Colors Kannada: ಕಿರುತೆರೆಗೆ ಬಂತು ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್ ಅಭಿಮಾನಿಗಳು ಸುಮ್ಮನಿರ್ತಾರ?

0
219
Colors Kannada

Colors Kannada

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರು ಪರಪ್ಪರ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿದೆ‌. ಈ ಪ್ರಕರಣದ ಕುರಿತು ಸಿನಿಮಾ, ಡಾಕ್ಯುಮೆಂಟರಿ ಮಾಡಲು ಈಗಾಗಲೇ ಕೆಲವರು ಆಸಕ್ತಿ ತೋರಿದ್ದು, ಟೈಟಲ್ ಸಹ ನೊಂದಣಿ ಆಗಿದೆ. ಇದೆಲ್ಲದರ ನಡುವೆ ದರ್ಶನ್ ಪ್ರಕರಣ ಕಿರುತೆರೆಗೆ ಬಂದುಬಿಟ್ಟಿದೆ.

ಕೊಲೆ, ಅಪಹರಣ ಅಂಥಹಾ ಪ್ರಕರಣಗಳನ್ನು ಕಲಾವಿದರ ಬಳಸಿ ಮರುಸೃಷ್ಟಿಸುವ ಕಲರ್ಸ್ ಕನ್ನಡ ವಾಹಿನಿಯ ‘ಶಾಂತಂ ಪಾಪಂ’ ಸರಣಿಯ ಹೊಸ ಎಪಿಸೋಡ್ ನಲ್ಲಿ ದರ್ಶನ್ ಪ್ರಕರಣವನ್ನು ತಮ್ಮದೇ ರೀತೊಯಲ್ಲಿ ಮರುಸೃಷ್ಟಿಸಿ ಪ್ರಸಾರ ಮಾಡಲಾಗುತ್ತಿದೆ. ಎಪಿಸೋಡ್ ನ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಆಗಿದ್ದು, ಸೋಮವಾರದಿಂದ ಶುಕ್ರವಾರದ ವರೆಗೆ ಈ  ಎಪಿಸೋಡ್ ಗಳು ಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಶಾಂತಂ ಪಾಪಂ ಎಪಿಸೋಡ್ ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಸಾರ

https://samasthanews.com/did-darshan-thoogudeepas-brother-dinakar-thoogudeepa-really-is-in-1-bhk-rented-house/

ರೇಣುಕಾ ಸ್ವಾಮಿ ಪ್ರಕರಣವನ್ನೇ ಮೂಲವಾಗಿರಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಆರೋಪಿಗಳ ಹೆಸರನ್ನಷ್ಟೆ ಬದಲಾಯಿಸಿ ಎಪಿಸೋಡ್ ನ ಚಿತ್ರಕತೆ ಹೆಣೆದು ಚಿತ್ರೀಕರಣ ಮಾಡಲಾಗಿದೆ. ದರ್ಶನ್ ಪಾತ್ರಕ್ಕೆ ದಾಸ್ ಎಂದು ಹೆಸರಿಡಲಾಗಿದ್ದು, ವಿಜಯಲಕ್ಷ್ಮಿ, ಪವಿತ್ರಾ ಗೌಡ ಅವರ ಪಾತ್ರಗಳು ಸಹ ಎಪಿಸೋಡ್ ನಲ್ಲಿವೆ. ಈ ಕ್ರೈಂ ಕಾರ್ಯಕ್ರಮ ಸರಣಿಗೆ ‘ಡೇರ್ ಡೆವಿಲ್‌ದೇವದಾಸ್’ ಎಂದು ಹೆಸರಿಡಲಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದು, ಶೆಡ್ ನಲ್ಲಿ ಹಲ್ಲೆ, ಪೊಲೀಸರು ಬಂಧಿಸಲು ಹೋದಾಗ ನನ್ನ ವಾಹನದಲ್ಲಿ ಬರುತ್ತೀನಿ ಎಂದಿದ್ದು ಇನ್ನೂ ಕೆಲವು ದೃಶ್ಯಗಳು ಎಪಿಸೋಡ್ ನಲ್ಲಿವೆ. ಪಲೆಪಿಸೋಡ್ ನಲ್ಲಿ ದೇವ (ದರ್ಶನ್ ಪಾತ್ರ) ಅಪರಾಧಿ ಎಂಬಂತೆ ಚಿತ್ರಿಸಲಾಗಿದೆ.

ದೇವ (ದರ್ಶನ್ ಪಾತ್ರ) ಅಪರಾಧಿ ಎಂದು ಭಾವಿಸಿ ಹೇಳುವ‌ಡೈಲಾಗ್ ಗಳು ಸಹ ಎಪಿಸೋಡ್ ನಲ್ಲಿವೆ. ‘ನಿನ್ನ ಟೈಮ್‌ ಚೆನ್ನಾಗಿದ್ದಾಗ್ಲೇ ನೀನು ತಗ್ಗಿ ಬಗ್ಗಿ ನಡೆದಿದ್ರೆ, ಇವರತ್ತು ತಲೆ ತಗ್ಸೋ ಪರಿಸ್ಥಿತಿ ಬರ್ತಾ ಇರ್ಲಿಲ್ಲ ಅಲ್ವಾ..’ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ತನ್ನ ಬಂಧನದಲ್ಲಿರುವ ದಾಸ್ ಗೆ ಹೇಳುವ ಸಂಭಾಷಣೆ ಇದೆ. ಮತ್ತೊಂದು ಪಾತ್ರ ‘ದಾಸು ಹಾಗೂ ಅಕ್ಕ ಮೊದಲು ತುಂಬಾ ಚೆನ್ನಾಗಿದ್ರು, ಅವರ ಜೀವ್ನದಲ್ಲಿ ನಟಿ ಬಂದ್ಮೇಲೆನೇ ಹೀಗಾಗಿದ್ದು..’ ಎಂಬ ಸಂಭಾಷಣೆಯೂ ಇದೆ‌.

ದೇವ ಹೆಸರಿನ ಪಾತ್ರಧಾರಿ ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಇನ್ನೆರಡು ದಿನದಲ್ಲಿ ಅವನು ನನ್ನ ಕಣ್ಣಮುಂದೆ ಇರಲಿಲ್ಲ ಎಂದರೆ ನೀನು ಭೂಮಿ ಮೇಲಿರಲ್ಲ ಎಂದು ಬೆದರಿಕೆ ಹಾಕುವ ಸಂಭಾಷಣೆಯೂ ಇದೆ. ಆದರೆ ಈ ಶೋನಲ್ಲಿ ದೇವನನ್ನು ನಟನಾಗಿ ಅಲ್ಲದೆ ಉದ್ಯಮಿಯಾಗಿ ತೋರಿಸಲಾಗಿದೆ.

ಪ್ರಸಾರವಾಗಲಿರುವ ಎಪಿಸೋಡ್ ದರ್ಶನ್ ಅವರನ್ನು ಅಪರಾಧಿಯೆಂದೇ ಬಿಂಬಿಸುವ ಪ್ರಯತ್ನ ಮಾಡಿರುವುದು ಸ್ಪಷ್ಟ. ಈ ಎಪಿಸೋಡ್ ವಿರುದ್ಧ ವಕೀಲರು ನ್ಯಾಯಾಲಯದಲ್ಲಿ ತಡೆಗೆ ಯತ್ನಿಸುವ ಸಾಧ್ಯತೆ ಇದೆ. ದರ್ಶನ್ ಅಭಿಮಾನಿಗಳೂ ಸಹ ಪ್ರತಿಭಟಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here