Kangana Ranaut: ನಟಿ ಕಂಗನಾ ಕೆನ್ನೆಗೆ ಭಾರಿಸಿದ ಯೋಧೆ ಹೇಳಿದ್ದೇನು: ಕಪಾಳ ಮೋಕ್ಷಕ್ಕೆ ಕಾರಣವೇನು?

0
137
Kangana Ranaut

Kangana Ranaut

ನಟಿ, ನೂತನ ಸಂಸದೆ ಕಂಗನಾ ರನೌತ್ ಗೆ ಚಂಢಿಘಡದ ವಿಮಾನ‌ ನಿಲ್ದಾಣದಲ್ಲಿ ಸಿಐಎಸ್ಎಫ್ ಕಾನ್ಸ್ ಟೇಬಲ್ ಕುಲ್ವೀಂಧರ್ ಕೌರ್ ಎಂಬುವರು ಕಪಾಳಕ್ಕೆ ಭಾರಿಸಿದ್ದರು. ಮೊದಲಿಗೆ ಕಂಗನಾರೆ ಕಾನ್ ಸ್ಟೇಬಲ್ ಗೆ ಹೊಡೆದಿದ್ದಾರೆ ಎನ್ನಲಾಯ್ತು, ಬಳಿಕ ತಾನೇ ಕಂಗನಾಗೆ ಹೊಡೆದಿದ್ದಾಗಿ ಕುಲ್ವೀಂಧರ್ ಕೌರ್ ಹೇಳಿದ್ದಲ್ಲದೆ, ಹೊಡೆದಿದ್ದಕ್ಕೆ ಕಾರಣವನ್ನೂ ನೀಡಿದ್ದಾರೆ.

ಕಂಗನಾ ರನೌತ್ ಈ ಹಿಂದೆ ಪಂಜಾಬ್ ರೈತರ ಬಗ್ಗೆ ನೀಡಿದ್ದ ತುಚ್ಛ ಹೇಳಿಕೆಗಳಿಂದ ಕೋಪಗೊಂಡು ತಾವು ಕಂಗನಾರ ಕಪಾಳಕ್ಕೆ ಹೊಡೆದಿದ್ದಾಗಿ ಕುಲ್ವೀಂಧರ್ ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪಂಜಾಬೊನ ರೈತರು ದೆಹಲಿಯಲ್ಲಿ ನಡೆಸಿದ್ದ ಸುದೀರ್ಘ ಹೋರಾಟದ ಬಗ್ಗೆ ನಟಿ ಕಂಗನಾ ತುಚ್ಛವಾಗಿ ಮಾತನಾಡಿದ್ದರು.

ರೈತರನ್ನು ಖಲಿಸ್ಥಾನಿ ಪ್ರತ್ಯೇಕವಾದಿಗಳು, ಭಯೋತ್ಪಾದಕರು ಎಂದಿದ್ದ ಕಂಗನಾ ರನೌತ್, ನೂರು ರುಪಾಯಿ ಆಸೆಗೆ ಪ್ರತಿಭಟನೆಗೆ ಬಂದಿದ್ದಾರೆ ಎಂದಿದ್ದರು. ಇದು ಪಂಜಾಬಿಗರನ್ನು ತೀವ್ರವಾಗಿ ಕೆರಳಿಸಿತ್ತು. ಇದೇ ಕಾರಣಕ್ಕೆ ಈಗ ಕುಲ್ವೀಂಧರ್‌ ಕೌರ್ ಕಂಗನಾರ ಕಪಾಳಕ್ಕೆ ಹೊಡೆದಿದ್ದಾರೆ. ಕಂಗನಾ ಅವಮಾನ ಮಾಡಿದ ಪ್ರತಿಭಟನಾಕಾರರಲ್ಲಿ ನನ್ನ ತಾಯಿಯೂ ಇದ್ದರು ಎಂದಿದ್ದಾರೆ. ನನ್ನ ತಾಯಿಯನ್ನು ಅವಮಾನ ಮಾಡಿದ ಕಂಗನಾಗೆ ಹೊಡೆದಿದ್ದೇನೆ ಎಂದಿದ್ದಾರೆ.

Instant Divorce: ಮದುವೆಯಾದ ಮೂರೇ ನಿಮಿಷಕ್ಕೆ ವಿಚ್ಛೇದನ! ಕಾರಣವೇನು?

ನಟಿ ಹಾಗೂ‌ ನೂತನ ಸಂಸದೆಗೆ ಹೊಡೆದಿರುವ ಕುಲ್ವೀಂಧರ್ ಕೌರ್ ಅನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಆಕೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನಿಒಡೊರುವ ನಟಿ ಕಂಗನಾ ರನೌತ್, ‘ಪಂಜಾಬ್ ನಲ್ಲಿ ಭಯೋತ್ಪಾದಕ‌ ಚಟುವಟಿಕೆ ಹೆಚ್ಚಾಗುತ್ತಿದೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here