CM Siddaramaiah
ಮುಡಾ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತೊಂದೆಡೆ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಯತ್ನದಲ್ಲಿಯೂ ನಿರತರಾಗಿದ್ದಾರೆ. ಆ ಮೂಲಕ ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಬಿಜೆಪಿ ತನಗಿಂತಲೂ ಭ್ರಷ್ಟ ಎಂದು ತೋರಿಸುವ ಪ್ರಯತ್ನ ಇದಾಗಿರಬಹುದು. ಬುಧವಾರ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ‘ಕಾಂಗ್ರೆಸ್’ನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ಅನ್ನು ಬಿಜೆಪಿ ನೀಡಿತ್ತು’ ಎಂದಿದ್ದಾರೆ
ನಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದ್ದು, ಶಾಸಕರ ಖರೀದಿಗೆ ಮುಂದಾಗಿದ್ದಾರೆ. 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಹಣ ನೀಡುವ ಆಮಿಷ ಒಡ್ಡಿದ್ದಾರೆ, ಆದರೆ ಕಾಂಗ್ರೆಸ್’ನ ಯಾವೊಬ್ಬ ಶಾಸಕನೂ ಆ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ, ಹಾಗಾಗಿ ಈಗ ನನ್ನ ಮೇಲೆ ಭ್ರಷ್ಟಾಚಾರದ ಆರೋಪವನ್ನು ಬಿಜೆಪಿ ಮಾಡುತ್ತಿದೆ ಎಂದಿದ್ದಾರೆ ಸಿಎಂ.
ಒಬ್ಬ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ನೀಡುತ್ತಾರೆ ಎಂದರೆ ಅದುವಯಾರ ಹಣ? ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಆ ಹಣವನ್ನು ಪ್ರಿಂಟ್ ಮಾಡುತ್ತಾರೆಯೇ? ಅದೆಲ್ಲ ಲಂಚದ ಹಣ, ಅದರಿಂದಲೇ ಅವರು ಶಾಸಕರ ಖರೀದಿಗೆ ಮುಂದಾಗಿದ್ದಾರೆ, ಲಂಚದ ಮೂಲಕ, ಭ್ರಷ್ಟಾಚಾರದ ಮೂಲಕ ಅವರೆಲ್ಲಕೋಟ್ಯಂತರ ಹಣ ಸಂಪಾದಿಸಿದ್ದಾರೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
DSP Santosh Patel: 14 ವರ್ಷದ ಬಳಿಕ ಒಂದಾದ ಖಾನ್ ಮತ್ತು ಪಟೇಲ್, ಇದು ಅಪರೂಪದ ಗೆಳೆತನ
ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆ ಜಾರಿಯಲ್ಲಿದೆ. ಸಿದ್ದರಾಮಯ್ಯ ಈಗಾಗಲೇ ಒಮ್ಮೆ ತನಿಖಾಧಿಕಾರಿಗಳ ಎದುರು ಹಾಜರಾಗಿ ತನಿಖೆ ಎದುರಿಸಿದ್ದಾರೆ. ಇದರ ಬೆನ್ನಲ್ಲೆ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರದ ಆಡಳಿತದಲ ಕೋವಿಡ್ ಕಾಲದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ತನಿಖೆಗೆ ಆದೇಶ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.