Darshan: ಜೈಲಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ನಟ ದರ್ಶನ್, ಜೈಲಾಧಿಕಾರಿಗಳಿಗೆ ತಲೆ ನೋವು
Renuka
Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿ ಆಗಿರುವ ದರ್ಶನ್ ಪರಪ್ಪನ ಜೈಲಿನಲ್ಲಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಕಷ್ಟಪಡುತ್ತಿದ್ದಾರೆ. ಜೈಲಿನ ಊಟ ಸರಿಬಾರದೆ ಭೇದಿ ಸಮಸ್ಯೆ ಎದುರಿಸಿದ್ದ ದರ್ಶನ್, ಜೈಲಿನಲ್ಲಿ ಮಲಗಲು ಸಹ ಸರಿಯಾದ ವ್ಯವಸ್ಥೆ ಇರದ ಕಾರಣ ನಿದ್ರಾಹೀನತೆಯನ್ನೂ ಅನುಭವಿಸಿದ್ದರು. ಅದೇ ಕಾರಣಕ್ಕೆ ತಮಗೆ ಮನೆ ಊಟ ಹಾಗೂ ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಅದರ ವಿಚಾರಣೆ ತಡವಾಗುತ್ತಿದೆ. ಇದರ ಮಧ್ಯೆ ದರ್ಶನ್ ಮತ್ತೆ ಅನಾರೋಗ್ಯಕ್ಕರ ತುತ್ತಾಗಿದ್ದಾರೆ.
ದರ್ಶನ್ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದರ್ಶನ್ ಗೆ ಜ್ವರ ಕಾಡುತ್ತಿದ್ದು, ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜೈಲಿನ ಊಟ ಸರಿ ಹೊಂದದ ಕಾರಣ, ಅಜೀರ್ಣ ಸಮಸ್ಯೆ ಎದುರಿಸಿ ತೂಕ ಕಳೆದುಕೊಂಡಿದ್ದ ದರ್ಶನ್. ಈಗ ಜ್ವರದಿಂದಾಗಿ ಇನ್ನಷ್ಟು ಸುಸ್ತಾಗಿ ಮತ್ತಷ್ಟು ದೇಹ ತೂಕ ಕಳೆದುಕೊಂಡಿದ್ದಾರೆ. ಇದು ಜೈಲಧಿಕಾರಿಗಳಿಗೆ ತಲೆ ನೋವು ತರಿಸಿದೆ. ಜ್ವರದಿಂದ ಬಳಲುತ್ತಿರುವ ದರ್ಶನ್ ಪ್ರಸ್ತುತ ಜೈಲಿನಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಬಂದಿದೆ ಎನ್ನಲಾಗುತ್ತಿದೆ.
ಮನೆಯಿಂದ ಊಟ, ಹಾಸಿಗೆ, ಪುಸ್ತಕ ತರಿಸಿಕೊಳ್ಳಲು ಅನುಮತಿಗೆ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ನಿನ್ನೆ (ಜುಲೈ 18) ನಡೆದಿದೆ. ನಿನ್ನೆ ನ್ಯಾಯಾಲಯದಲ್ಲಿ ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣಕುಮಾರ್, ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಹೇಳಿದ್ದಾರೆ. ಅಲ್ಲದೆ, ದರ್ಶನ್ ರೀತಿ ಎಲ್ಲ ಕೈದಿಗಳೂ ಮನೆ ಊಟ ಬೇಕೆಂದು ಕೇಳಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ನಾಳೆಯೇ ಅರ್ಜಿ ಸಲ್ಲಿಸಲು ಅವಕಾಶ ನಿಒಡೊರುವ ವಕೀಲರು ಜುಲೈ 27 ರ ಒಳಗೆ ಅರ್ಜಿ ಇತ್ಯರ್ಥ ಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿದ್ದಾರೆ.
ಸೆಕ್ಷನ್ 30 ರ ಅಡಿಯಲ್ಲಿ ವಿಚಾರಣಾಧೀನ ಕೈದಿಗೆ ಮನೆ ಊಟ ತರಿಸಿಕೊಳ್ಳುವ ಅಧಿಕಾರ ಇದೆ ಎಂದು ದರ್ಶನ್ ಪರ ನ್ಯಾಯಾಧೀಶರು ವಾದಿಸಿದರು. ಅಲ್ಲದೆ ಜೈಲು ನಿಯಮದಲ್ಲಿಯೂ ಇದಕ್ಕೆ ಅವಕಾಶವಿದೆ ಎಂದರು. ಹಾಗಿದ್ದರೆ ಇದು ಎಲ್ಲ ಕೈದಿಗಳ ಹಕ್ಕಾಗಿ ಬಿಡುತ್ತದೆ. ಊಟ ತರಿಸಿಕೊಳ್ಳುವುದು ಆರೋಪಿಯ ಹಕ್ಕು ಎನ್ನುವುದಾದರೆ ಅದರ ವಿಚಾರಣೆಗೆ ಬಹಳ ಸಮಯ ಹಿಡಿಯುತ್ತದೆ. ನೀವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿಕೊಂಡು ಆದೇಶ ಪಡೆಯಿರಿ ಎಂದಿದ್ದಾರೆ.