Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೊರಗೆ ದರ್ಶನ್ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಕೆಲ ಮಾಧ್ಯಮಗಳಂತೂ ಕೊಂಕ ಕಟ್ಟಿಕೊಂಡು ದರ್ಶನ್ ಹಿಂದೆ ಬಿದ್ದಿವೆ. ಕೆಲವು ಮಾಧ್ಯಮಗಳಂತೂ ದರ್ಶನ್ ಬಗ್ಗೆ ತೋಚಿದಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ, ಜೈಲಧಿಕಾರಿಗಳು ದರ್ಶನ್ ರ ತಲಡ ಬೋಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತ. ಇದರ ಸತ್ಯಾಂಶವೇನು?
ಇತ್ತೀಚೆಗಷ್ಟೆ ದರ್ಶನ್ ರ ಬಾಲ್ಯದ ಗೆಳೆಯ ಕಾಡು ಶಿವ ದರ್ಶನ್ ರ ಭೇಟಿ ಆಗಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಒಳಗೆ ಬಹಳ ಹೊತ್ತು ಇದ್ದ ಕಾಡು ಶಿವ ಅವರೊಟ್ಟಿಗೆ ದರ್ಶನ್ ಹಲವು ವಿಷಯಗಳನ್ನು ಮಾತನಾಡಿದರಂತೆ. ಹೊರಗೆ ಬಂದ ಬಳಿಕ ಕೆಲ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಕಾಡು ಶಿವ ದರ್ಶನ್ ಬಗ್ಗೆ ಹಲವು ವಿಷಯಗಳನ್ನಜ ಹೇಳಿದ್ದಾರೆ ಅದರಲ್ಲಿ ತಲೆ ಕೂದಲ ವಿಷಯವೂ ಒಂದು.
Darshan: ದರ್ಶನ್ ಮತ್ತು ಅವರ ಅಭಿಮಾನಿಗಳ ಬಗ್ಗೆ ನಟ ರಾಜ್ ಬಿ ಶೆಟ್ಟಿ ಹೇಳಿದ್ದೇನು?
ಕಾಡು ಶಿವ ಹೇಳಿರುವಂತೆ ಜೈಲು ಅಧಿಕಾರಿಗಳು ದರ್ಶನ್ ರ ತಲೆ ಬೋಳಿಸಿಲ್ಲ. ಸ್ವತಃ ದರ್ಶನ್ ಅವರೇ, ಜೈಲಿನಲ್ಲಿ ಉದ್ದ ಕೂದಲು ಮೇಂಟೇನ್ ಮಾಡಲು ಕಷ್ಟವಾಗುತ್ತದೆ ಎಂದು ತುಸು ಕಟ್ ಮಾಡಿಸಿದ್ದಾರಂತೆ. ಎಲ್ಲರಿಗೂ ಗೊತ್ತಿರುವಂತೆ, ಕ್ರಾಂತಿ ಸಿನಿಮಾದ ಸಮಯದಲ್ಲಿ ದರ್ಶನ್ ತಲೆಗೂದಲ ಚಿಕತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಕೂದಲ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಬೇಕಾಯ್ತು. ಈಗ ಜೈಲಿನಲ್ಲಿ ಸೂಕ್ತ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಕೂದಲು ಗಿಡ್ಡ ಮಾಡಿಸಿದ್ದಾರೆ.
ಇಂದಿಗೆ (ಜುಲೈ 18) ದರ್ಶನ್ ಹಾಗೂ ಇತರ 16 ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ. ಇಂದು ದರ್ಶನ್ ಹಾಗೂ ಇತರರಿಗೆ ಜಾಮೀನು ಸಿಗುವ ನಿರೀಕ್ಷೆ ಅಭಿಮಾನಿಗಳದ್ದು, ಆದರೆ ಪೊಲೀಸರು ಈಗಾಗಲೇ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಿದ್ದು, ಆರೋಪಿಗಳಿಗೆ ಜಾಮೀನು ನೀಡದಂತೆ ಕೋರ್ಟ್ ಗೆ ಮನವಿ ಮಾಡಲಿದ್ದಾರೆ. ದರ್ಶನ್ ಬಂಧನ ಆಗಿರುವುದು ಗಂಭೀರ ಪ್ರಕರಣದಲ್ಲಾದ್ದರಿಂದ ಇಂದೂ ಸಹ ದರ್ಶನ್ ಗೆ ಜಾಮೀನು ಸಿಗುವ ಸಾಧ್ಯತೆ ಬಹುತೇಕ ಇಲ್ಲ.