಿಶತ ಕಾರುಗಳಲ್ಲಿ ಬೆಂಕಿ ಹರಡುವುದನ್ನು ನಿಯ ಜ್ವಾಲೆ ನಿವಾರಕ ಅಂಶ ಕಂಡು ಬಂದಿದೆ. ಇದನ್ನು TCIPP ಎಂದು ಕರೆಯಲಾಗುತ್ತದೆ. ಈ ರಾಸಾಯನಿಕವು ಮಾನವನ ನರಗಳಿಗೆ ಹಾನಿ ಉಂಟು ಮಾಡಬಹುದು ಎನ್ನಲಾಗಿದೆ.
Bengaluru: ಅತಿ ಹೆಚ್ಚು ಶ್ರೀಮಂತರಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ
ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರ ತಂಡದಿಂದ ಮಾಡಿದ ಅಧ್ಯನದ ಆಧಾರದ ಮೇಲೆ ಸಲ್ಲಿಸಲಾದ ವರದಿಯನ್ನು ಅಮೆರಿಕದ ನ್ಯಾಷನಲ್ ಟಾಕ್ಸಿಕಾಲಜಿ ಪ್ರೋಗ್ರಾಂ ಇಲಾಖೆಯು ಪರಿಶೀಲನೆಗೆ ಒಳಪಡಿಸಿದೆ. ಕಾರು ಸಂಸ್ಥೆಗಳು ಬೆಂಕಿ ಹರಡುವುದನ್ನು ನಿಯಂತ್ರಿಸಲು TCIPP ಮಾತ್ರವೇ ಅಲ್ಲದೆ, TDCIPP, TCEP ರಾಸಾಯನಿಕಗಳನ್ನು ಬಳಸುತ್ತವೆ. ಈ ರಾಸಾಯನಿಕಗಳಿಂದ ಬರುವ ವಾಸನೆ ದೇಹ ಸೇರುತ್ತಾ ಹೋದಂತೆ ಮಾನವನ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ಗೆ ಸಹ ಕಾರಣವಾಗುತ್ತವೆ.
ಕಾರು ಚಾಲಕರು ದಿನವೆಲ್ಲ ಕಾರಿನಲ್ಲೇ ಒರುತ್ತಾರೆ. ಅವರಿಗೆ ಇದರಂದ ಅಪಾಯವಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ವರದಿ. ಅಲ್ಲದೆ ಹೆಚ್ಚು ಸಮಯ ಮಕ್ಕಳು ಕಾರಿನಲ್ಲಿ ಕೂತರೆ ಅವರಿಗೂ ಇದು ಅಪಾಯಕಾರಿ. ಮೇಲೆ ಹೆಸರಿಸಿದ ರಾಸಾಯನಿಕಗಳು ಬೇಸಗೆಯಲ್ಲಿ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆಯಂತೆ ಇರಲಿ ಎಚ್ಚರ.