Disha Patani: ಸೆಕ್ಸಿ‌ ನಟಿಯ ತಂದೆಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಐನಾತಿಗಳು

0
104
Disha Patani

Disha Patani

ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ದಡ್ಡರು, ಅನಕ್ಷರಸ್ಥರೇ ಮೋಸ ಹೋಗುತ್ತಾರೆ ಎಂದೇನೂ ಇಲ್ಲ. ವಂಚಕರ ಬಲೆಗೆ ಬೀಳುವುದು ವಿದ್ಯಾವಂತರೆ. ಇದೀಗ ಬಾಲಿವುಡ್ ಮಾತ್ರೇ ಅಲ್ಲದೆ ದಕ್ಷಿಣ ಭಾರತ‌ ಚಿತ್ರರಂಗದಲ್ಲಿಯೂ ಜನಪ್ರಿಯವಾಗಿರುವ, ಭಾರತದ ಸೆಕ್ಸಿ ನಟಿ‌ ಎಂದೇ ಕರೆಸಿಕೊಳ್ಳುವ ನಟಿಯ ತಂದೆಗೆ ವಂಚಕರು ಮೋಸ ಮಾಡಿದ್ದಾರೆ.

ಪ್ರಭಾಸ್ ನಟನೆಯ ‘ಕಲ್ಕಿ‌ 2898 ಎಡಿ’, ಇದೀಗ ಬಿಡುಗಡೆ ಆಗಿರುವ ‘ಕನಗುವ’ ಸಿನಿಮಾದಲ್ಲಿ ಸೇರಿದಂತೆ, ಬಾಲಿವುಡ್’ನ ಸ್ಟಾರ್ ನಟರೊಂದಿಗೆ ನಟಿಸಿರುವ ದಿಶಾ ಪಟಾಜಿಯ ತಂದೆಗೆ ಕೆಲವು ವಂಚಕರು ಭಾರಿ‌ ಮೋಸ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಹಣವನ್ನು ದಿಶಾ ಪಟಾನಿಯ ತಂದೆ ಕಳೆದುಕೊಂಡಿದ್ದು, ಇದೀಗ ವಂಚಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸೆಕ್ಸಿ ನಟಿ ದಿಶಾ ಪಟಾನಿಯ ತಂದೆ ಜಗದೀಶ್ ಸಿಂಗ್‌ಪಟಾನಿ ನಿವೃತ್ತ ಡಿಎಸ್’ಪಿ. ಜಾರ್ಖಂಡ್ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಅವರು ನಿವೃತ್ತರಾಗಿದ್ದರು. ಆದರೆ ಈಗ ಕೆಲವು ವಂಚಕರು ಸರ್ಕಾರದ ಉನ್ನತ ಮಟ್ಟದ ಸಮಿತಿಯೊಂದರಲ್ಲಿ ಸ್ಥಾನ ಕೊಡಿಸುವ ಆಸೆ ತೋರಿಸಿ ದಿಶಾ ಪಟಾನಿಯ ತಂದೆಯಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ.

ಸರ್ಕಾರದ‌ ಸಮಿತಿಯೊಂದರಲ್ಲಿ ಉನ್ನತ ಸ್ಥಾನ ನೀಡುವ ಭರವಸೆಯನ್ನು ನೀಡಿ ಬರೋಬ್ಬರಿ 25 ಲಕ್ಷ ಹಣ ಮೋಸ ಮಾಡಿದ್ದಾರೆ. ಐದು ಲಕ್ಷ ರೂಪಾಯಿ ನಗದು, 20 ಲಕ್ಷ ರೂಪಾಯಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರಂತೆ ದಿಶಾ ಪಟಾನಿಯ ತಂದೆ ಜಗದೀಶ್ ಸಿಂಗ್ ಪಟಾನಿ. ಒಬ್ಬ ಮಹಿಳೆ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ದೂರು ದಾಖಲಿಸಿಲಾಗಿದ್ದು‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Darshan: ದರ್ಶನ್ ಅಭಿಮಾನಿಗಳಿಂದ ಅನುಚಿತ ವರ್ತನೆ, ಮತ್ತೆ ಎಚ್ಚರಿಕೆ ಕೊಟ್ಟ ಪ್ರಥಮ್

ಆರೋಪಿಗಳೆಲ್ಲರಿಗೂ ರಾಜಕೀಯ ವ್ಯಕ್ತಿಗಳೊಡನೆ ಆತ್ಮೀಯ ಸಂಬಂಧ ಹೊಂದಿದ್ದು, ಪಟಾನಿಯ ತಂದೆಯವರಿಗೆ ಸಮಿತಿಯೊಂದರಲ್ಲಿ ಉಪಾಧ್ಯಕ್ಷ ಸ್ಥಾನ ಕೊಡಿಸುವ ಭರವಸೆ ಕೊಟ್ಟಿದ್ದರಂತೆ. ದಿಶಾ ಪಟಾನಿಯ ತಂದೆಯನ್ನು ಹಲವು ಬಾರಿ ಭೇಟಿ ಮಾಡಿ ಮೀಟಿಂಗ್ ಸಹ ನಡೆಸಿದ್ದರಂತೆ. ಕೆಲವು ರಾಜಕೀಯ ವ್ಯಕ್ತಿಗಳೊಡನೆ ತೆಗೆಸಿಕೊಂಡಿರುವ ಚಿತ್ರಗಳನ್ನು ತೋರಿಸಿದ್ದರಂತೆ. ಹಾಗಾಗಿ ಅವರನ್ನು ನಂಬಿ ದಿಶಾ ಪಟಾನಿಯ ತಂದೆ ಹಣ ನೀಡಿದ್ದರು.

LEAVE A REPLY

Please enter your comment!
Please enter your name here