Site icon Samastha News

BYD Auto: ಕೈ ಜೋಡಿಸುತ್ತಿದ್ದಾರೆ ಅಂಬಾನಿ-ಅದಾನಿ, ಟಾಟಾಗೆ ಶುರುವಾಯ್ತು ನಡುಕ

BYD Auto

BYD Auto

ಅಂಬಾನಿ-ಅದಾನಿ ಭಾರತದ ಮಾತ್ರವಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಮಾಡಿರುವ ಉದ್ಯಮಿಗಳು. ಈ ಇಬ್ಬರೂ ಭಾರತದ ಅಭಿವೃದ್ಧಿಗೆ, ಜಿಡಿಪಿ ಬೆಳವಣಿಗೆಗೆ ನೀಡಿರುವ, ನೀಡುತ್ತಿರುವ ಕೊಡುಗೆ ಬಹಳ ದೊಡ್ಡದು. ಆದರೆ ಭಾರತದ ಮಾತ್ರವಲ್ಲ, ವಿಶ್ವ ಮಾರುಕಟ್ಟೆಯಲ್ಲಿ ಸಹ ಈ ಇಬ್ಬರು ಪರಸ್ಪರ ಪ್ರತಿಸ್ಪರ್ಧಿಗಳು. ಒಬ್ಬರ ಮೇಲೆ ಇನ್ನೊಬ್ಬರು ಸ್ಪರ್ಧೆ ಮಾಡುತ್ತಲೇ ಬಂದಿದ್ದಾರೆ. ಆದರೆ ಈಗ ಈ ಇಬ್ಬರೂ ಒಂದಾಗುತ್ತಿದ್ದಾರೆ. ಇವರನ್ನು ಒಂದು ಮಾಡುತ್ತಿರುವುದು ಚೈನಾದ ಕಂಪೆನಿ!

ಹೌದು, ಪರಸ್ಪರ ಸರ್ಧೆ ಮಾಡುತ್ತಿದ್ದ ಈ ಇಬ್ಬರು ಶ್ರೀಮಂತರು ಕೈಜೋಡಿಸುತ್ತಿದ್ದು, ಒಂದೇ ಉದ್ಯಮದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಬಿವೈಡಿ, ವಿಶ್ವದ ಅತ್ಯುತ್ತಮ ಕಾರು ಕಂಪೆನಿಗಳಲ್ಲಿ ಒಂದು. ಚೈನೀಸ್ ಸಂಸ್ಥೆಯಾದ ಬಿವೈಡಿ ಟೆಸ್ಲಾಗಿಂತಲೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಇವಿ ಕಾರುಗಳ ನಿರ್ಮಾಣದಲ್ಲಿ ನಂಬರ್ 1 ಈ ಸಂಸ್ಥೆ. ಆದರೆ ಭಾರತದಲ್ಲಿ ಈ ಕಾರುಗಳು ಯಾಕೋ‌ ಕ್ಲಿಕ್ ಆಗುತ್ತಿಲ್ಲ. ಆದರೂ ಭಾರತದ ಮೇಲೆ ಭರವಸೆ ಕಳೆದುಕೊಳ್ಳದ ಈ ಸಂಸ್ಥೆ ಈಗ ಇಲ್ಲಿಯೇ ಒಂದು ಕಾರು ನಿರ್ಮಾಣ ಘಟಕ ಸ್ಥಾಪನೆಗೆ ಮುಂದಾಗಿದೆ.

ಬಿವೈಡಿ, ಭಾರತದಲ್ಲಿ ಕಾರು ನಿರ್ಮಾಣ ಘಟಕ ಸ್ಥಾಪಿಸಲಿದ್ದು, ಇದರ ಮೇಲೆ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಇಬ್ಬರೂ ಹೂಡಿಕೆ ಮಾಡಲಿದ್ದಾರೆ. ಈ ಇಬ್ಬರು ಆಗರ್ಭ ಶ್ರೀಮಂತರೊಟ್ಟಿಗೆ ಟೈ ಅಪ್ ಮಾಡಿಕೊಂಡು ಕಾರು ನಿರ್ಮಾಣ ಮಾಡಲಿದೆ ಬಿವೈಡಿ. ಪ್ರಸ್ತುತ ಭಾರತದಲ್ಲಿ ಮಾರುತಿ ಮತ್ತು ಟಾಟಾ ಅತಿ ಹೆಚ್ಚು ಕಾರು ಮಾರುವ ಸಂಸ್ಥೆಗಳಾಗಿದ್ದು, ಬಿವೈಡಿ ಜೊತೆ ಅಂಬಾನಿ-ಅದಾನಿ ಕೈ ಜೋಡಿಸಿರುವುದು ಎರಡೂ ಸಂಸ್ಥೆಗಳಿಗೆ ದೊಡ್ಡ ಆತಂಕ ಮೂಡಿಸಿದೆ.

Lawyer Jagadish: ಬಿಗ್’ಬಾಸ್ ಅನ್ನೇ ಖರೀದಿಸುತ್ತೇನೆ ಎನ್ನುತ್ತಿರುವ ಲಾಯರ್ ಜಗದೀಶ್ ಆಸ್ತಿ ಎಷ್ಟಿದೆ?

ಅದರಲ್ಲೂ ಟಾಟಾ ಸಂಸ್ಥೆಗೆ ಆತಂಕ ಹೆಚ್ಚಾಗಿದೆ. ಏಕೆಂದರೆ ಬಿವೈಡಿ ಕೇವಲ ಇವಿ ವಾಹನಗಳನ್ನಷ್ಟೆ ಭಾರತದಲ್ಲಿ ನಿರ್ಮಾಣ ಮತ್ತು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದೆ. ಮಾರುತಿ ಇವಿ ವಾಹನಗಳ ನಿರ್ಮಾಣ ಮಾಡುವುದಿಲ್ಲ ಆದರೆ ಟಾಟಾ ಕಂಪೆನಿ ಇವಿ ವಾಹನಗಳ ನಿರ್ಮಾಣ ಹಾಗೂ ಮಾರಾಟ ಮಾಡುತ್ತದೆ. ಬಿವೈಡಿ,  ಅಂಬಾನಿ-ಅದಾನಿ ಜೊತೆ ಕೈಜೋಡಿಸಿ ಇವಿ ವಾಹನಗಳ ನಿರ್ಮಾಣ ಮಾಡಿದರೆ ಟಾಟಾ ಕಾರುಗಳ ಮಾರಾಟದ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.

Exit mobile version