Darshan: ರೇಣುಕಾ ಸ್ವಾಮಿ ಕೊಲೆ ಪ್ರಕಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ಇದರಲ್ಲಿ ನಾಲ್ಕನೇ ಆರೋಪಿ ಆಗಿರುವ ರಾಘು ಅವರ ತಾಯಿ ಮಂಜುಳಮ್ಮ (70) ನಿಧನ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೋಳಿ ಬುರಕಟ್ಟಿ ಗ್ರಾಮದವರಾಗಿದ್ದ ಮಂಜುಳಮ್ಮ ಕಳೆದ ಒಂದು ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು.
ಮಗ ರಾಘು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಬಳಿಕ ತಾಯಿ ಮಂಜುಳಮ್ಮ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಮಗ ಬರುವ ನಿರೀಕ್ಷೆಯಲ್ಲಿಯೇ ಕಾಲ ದೂಡುತ್ತಿದ್ದ ಮಂಜುಳಮ್ಮ ಇಂದು (ಜುಲೈ 20) ಮುಂಜಾನೆ ಕೊನೆ ಉಸಿರೆಳೆದಿದ್ದಾರೆ. ಮಂಜುಳಮ್ಮನ ಅಂತ್ಯ ಸಂಸ್ಕಾರಕ್ಕಾದರೂ ರಘು ಅನ್ನು ಕರೆಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಆಗಿದ್ದ ರಘು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗುತ್ತಿರುವ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಮಾತ್ರವಲ್ಲದೆ ರೇಣುಕಾ ಸ್ವಾಮಿ ಶವ ವಿಲೇವಾರಿಯಲ್ಲಿಯೂ ರಘು ಪ್ರಮುಖ ಪಾತ್ರ ವಹಿಸಿದ್ದ. ರೇಣುಕಾ ಸ್ವಾಮಿ ಮೈಮೇಲಿದ್ದ ಚಿನ್ನವನ್ನೂ ಸಹ ಕದ್ದು ಪತ್ನಿಯ ಕೈಗೆ ಕೊಟ್ಟಿದ್ದ ಎನ್ನಲಾಗಿದೆ.
Darshan: ಜೈಲಿನಲ್ಲಿ ದರ್ಶನ್ ತಲೆ ಬೋಳಿಸಲಾಗಿದೆಯೇ? ಸತ್ಯಾಂಶವೇನು?