Darshan Thoogudeepa
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನರ ನ್ಯಾಯಾಂಗ ಬಂಧನ ಅವಧಿ ನಾಳೆ ಅಂದರೆ ಜುಲೈ 4 ಕ್ಕೆ ಮುಕ್ತಾಯ ಆಗಲಿದೆ. ಪರಪ್ಪರ ಅಗ್ರಹಾರದಲ್ಲಿ ದಿನ ಕಳೆಯುತ್ತಿರುವ ದರ್ಶನ್ ನಾಳೆ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎನ್ನಲಾಗಿತ್ತು. ಆದರೆ ದರ್ಶನ್ ಸೇರಿದಂತೆ ಯಾವ ಆರೋಪಿಗಳು ಸಹ ನ್ಯಾಯಾಲಯಕ್ಕೆ ಬರುತ್ತಿಲ್ಲ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪವಿತ್ರಾ ಗೌಡ ಪರ ವಕೀಲರು, ನಾಳೆ ಯಾವುದೇ ಆರೋಪಿಗಳು ನ್ಯಾಯಾಲಯಕ್ಕೆ ಬರುವುದಿಲ್ಲ. ಅವಶ್ಯಕತೆ ಬಿದ್ದರೆ ವಿಡಿಗೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ.
https://samasthanews.com/renuka-swamy-did-more-than-200-messages-to-pavithra-gowda/
ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರವಾಗಿ ಮಾತನಾಡೊರುವ ವಕೀಲ, ’15 ದಿನಗಳ ಬಳಿಕ ನಾವು ಜಾಮೀನಿಗೆ ಅರ್ಜಿ ಹಾಕಲಿದ್ದೇವೆ ಎಂದಿದ್ದಾರೆ. ಪವಿತ್ರಾ ಗೌಡ, ದರ್ಶನ್ ಎಲ್ಲರೂ ಬಹಳ ನೊಂದಿದ್ದಾರೆ. ಆದಷ್ಟು ಬೇಗ ಎಲ್ಲರೂ ಜೈಲಿನಿಂದ ಹೊರಗೆ ಬರಲಿದ್ದಾರೆ. ದರ್ಶನ್ ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದಿದ್ದಾರೆ.
ನಿನ್ಮೆಯಷ್ಟೆ ದರ್ಶನ್ ರ ತಾಯಿ ಹಾಗೂ ತಮ್ಮ ದಿನಕರ್ ದರ್ಶನ್ ರನ್ನು ಕಾಣಲು ಜೈಲಿಗೆ ಆಗಮಿಸಿದ್ದರು. ಧನ್ವೀರ್ ಸಹ ಜೈಲಿಗೆ ಬಂದಿದ್ದರಾದರೂ ಅವರನ್ನು ದರ್ಶನ್ ಭೇಟಿ ಆಗಲು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ನಾಳೆಗೆ ದರ್ಶನ್ ಹಾಗೂ ಇನ್ನಿತರೆ ಆರೋಪಿಗಳ ನ್ಯಾಯಾಂಗ ಬಂಧನ ಅಂತ್ಯವಾಗುತ್ತಿದ್ದು, ಕೆಲವರಿಗೆ ನಾಳೆ ಬಿಡುಗಡೆ ದೊರಕುವ ಸಾಧ್ಯತೆ ಇದೆ. ಆದರೆ ದರ್ಶನ್, ಪವಿತ್ರಾ ಗೌಡ ಹಾಗೂ ಕೆಲವು ಮುಖ್ಯ ಆರೋಪಿಗಳಿಗೆ ನ್ಯಾಯಮಗ ಬಂಧನ ಇನ್ನೂ 14 ದಿನ ವಿಸ್ತರಣೆ ಆಗುವ ಸಾಧ್ಯತೆ ಇದೆ.