Site icon Samastha News

Darshan Thoogudeepa: ದರ್ಶನ್ ಸಹೋದರ ದಿನಕರ್ ನಿಜಕ್ಕೂ ಬಾಡಿಗೆ ಮನೆಯಲ್ಲಿದ್ದಾರೆಯೇ?

Darshan Thoogudeepa

Darshan Thoogudeepa

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಕುರಿತು ಹಲವರು ಹಲವು ರೀತಿ ಮಾತನಾಡಿದ್ದಾರೆ. ಅದರಲ್ಲಿ ಕೆಲವು ಸತ್ಯಗಳಿದ್ದರೆ ಕೆಲವು ಸುಳ್ಳುಗಳು ಸಹ ಇವೆ. ದರ್ಶನ್ ತೂಗುದೀಪ ಅವರು ಸಹೋದರ ದಿನಕರ್ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ. ಅಮ್ಮನ ಜೊತೆಗೂ ಜಗಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ದರ್ಶನ್ ಇಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಸಹ ಅವರ ತಮ್ಮ ದಿನಕರ್ ತೂಗುದೀಪ ಈಗಲೂ ಒಂದು ಬೆಡ್ ರೂಂನ ಮನೆಯಲ್ಲಿ ಬಾಡಿಗೆಗಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಈ ಸುದ್ದಿ ಹರಿದಾಡಲು ದಿನಕರ್ ತೂಗುದೀಪ ಅವರ ಹಳೆಯ ವಿಡಿಯೋ ಕಾರಣ. ಆ ವಿಡಿಯೋನಲ್ಲಿ ಸ್ವತಃ ದಿನಕರ್ ತೂಗುದೀಪ ಅವರು ತಾವು ಬಾಡಿಗೆ ಮನೆಯಲ್ಲಿ ವಾಸವಿರುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಮಾಧ್ಯಮಗಳ ಬಳಿ ಮಾತನಾಡಿರುವ ದರ್ಶನ್ ರ ಆಪ್ತರಲ್ಲಿ ಒಬ್ಬರಾದ ನಿರ್ದೇಶಕ ವಾಸು, ಇದರ ಹಿಂದಿನ ನಿಜವೇನು ಎಂದು ಹೇಳಿದ್ದಾರೆ.

https://samasthanews.com/vijayalakshmi-darshan-thoogudeepa-message-to-darshan-fans/

ದಿನಕರ್ ತೂಗುದೀಪ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದು ನಿಜ ಆದರೆ ಅದು ಸಿಂಗಲ್ ಬೆಡ್ ರೂಂ ಮನೆ ಅಲ್ಲ ಬದಲಿಗೆ ಡಬಲ್ ಬೆಡ್ ರೂಂ ಮನೆ, ಹಾಗೂ ಆ ಮನೆ ಸಾಮಾನ್ಯ ಮನೆಯೇನಲ್ಲ, ಒಳ್ಳೆಯ ಮನೆಯೇ. ದಿನಕರ್ ಸ್ವಂತ ಮನೆ ಕಟ್ಟಿಸಿಕೊಳ್ಳದೆ ಇರಬಹುದು, ಆದರೆ ಕೆಲವು ಒಳ್ಳೆಯ ಆಸ್ತಿಗಳನ್ನು ಅವರು ಹೊಂದಿದ್ದಾರೆ ಎಂದಿದ್ದಾರೆ ವಾಸು.

ಕೆಎಲ್ ಇ ಕಾಲೇಜಿನ ಬಳಿ ದಿನಕರ್ ಸೈಟ್ ಇದ್ದು ಅಲ್ಲಿ ಮನೆ ಕಟ್ಟಲು ದಿನಕರ್ ತಯಾರಿ ನಡೆಸಿದ್ದಾರೆ. ದಿನಕರ್ ಕಷ್ಟದಲ್ಲಿದ್ದಾರೆ ಎಂದೇನೂ ಇಲ್ಲ. ಅವರಿಗೆ ಸರಳವಾಗಿ ಬದುಕುವುದು ಇಷ್ಟ, ಅವರು ಹಾಗೆಯೇ ಬದುಕುತ್ತಿದ್ದಾರೆ. ಹಣವಿಲ್ಲದೆ ಏನಿಲ್ಲ. ಅಲ್ಲದೆ ಅಣ್ಣ ದರ್ಶನ್ ಜೊತೆಗೆ ಆತ್ಮೀಯ ಬಂಧ ಹೊಂದಿದ್ದಾರೆ ಎಂದಿದ್ದಾರೆ ವಾಸು.

ಅವರ ತಾಯಿ‌ ಮೀನಮ್ಮ ಅವರು ಮೈಸೂರಿನಲ್ಲಿ ವಾಸವಿದ್ದಾರೆ. ಅವರಿಗೆ ತಮ್ಮ ಪತಿ ಕಟ್ಟಿಸಿದ ಮನೆಯಲ್ಲಿರಬೇಕೆಂಬ ಆಸೆ ಇರುವ ಕಾರಣ ಅವರು ಅಲ್ಲಿಯೇ ಇದ್ದಾರೆ. ಅವರೊಂದಿಗೂ ದರ್ಶನ್ ಉತ್ತಮ ಬಾಂಧವ್ಯದಲ್ಲಿಯೇ ಇದ್ದಾರೆ ಎಂದಿದ್ದಾರೆ ವಾಸು.

Exit mobile version