Site icon Samastha News

Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣ ನಾಲ್ಕನೇ ಆರೋಪಿ ರಘು ತಾಯಿ ನಿಧನ

Raghu

ರೇಣುಕಾ ಸ್ವಾಮಿ ಕೊಲೆ ಪ್ರಕರಣ ನಾಲ್ಕನೇ ಆರೋಪಿ ರಘು

Darshan: ರೇಣುಕಾ ಸ್ವಾಮಿ ಕೊಲೆ ಪ್ರಕಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ಇದರಲ್ಲಿ ನಾಲ್ಕನೇ ಆರೋಪಿ ಆಗಿರುವ ರಾಘು ಅವರ ತಾಯಿ ಮಂಜುಳಮ್ಮ (70) ನಿಧನ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೋಳಿ ಬುರಕಟ್ಟಿ ಗ್ರಾಮದವರಾಗಿದ್ದ ಮಂಜುಳಮ್ಮ ಕಳೆದ ಒಂದು ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಗ ರಾಘು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಬಳಿಕ ತಾಯಿ ಮಂಜುಳಮ್ಮ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಮಗ ಬರುವ ನಿರೀಕ್ಷೆಯಲ್ಲಿಯೇ ಕಾಲ ದೂಡುತ್ತಿದ್ದ ಮಂಜುಳಮ್ಮ ಇಂದು (ಜುಲೈ 20) ಮುಂಜಾನೆ ಕೊನೆ ಉಸಿರೆಳೆದಿದ್ದಾರೆ. ಮಂಜುಳಮ್ಮನ ಅಂತ್ಯ ಸಂಸ್ಕಾರಕ್ಕಾದರೂ ರಘು ಅನ್ನು ಕರೆಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಆಗಿದ್ದ ರಘು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗುತ್ತಿರುವ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಮಾತ್ರವಲ್ಲದೆ ರೇಣುಕಾ ಸ್ವಾಮಿ ಶವ ವಿಲೇವಾರಿಯಲ್ಲಿಯೂ ರಘು ಪ್ರಮುಖ ಪಾತ್ರ ವಹಿಸಿದ್ದ. ರೇಣುಕಾ ಸ್ವಾಮಿ ಮೈಮೇಲಿದ್ದ ಚಿನ್ನವನ್ನೂ ಸಹ ಕದ್ದು ಪತ್ನಿಯ ಕೈಗೆ ಕೊಟ್ಟಿದ್ದ ಎನ್ನಲಾಗಿದೆ.

Darshan: ಜೈಲಿನಲ್ಲಿ‌ ದರ್ಶನ್ ತಲೆ ಬೋಳಿಸಲಾಗಿದೆಯೇ? ಸತ್ಯಾಂಶವೇನು?

ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಘು, ತಾಯಿಯ ಅಂತ್ಯ ಸಂಸ್ಕಾರಕ್ಕೆ ಪರೋಲ್‌ ಮೇಲೆ ಬಂದು ಹೋಗುವ ಸಾಧ್ಯತೆ ಇದೆ‌. ಈ ಹಿಂದೆ ಇದೇ ಪ್ರಕರಣದ ಆರೋಪಿ ಆಗಿರುವ ಅನು ಅವರ ತಂದೆಯೂ ಸಹ ಜೂನ್ 17 ರಂದು ನಿಧನ ಹೊಂದಿದ್ದರು. ಮಗ ಜೈಲು ಸೇರಿದ ಆಘಾತದಲ್ಲಿ ಅವರು ನಿಧನ ಹೊಂದಿದ್ದರು. ಪೊಲೀಸ್ ವಶದಲ್ಲಿದ್ದ ಅನು, ಪೊಲೀಸರ ನಿಗಾವಣೆಯಲ್ಲಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗದ ‌ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಕಳೆದ ತಿಂಗಳು 11 ನೇ ತಾರೀಖಿನಂದು ಪೊಲೀಸರು ದರ್ಶನ್, ಪವಿತ್ರಾ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ. ರೇಣುಕಾ ಸ್ವಾಮಿ, ದರ್ಶನ್ ರ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ‌ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬಂದು, ಬೆಂಗಳೂರಿನ‌ ಪಟ್ಟಣಗೆರೆ ಶೆಡ್ ನಲ್ಲಿ‌ ಒಟ್ಟು ಹಲವು ಜನ ಸೇರಿ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಯ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಸಹ ಯತ್ನಿಸಿದ್ದು, ರಘು ಸೇರಿದಂತೆ ಇನ್ನೂ ಮೂವರಿಗೆ ಲಕ್ಷಾಂತರ ರೂಪಾಯಿ ಹಣ ಸಹ ನೀಡಲಾಗಿದೆ.

Exit mobile version