Devanahalli: ದೇಶದ ಕಣ್ಣು ದೇವನಹಳ್ಳಿ ಮೇಲೆ, ಆಗಲಿರುವ ಬದಲಾವಣೆಗಳೇನು?

0
38
Devanahalli

Devanahalli

ಈಗ ದೇಶದ ಕಣ್ಣು ದೇವನಹಳ್ಳಿಯ ಮೇಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೇವನಹಳ್ಳಿ, ದೇಶ ಮಾತ್ರವಲ್ಲ ವಿದೇಶದಿಂದಲೂ ಬಂಡವಾಳ ಹೂಡಿಕೆದಾರರನ್ನು ಸೆಳೆಯುತ್ತಿದೆ. ಬೆಂಗಳೂರು ನಗರ ಈಗಾಗಲೇ ಗಿಜಿಗುಡುತ್ತಿದ್ದು, ಕಂಪೆನಿಗಳು ಹೊರಹೋಗಲು ಮಾರ್ಗವೊಂದನ್ನು ಹುಡುಕುತ್ತಿವೆ, ಅವುಗಳಿಗೆ ಅನುಕೂಲಕರವಾಗಿ ಕಾಣುತ್ತಿರುವುದು ದೇವನಹಳ್ಳಿ. ವಿಮಾನ ನಿಲ್ದಾಣ, ಅತ್ಯುತ್ತಮ ಕೂಡು ರಸ್ತೆಗಳು, ಸ್ಯಾಟಲೈಟ್ ರಿಂಗ್ ರೋಡ್, ರೈಲ್ವೆ ವ್ಯವಸ್ಥೆ ಎಲ್ಲವನ್ನೂ ಒಳಗೊಂಡಿರುವ ದೇವನಹಳ್ಳಿ ದೇಶದ ಪ್ರಮುಖ ಹೂಡಿಕೆದಾರರಿಗೆ, ಐಟಿ ಕಂಪೆನಿಗಳಿಗೆ ಅವಕಾಶಗಳ ನಗರವಾಗಿ ಕಾಣುತ್ತಿದೆ.

ಈಗಾಗಲೇ ಕೆಲವು ಐಟಿ ಪಾರ್ಟ್​ಗಳು ದೇವನಹಳ್ಳಿ ಹಾಗೂ ಅದರ ಸುತ್ತ-ಮುತ್ತ ನೆಲೆಯೂರಲು ಆರಂಭಿಸಿವೆ. ದೆಹಲಿ ಬಳಿಯ ಗುರುಗ್ರಾಮ ಹೇಗೆ ಐಟಿ ಹಬ್ ಆಗಿದೆಯೋ ಅದೇ ರೀತಿ ಇನ್ನು ಕೆಲವೇ ವರ್ಷಗಳಲ್ಲಿ ದೇವನಹಳ್ಳಿಯೂ ಬದಲಾವಣೆ ಆಗಲಿದೆ ಎನ್ನುತ್ತಿವೆ ಕೆಲ ವರದಿಗಳು. ಅದಕ್ಕೆ ಸಾಕ್ಷಿ ಎಂಬಂತೆ ದೇವನಹಳ್ಳಿಯ ರಿಯಲ್ ಎಸ್ಟೇಟ್ ಮೌಲ್ಯ ವರ್ಷದಿಂ ವರ್ಷಕ್ಕೆ ಏರಿಕೆ ಆಗುತ್ತಲೇ ಸಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ದೇವನಹಳ್ಳಿ ಕಂಡಿರುವ ಪ್ರಗತಿಯನ್ನು ಇನ್ನು ಐದೇ ವರ್ಷದಲ್ಲಿ ಕಾಣಲಿದೆ, ಆ ಮೂಲಕ ದುಪ್ಪಟ್ಟು ವೇಗದಲ್ಲಿ ದೇವನಹಳ್ಳಿ ಬೆಳೆಯಲಿದೆಯಂತೆ.

ಕೇವಲ ಎರಡು ವರ್ಷಗಳಲ್ಲಿ ದೇವನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಮೌಲ್ಯ 15-20% ಹೆಚ್ಚಾಗಿದೆ. ಆರು ವರ್ಷಗಳಲ್ಲಿ ಶೇಕಡ 50% ಹೆಚ್ಚಾಗಿದೆ. ಪ್ರತಿ ವರ್ಷ 8-10% ಏರಿಕೆ ಕಾಣುತ್ತಿದೆ ಇಲ್ಲಿನ ರಿಯಲ್ ಎಸ್ಟೇಟ್ ಮೌಲ್ಯ. ಪ್ರಸ್ತುತ ಕರ್ನಾಟಕದಲ್ಲಿ, ರಿಯಲ್ ಎಸ್ಟೇಟ್ ಅತ್ಯಂತ ವೇಗವಾಗಿ ಏರಿಕೆ ಕಾಣುತ್ತಿರುವ ಪಟ್ಟಣವೆಂದರೆ ಅದು ದೇವನಹಳ್ಳಿ ಎನ್ನುತ್ತಾರೆ ಕ್ರೆಡಾಯ್ ಸಂಸ್ಥೆಯ ಮೈಸೂರು ಅಧ್ಯಕ್ಷ ಅಮರ್.

ದೇವನಹಳ್ಳಿಯಲ್ಲಿ ಅಪಾರ್ಟ್​ಮೆಂಟ್ ಬೇಡಿಕೆ ಏರಿಕೆಯಲ್ಲಿದ್ದು, ಪ್ಲಾಟ್ ಬೆಲೆಗಳು ಚದರ ಅಡಿಗೆ 5 ರಿಂದ ಏಳು ಸಾವಿರಕ್ಕೆ ನಡೆಯುತ್ತಿವೆ. ಕೆಲವೆಡೆ ಇನ್ನೂ ಹೆಚ್ಚಿದೆ. ಗೋದ್ರೆಜ್, ಸತ್ವ ಭೂಮಿ, ಬ್ರಿಗೇಡ್ ಆರ್ಕೆಡ್ ಇನ್ನೂ ಕೆಲವು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಗಳು ಈಗಾಗಲೇ ದೇವನಹಳ್ಳಿಯಲ್ಲಿ ಹೂಡಿಕೆ ಮಾಡಿದ್ದು, ಅಪಾರ್ಟ್​ಮೆಂಟ್ ಮಾರಾಟ ಮಾಡುತ್ತಿವೆ. ಅನಾರ್ಕೊ (ANAROCK) ಮಾಹಿತಿಯ ಪ್ರಕಾರ ದೇವನಹಳ್ಳಿಯ ರಿಯಲ್ ಎಸ್ಟೇಟ್ ಕಳೆದ ಆರು ವರ್ಷಗಳಲ್ಲಿ 49% ಏರಿಕೆ ಕಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ 50% ಏರಿಕೆ ಕಾಣಲಿದೆಯಂತೆ. ದೇವನಹಳ್ಳಿಯಲ್ಲಿ ನಿರ್ಮಿಸಿ ಮಾರಾಟ ಮಾಡಲಾಗುತ್ತಿರುವ ಹೊಸ ಅಪಾರ್ಟ್​ಮೆಂಟ್ ಬೆಲೆಗಳು ಸಹ ಗಗನಕ್ಕೆ ಏರಿದ್ದು, ಒಂದು ಕೋಟಿಯಿಂದ 5 ಕೋಟಿ ವರೆಗಿನ ಫ್ಲ್ಯಾಟ್​ಗಳನ್ನು ಮಾರಾಟ ಮಾಡಲಾಗುತ್ತಿವೆ.

Toll Price: ಗಮನಿಸಿ: ಹೆಚ್ಚಾಗಲಿದೆ ದೇವನಹಳ್ಳಿ ಟೋಲ್ ದರ

ಇನ್ನು ರಾಜ್ಯ ಸರ್ಕಾರ ಸಹ ದೇವನಹಳ್ಳಿಯನ್ನು ಹೂಡಿಕೆ ಪ್ರದೇಶವಾಗಿ ಗುರುತಿಸಿದ್ದು ದೇವನಹಳ್ಳಿಗೆ ಸಮೀಪದಲ್ಲಿರುವ ಜಂಗಮಕೋಟೆಯಲ್ಲಿ ಡೀಪ್ ಟೆಕ್ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ. ಆಪಲ್ ಮ್ಯಾನುಫ್ಯಾಕ್ಚರ್ ಯುನಿಟ್ ಸಹ ದೇವನಹಳ್ಳಿಯ ಸಮೀಪ ಸ್ಥಾಪನೆಗೊಳ್ಳುತ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಬಹುತೇಕ ನಿರ್ಮಾಣವಾಗಿದೆ. ದೇವನಹಳ್ಳಿ ಮಾತ್ರವೇ ಅಲ್ಲದೆ ದೇವನಹಳ್ಳಿ ಕೇಂದ್ರದಿಂದ 25 ಕಿ.ಮೀ ಮಿತಿಯಲ್ಲಿ ಸಾಕಷ್ಟು ಪ್ರಗತಿ ಆಗಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here