Darshan Thoogudeepa case: ನ್ಯಾಯಾಲಯದಲ್ಲಿ ಇಂದು ನಡೆದ ವಾದಗಳೇನು?

0
152
Darshan Thoogudeepa case

Darshan Thoogudeepa case

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದವರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು (ಜೂನ್ 20) ದರ್ಶನ್, ಪವಿತ್ರಾ ಸೇರಿದಂತೆ 14 ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯ್ತು. ಪವಿತ್ರಾ ಸೇರಿದಂತೆ ಹತ್ತು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಯ್ತು. ದರ್ಶನ್ ಸೇರಿದಂತೆ ನಾಲ್ಕು ಆರೋಪಿಗಳನ್ನು ಪುನಃ ಪೊಲೀಸ್ ಕಸ್ಟಡಿಗೆ ನೀಡಲಾಯ್ತು.

ದರ್ಶನ್ ಸೇರಿದಂತೆ ನಾಲ್ಕು ಆರೋಪಿಗಳನ್ನು ಪುನಃ ಕಸ್ಟಡಿಗೆ ಪಡೆಯಲು ಪೊಲೀಸರು ಕೆಲವು ಕಾರಣಗಳು ನೀಡಿದರು. ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಲಭಿಸಿದ್ದು ಅದರ ಆಧಾರದ ಮೇಲೆ ದರ್ಶನ್ ವಿಚಾರಣೆ ನಡೆಸಬೇಕಿದೆ ಎಂದರು. ಅಲ್ಲದೆ ರೇಣುಕಾ ಸ್ವಾಮಿ ಶವ ವಿಲೇವಾರಿಗೆ ನೀಡಿದೆ ಎನ್ನಲಾದ 37 ಲಕ್ಷ ಹಣ ಬಂದಿದ್ದು ಎಲ್ಲಿಂದ ಎಂಬುದು ಸಹ ತನಿಖೆ ಆಗಬೇಕಾಗಿರುವ ದರ್ಶನ್ ಅನ್ನು ನಾಲ್ಕು ದಿನ ವಶಕ್ಕೆ ಕೇಳಲಾಯ್ತು ಆದರೆ ಪೊಲೀಸರು ಎರಡು ದಿನ ನೀಡಿದರು.

https://samasthanews.com/darshan-case-what-all-happened-on-june-14-here-is-the-detail-report/

ರೇಣುಕಾ ಸ್ವಾಮಿಯ ಮೊಬೈಲ್‌ ಎಸೆದಿರುವ ಧನರಾಜ್, ತನಿಖೆಗೆ ಸಹಕರಿಸುತ್ತಿಲ್ಲವೆಂದು ಆತನನ್ನು ವಶಕ್ಕೆ ಪಡೆಯಲು ಕೇಳಲಾಯ್ತು. ಇನ್ನು ಪ್ರದೋಶ್ ಹಾಗೂ ವಿನಯ್ ಅವರುಗಳನ್ನು 37 ಲಕ್ಷ ಹಣದ ಮೂಲ‌ ಪತ್ತೆ ಹಚ್ಚಲು ವಶಕ್ಕೆ ಕೇಳಲಾಯ್ತು.

ದರ್ಶನ್ ಪರ ವಕೀಲರು, ಪೊಲೀಸ್ ಕಸ್ಟಡಿಗೆ ವಿರೋಧಿಸಿ, ಪೊಲೀಸರು ರಿಮ್ಯಾಂಡ್ ಅಪ್ಲಿಕೇಶನ್ ಅನ್ನು ವಕೀಲರಿಗೆ ನೀಡಿಲ್ಲ. ಕಾರಣ ನೀಡದ ಬಂಧನ ಅಕ್ರಮ ಎಂದು ನ್ಯೂಸ್ ಕ್ಲಿಕ್ ವೆಬ್ ಸೈಟ್ ಮಾಲೀಕನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಉಲ್ಲೇಖಿಸಿ ವಾದಿಸಿದರು.

ಅಲ್ಲದೆ ಇಷ್ಟು ದಿನ ಸಾಂಧರ್ಭಿಕ ಸಾಕ್ಷ್ಯಗಳ ಮೇಲೆ ತನಿಖೆ ನಡೆಸುತ್ತಿದ್ದ ಪೊಲೀಸರು ಈಗ ಪ್ರತ್ಯಕ್ಷ ಸಾಕ್ಷಿಗಳ ಬಗ್ಗೆ ವಿವರ ನೀಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಮತ್ತು ಹೈಕೋರ್ಟ್ ನಲ್ಲಿ ಈ ಬಗ್ಗೆ ರಿಟ್ ಸಲ್ಲಿಸುವುದಾಗಿ ಮಾಧ್ಯಮಗಳ ಮುಂದೆ ಹೇಳಿದರು.

ಒಟ್ಟಾರೆ ದರ್ಶನ್, ಧನರಾಜ್, ವಿನಯ್ ಹಾಗೂ ಪ್ರದೋಶ್ ಅವರುಗಳು ಜೂನ್ 22 ರ ವರೆಗೆ ಪೊಲಿಒಸ್ ಕಸ್ಟಡಿಯಲ್ಲಿಯೇ ಸಮಯ ಕಳೆಯಬೇಕಿದೆ. ಅದಾದ ಬಳಿಕ ನ್ಯಾಯಾಂಗ ಬಂಧನವಾಗಲಿದೆ.

LEAVE A REPLY

Please enter your comment!
Please enter your name here