China
ಪರಮಾಣು ಶಕ್ತಿ ಹೊಂದಿರುವ ದೇಶ, ಹೆಚ್ಚು ಸೈನ್ಯ ಶಕ್ತಿ ಹೊಂದಿರುವ ದೇಶವನ್ನು ಮಹಾನ್ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಎರಡನೇ ಮಹಾಯುದ್ಧದ ಬಳಿಕ ದೇಶಗಳ ನಡುವೆ ಪರಸ್ಪರ ಸ್ಪರ್ಧೆಯ ರೀತಿ ನೀತಿ ಬದಲಾಯ್ತು. ಯಾವ ದೇಶ ಅಂತರಿಕ್ಷ ವಿಜ್ಞಾನದಲ್ಲಿ ಮುಂದಿದೆಯೋ ಅದನ್ನು ಸೂಪರ್ ಪವರ್ ಎಂದು ಪರಿಗಣಿಸಲಾಗುತ್ತದೆ. ಅಮೆರಿಕ ಮತ್ತು ರಷ್ಯಾ ದೇಶಗಳು ಅಂತರಿಕ್ಷ ಸಾಧನೆಯನ್ನು ಪೈಪೋಟಿಗೆ ಇಳಿದಂತೆ ಮಾಡುತ್ತವೆ. ಭಾರತವೂ ಸಹ ಅಂತರಿಕ್ಷ ಯಾನ ಮಾಡಿ ಸೂಪರ್ ಪವರ್ ದೇಶಗಳಲ್ಲಿ ಒಂದೆನಿಸಿಕೊಂಡಿವೆ. ಇದೀಗ ಚೀನಾ ಎಲ್ಲ ದೇಶಗಳನ್ನು ಹಿಂದಿಕ್ಕಿ ಹೊಸ ಸಾಧನೆ ಮಾಡಿದೆ.
ಚೀನಾ ದೇಶದ ವಿಜ್ಞಾನಿಗಳು ಈಗ ಚಂದ್ರನ ಮೇಲೆ ಮನೆ ಕಟ್ಟಲು ಮುಂದಾಗಿದ್ದಾರೆ. ಹೌದು, ಚೀನಾ ಚಂದ್ರನ ಮೇಲೆ ಮೊಟ್ಟೆಯಾಕಾರದ ಮನೆಗಳನ್ನು ನಿರ್ಮಾಣ ಮಾಡಲಿದೆ. ಚಂದ್ರನ ಮೇಲೆ ನಾಗರೀಕತೆಯನ್ನು ಬೆಳೆಸುವ ಯೋಜನೆ ಚೀನಾದ್ದಾಗಿದೆ. ಮೊಟ್ಟೆಯೊಂದನ್ನು ಮೇಲ್ಮುಖವಾಗಿ ನಿಲ್ಲಿಸಿದರೆ ಹೇಗೆ ಕಾಣುತ್ತದೆಯೋ ಆ ರೀತಿಯ ಇಗ್ಲೂ ಮಾದರಿಯ ಮನೆಗಳನ್ನು ಚೀನಾ ನಿರ್ಮಿಸುತ್ತಿದ್ದು, ಚಂದ್ರನ ಮೇಲೆ ಅದನ್ನು ಸ್ಥಾಪಿಸಲಿದೆ.
ಈಗಾಗಲೇ ಈ ಇಗ್ಲೂಗಳ ಮಾಡೆಲ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಪ್ರಾಜೆಕ್ಟ್ನ ಮುಖ್ಯ ಚೀನಾದ ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಈ ಮನೆಗಳು ಚಂದ್ರನ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. ಕನಿಷ್ಟ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಮನೆಗಳು ಇವಾಗಿದ್ದು, ಅಂತರಿಕ್ಷದಲ್ಲಿ ವಾಸಯೋಗ್ಯ ಮನೆಗಳ ನಿರ್ಮಾಣದಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.
Nikhil Kumaraswamy: ನನ್ನ ಮಗ ನಿಖಿಲ್ ಗೆದ್ದಿದ್ದಾನೆ: ಅನಿತಾ ಕುಮಾರಸ್ವಾಮಿ
ಚೀನಾ ಈಗ ಪ್ರದರ್ಶಿಸಿರುವ ಮಾಡೆಲ್ಗಳು 3ಡಿ ಪ್ರಿಂಟೆಡ್ ಆಗಿವೆ. ಆದರೆ ಇದೇ ರೀತಿಯ ಇತರೆ ದೊಡ್ಡ ಮಾಡೆಲ್ಗಳನ್ನು ತಯಾರಿಸಲಾಗಿದೆಯಂತೆ. ಚಂದ್ರನ ಮೇಲೆ ಹೊಸ ನಾಗರೀಕತೆಯನ್ನು ಬೆಳೆಸುವ ಯೋಜನೆಯನ್ನು ಚೀನಾ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.