Narendra Modi: ಮೋದಿ ಪ್ರಮಾಣ ವಚನಕ್ಕೆ ಚಾಮರಾಜನಗರದ ಯುವತಿಗೆ ಆಹ್ವಾನ, ಯಾರೀಕೆ?

0
153
Narendra Modi
Narendra Modi

Narendra Modi

ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇಂದು (ಜೂನ್‌ 09) ಸಂಜೆ 7:15ಕ್ಕೆ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಹಲವು ದೇಶಗಳ ಪ್ರಧಾನ ಮಂತ್ರಿಗಳು, ರಾಜತಾಂತ್ರಿಕ ಮುಖಂಡರು ಮೋದಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದಾರೆ. ಹಲವು ರಾಜ್ಯದ ಮುಖ್ಯ ಮಂತ್ರಿಗಳು, ಬಿಜೆಪಿ ಮುಖಂಡರುಗಳು, ವಿಪಕ್ಷ ಮುಖಂಡರು, ಹಲವು ಸಿನಿಮಾ ತಾರೆಯರು, ಉದ್ಯಮಿಗಳು ಸಹ ಅತಿಥಿಗಳಾಗಿ ಹೋಗಿದ್ದಾರೆ. ಇವರುಗಳ ಜೊತೆಗೆ ಚಾಮರಾಜನಗರದ ಯುವತಿಯೊಬ್ಬರಿಗೂ ಸಹ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿದೆ.

ಚಾಮರಾಜನಗರದ ಉಮ್ಮತ್ತೂರಿನ ಯುವತಿ ವರ್ಷಾ ಎಂಬುವರಿಗೆ ನರೇಂದ್ರ ಮೋದಿ ಅವರ ಪ್ರಮಾಣ ವಚನದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದ್ದು ವರ್ಷಾ ಈಗಾಗಲೇ ದೆಹಲಿ ತಲುಪಿದ್ದಾರೆ. ಮೋದಿಯವರು ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ.

ಮೊಹಮ್ಮದ್ ಶಮಿಯ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ವರ್ಷಾ ಅವರು ಚಾಮರಾಜನಗರದ ಉಮ್ಮತ್ತೂರಿನಲ್ಲಿ ಕರಕುಶಲ ಉದ್ಯಮ ನಡೆಸುತ್ತಿದ್ದಾರೆ. ತಮ್ಮದೇ ಗ್ರಾಮದ ಕೆಲವು ಮಹಿಳೆಯರಿಗೆ ಉದ್ಯೋಗವನ್ನು ಸಹ ಕಲ್ಪಿಸಿದ್ದಾರೆ. ಮೋದಿಯವರು ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ವರ್ಷಾ ಅವರ ಬಗ್ಗೆ ಮಾತನಾಡಿದ್ದರು, ಅವರ ಕಾರ್ಯವನ್ನು ಶ್ಲಾಘಿಸಿದ್ದರು ಜೊತೆಗೆ ವೋಕಲ್‌ ಫಾರ್‌ ಲೋಕಲ್‌ ಅಡಿಯಲ್ಲಿ ವರ್ಷಾ ಅವರನ್ನು ಶ್ಲಾಘಿಸಿದ್ದರು. ಈಗ ಅವರಿಗೆ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿದೆ.

ಕಳೆದ ವರ್ಷ ನವೆಂಬರ್‌ ನಲ್ಲಿ ಮೋದಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಮೋದಿ ಅವರು ವರ್ಷಾರ ಬಗ್ಗೆ ಪ್ರಸ್ತಾಪಿಸಿದ್ದರು. ವರ್ಷಾ ಅವರು ಬಾಳೆ ದಿಂಡು, ಬಿದಿರು ಇನ್ನಿತರೆಗಳನ್ನು ಬಳಸಿ ವ್ಯಾನಿಟಿ ಬ್ಯಾಗು, ಇನ್ನಿತರೆ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಾರೆ.

ಮೋದಿಯವರ ಪ್ರಮಾಣ ವಚನ ಸ್ವೀಕಾರಕ್ಕೆ ಶ್ರೀಲಂಕಾದ ಪ್ರಧಾನಿ, ಮಾಲ್ಡೀವ್ಸ್‌ ಪ್ರಧಾನಿ ಸೇರಿದಂತೆ ಇನ್ನೂ ಕೆಲವು ದೇಶಗಳ ರಾಜತಾಂತ್ರಿಕ ಮುಖಂಡರು ಆಗಮಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಎನ್‌ಡಿಎ ಮಿತ್ರ ಪಕ್ಷಗಳ ಮುಖಂಡರು. ಸಿನಿಮಾ ತಾರೆಯರಾದ ರಜನೀಕಾಂತ್‌, ಅನಿಲ್‌ ಕಪೂರ್‌, ಅನುಪಮ್‌ ಖೇರ್‌ ಇನ್ನೂ ಕೆಲವರು ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here