Darshan: ದರ್ಶನ್ ಅಭಿಮಾನಿಗಳಿಂದ ಅನುಚಿತ ವರ್ತನೆ, ಮತ್ತೆ ಎಚ್ಚರಿಕೆ ಕೊಟ್ಟ ಪ್ರಥಮ್

0
95
Darshan-Pratham

Darshan

ಒಳ್ಳೆ ಹುಡ್ಗ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಮತ್ತೊಮ್ಮೆ ಕಿರಿಕ್ ನಡೆದಿದೆ. ದರ್ಶನ್ ಜೈಲು ಪಾಲಾದ ಹೊತರಲ್ಲಿ, ಪ್ರಥಮ್, ದರ್ಶನ್ ಅಭಿಮಾನಿಗಳ‌ ಹುಚ್ಚಾಟ, ಅತಿರೇಕದ ವರ್ತನೆಗಳನ್ನು ಟೀಕೆ ಮಾಡಿದ್ದರು. ಆಗಿನಿಂದಲೂ ದರ್ಶನ್ ಅಭಿಮಾನಿಗಳು, ಪ್ರಥಮ್ ಅನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈಗ ಮತ್ತೊಮ್ಮೆ ಪ್ರಥಮ್ ಜೊತೆ ಅನುಚಿತವಾಗಿ‌ ವರ್ತನೆ ಮಾಡಿದ್ದಾರೆ.

ಪ್ರಥಮ್ ಟ್ವೀಟ್ ಮಾಡಿರುವಂತೆ, ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಗೆಳಯರೊಟ್ಟಿಗೆ ಊಟಕ್ಕೆ ಹೋಗಿದ್ದರಂತೆ ಪ್ರಥಮ್. ಆಗ ಅಲ್ಲಿಗೆ ಬಂದ ದರ್ಶನ್ ಅಭಿಮಾನಿಗಳು ಬಂದು, ಬಲವಂತ ಮಾಡಿ ಡಿ ಬಾಸ್’ಗೆ ಜೈ ಎಂದು ಕೂಗಲು ಹೇಳಿದರು. ಅಶ್ಲೀಲ‌ ಪದ ಬಳಕೆ ಮಾಡಿದರು. ಹೋಟೆಲ್’ನಲ್ಲಿ ಗಲಾಟೆ ಮಾಡಿದರು. ಅಲ್ಲಿದ್ದ ಬೌನ್ಸರ್’ಗಳು ದರ್ಶನ್’ರ ಗೂಂಡಾಗಳನ್ನು ಹೊರಗೆ ಎಳೆದು ಹಾಕಿದರು. ಆ ನಂತರ ಕ್ಷಮೆ ಕೇಳಿದರು ಬಿಟ್ಟು ಕಳಿಸಿದ್ದೀನಿ’ ಎಂದಿದ್ದಾರೆ.

ಹೋಟೆಲ್ ಸಿಬ್ಬಂದಿ ಮತ್ತು ಅಲ್ಲಿನ ಮ್ಯಾನೇಜರ್ ಮನವಿ ಮಾಡಿದರು ಅಂತ ಕಂಪ್ಲೆಂಟ್ ಕೊಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ನಮ್ಮ ಪಾಡಿಗೆ ನಾವಿದ್ದೀವಿ, ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಪಾಲಿಗೆ ದರ್ಶನ್ ಇದ್ದಾರೆ. ಆದರೆ ಮಿನಿ ಗುಂಡಾಗಳ ನಿಗರಾಟ ನೋಡೋಕಾಗಲ್ಲ. ಹೋಟೆಲ್’ನಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ, ಅದರಲ್ಲಿ ಎಲ್ಲ ರೆಕಾರ್ಡ್ ಆಗಿದೆ. ಬಲವಂತವಾಗಿ ಡಿಬಾಸ್ ಜೈ ಅನ್ಸೋದು, ಅಶ್ಲೀಲ ಪದ ಬಳಸೋದು, ನಾನು ಒಂದು ಕಂಪ್ಲೆಂಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತೆ. ಮೈಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ’ ಎಂದಿದ್ದಾರೆ ಪ್ರಥಮ್.

Darshan: ದರ್ಶನ್ ಚಿತ್ರಗಳ ಸೋರಿಕೆ ಹಿಂದೆ ಸರ್ಕಾರದ ಕೈವಾಡ?

ಇದು ಎರಡನೇ ಬಾರಿ ಹೀಗೆ ಆಗ್ತಿರೋದು, ನಾನು ಒಂದು ಕಂಪ್ಲೆಂಟ್ ಕೊಟ್ರೆ ಜೈಲು ಕೇಸು ಅಂತ ಅಲೀಬೇಕಾಗುತ್ತೆ. ಅಲ್ಲಿದ್ದ ನಾಲ್ಕು ಪುಡಿ ರೌಡಿಗಳ ಫ್ಯಾಮಿಲಿ‌ ನೆನಪಿಸಿಕೊಂಡು ಸುಮ್ನಿದ್ದೀನಿ. ಕಿರುಚಾಡಿದ ವಿಡಿಯೋ ನನ್ನೊಂದಿಗೆ ತಪ್ಪಾಗಿ ನಡೆದುಕೊಂಡಿದ್ದು ಎಲ್ಲವೂ ರೆಕಾರ್ಡ್ ಆಗಿದೆ. ನನ್ನ ಬಳಿ ವಿಡಿಯೋ ಸಹ ಇದೆ. ಸುಮ್ಮನೆ ಮುಚ್ಕೊಂಡು ಇರೋಕೆ ಏನ್ರೋ ಕಷ್ಟ. ಸುಂದರವಾದ ಬದುಕನ್ನು ಯಾಕೆ ಹಾಳು ಮಾಡ್ಕೊತ್ತೀರ’ ಎಂದಿದ್ದಾರೆ ಪ್ರಥಮ್.

ಈ ಹಿಂದೆಯೂ ಸಹ ಪ್ರಥಮ್ ಜೊತೆ ಕೆಲ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಂಡಿದ್ದರು. ಆಗ ಪ್ರಥಮ್ ಪೊಲೀಸ್ ದೂರು ನೀಡಿದ್ದರು. ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು. ಕೆಲವರು ಪ್ರಥಮ್ ಬಳಿ ಕ್ಷಮೆ ಕೇಳಿದ್ದರು ಸಹ.

LEAVE A REPLY

Please enter your comment!
Please enter your name here