Darshan Thoogudeepa: ದರ್ಶನ್’ಗೆ ಇಂದು ಜಾಮೀನು ಪಕ್ಕಾ, ಆದರೆ ಇದರ ಕೆಲವು ಸಮಸ್ಯೆ

0
126
Darshan Thoogudeepa

Darshan Thoogudeepa

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳಿಂದಲೂ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್’ಗೆ ನಾಳೆ (ಅಕ್ಟೋಬರ್ 29) ಸಿಹಿ ಸುದ್ದಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಕೆಳ ಹಂತದ ನ್ಯಾಯಾಲಯದಲ್ಲಿ ದರ್ಶನ್’ಗೆ ಸಿಗದೇ ಇದ್ದ ಜಾಮೀನು ಈಗ ಹೈಕೋರ್ಟ್ ನಲ್ಲಿ ಸಿಗುವ ಲಕ್ಷಣಗಳು ಇಂದು ಗೋಚರಿಸಿವೆ. ಆದರೆ ಇಂದು ದರ್ಶನ್’ಗೆ ಜಾಮೀನು ಸಿಕ್ಕರೂ ಸಹ ಕೆಲ ಸಮಸ್ಯೆಗಳು ಕಾಡಲಿವೆ.

ದರ್ಶನ್ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟ ಆಗಲಿದೆ. ಆದರೆ ಇಂದು ಮಧ್ಯಂತರ ಜಾಮೀನು ಮಾತ್ರವೇ ಸಿಗುವ ಸಾಧ್ಯತೆ ಇದೆ‌. ಜೊತೆಗೆ ಸಾಕಷ್ಟು ಷರತ್ತುಗಳನ್ನು ಸಹ ದರ್ಶನ್ ಮೇಲೆ ವಿಧಿಸಲಿದೆ ನ್ಯಾಯಾಲಯ. ದರ್ಶನ್ ಗೆ ಬಹುಷಃ ಬೆಂಗಳೂರಿಗೆ ಬರದಂತೆ ಷರತ್ತು ವಿಧಿಸಬಹುದು, ದರ್ಶನ್ ಮೈಸೂರಿನಲ್ಲಿಯೇ ಬೆನ್ನು ನೋವಿನ ಚಿಕಿತ್ಸೆಗೆ ಒಳಗಾಗಬೇಕಾಗಬಹುದು. ಒದರ ಜೊತೆಗೆ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯ ಕಾವಲು, ಜೊತೆಗೆ ಮೊಬೈಲ್ ಬಳಕೆ ಮೇಲೂ ನಿಯಂತ್ರಣ ಹೇರುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕುವಂತಿಲ್ಲ.

ಇಂದು ನಡೆಯಬಹುದಾದ ಮತ್ತೊಂದು ಸಾಧ್ಯತೆ ಎಂದರೆ. ಇಂದು ನೇರವಾಗಿ ಮಧ್ಯಂತರ ಜಾಮೀನು ನೀಡದೆ ವೈದ್ಯಕೀಯ ಬೋರ್ಡ್ ಒಂದರ ರಚನೆಗೆ ಆದೇಶ ಹೊರಡಿಸಬಹುದು. ಅಂದರೆ ಪೊಲೀಸ್, ವೈದ್ಯಕೀಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ, ಆ ಸಮಿತಿ ದರ್ಶನ್ ರ ಆರೋಗ್ಯ ಸ್ಥಿತಿಯ ಬಗ್ಗೆ ತನಿಖೆ ನಡೆಸಿ, ವರದಿಗಳನ್ನು ಪರಿಶೀಲಿಸಿ ಅವರಿಗೆ ಚಿಕಿತ್ಸೆ ಅವಶ್ಯಕತೆ ಇದೆಯೇ? ಇದ್ದರೆ ಎಷ್ಟು ದಿನಗಳ ಕಾಲ ಚಿಕಿತ್ಸೆ ನೀಡಬೇಕು ಎಂದು ವರದಿ ನೀಡಬೇಕಾಗುತ್ತದೆ. ಇದರ ಆಧಾರದ ಮೇಲೆ ನ್ಯಾಯಾಲಯವು ದರ್ಶನ್’ಗೆ ಎಷ್ಟು ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ನಿರ್ಣಯಿಸಲಿದೆ.

CM Siddaramaiah: ಇದು ಅನ್ಯಾಯ’ ಬಾರ್ ಮಾಲೀಕರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

ಇಂದು ನ್ಯಾಯಾಲಯದಲ್ಲಿ ನಡೆದ ವಾದದಲ್ಲಿ ದರ್ಶನ್ ಪರ ವಕೀಲರು ಮಧ್ಯಂತರ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ. ಅನಾರೋಗ್ಯದ ಕಾರಣಕ್ಕೆ ನೀಡಲಾಗುವ ಮಧ್ಯಂತರ ಜಾಮೀನು ತಾತ್ಕಾಲಿಕವಾಗಿದ್ದು, ಚಿಕಿತ್ಸೆ ಬಳಿಕ ಮತ್ತೆ ಜೈಲಿಗೆ ಮರಳ ಬೇಕಾಗಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇದನ್ನೇ ಆಧಾರವಾಗಿಟ್ಟುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಿ, ಜಾಮೀನು ಪಡೆದುಕೊಳ್ಳುವ ಯೋಚನೆಯೂ ಸಹ ದರ್ಶನ್ ಪರ ವಕೀಲರದ್ದಾಗಿರಬಹುದು.

LEAVE A REPLY

Please enter your comment!
Please enter your name here