Site icon Samastha News

DK Shivakumar: ʼಅದೃಷ್ಟದ ಮನೆʼ ಪ್ರವೇಶಿಸಿದ ಡಿಕೆ ಶಿವಕುಮಾರ್, ಬದಲಾಗಲಿದೆಯೇ ಅದೃಷ್ಟ?

DK Shivakumar

DK Shivakumar

ರಾಜಕಾರಣಿಗಳು ಜ್ಯೋತಿಷ್ಯ, ಭವಿಷ್ಯಗಳನ್ನು ಅತಿಯಾಗಿ ನಂಬುತ್ತಾರೆ. ಅದರಲ್ಲಿ ಡಿಕೆ ಶಿವಕುಮಾರ್ ‌(DK Shivakumar) ಸಹ ಒಬ್ಬರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅವರಿಗೆ ಅತೀವ ನಂಬಿಕೆ, ದ್ವಾರಕಾನಾಥ್, ತಮಗೆ ಗುರುಗಳೆಂದು ಸ್ವತಃ ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಏನೇ ಮಾಡಿದರು ಜ್ಯೋತಿಷಿಗಳ ಸಲಹೆಯನ್ನು ಪಡೆದೇ ಮುಂದಿನ ಹೆಜ್ಜೆ ಇಡುತ್ತಾರೆ. ಸಿಎಂ ಆಗುವ ಕನಸಿನಲ್ಲಿರುವ ಡಿಕೆ ಶಿವಕುಮಾರ್, ಕನಸು ಸಾಕಾರಗೊಳಿಸಿಕೊಳ್ಳಲು ಅದೃಷ್ಟದ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಐಶಾರಾಮಿ ಏರಿಯಾ ಎನಿಸಿಕೊಂಡಿರುವ ಸದಾಶಿವನಗರದಲ್ಲಿ ಐಶಾರಾಮಿ ಮನೆ ಮತ್ತು ಕಚೇರಿ ಹೊಂದಿರುವ ಡಿಕೆ ಶಿವಕುಮಾರ್, ಈಗ ಆ ಐಶಾರಾಮಿ ಮನೆಯ ಬದಲಿಗೆ ಬೆಂಗಳೂರಿನಲ್ಲಿಯೇ ಇರುವ ಅದೃಷ್ಟದ ಮನೆಗೆ ವಾಸ್ತವ್ಯ ಬದಲಾಯಿಸುತ್ತಿದ್ದಾರೆ.

ಎಸ್ ಬಂಗಾರಪ್ಪ, ಧರ್ಮಸಿಂಗ್, ಸಿದ್ದರಾಮಯ್ಯ ಅವರುಗಳು ಸಿಎಂ ಆಗುವ ಮುಂಚೆ ನೆಲೆಸಿದ್ದ ಕುಮಾರಪಾರ್ಕ್ ನ ಪೂರ್ವದಲ್ಲಿರುವ 001  ಬಂಗಲೆಗೆ ಡಿಕೆ ಶಿವಲುಮಾರ್ ವಾಸ್ತವ್ಯ ಬದಲಿಸುತ್ತಿದ್ದಾರೆ. ಕಳೆದ ವರ್ಷವೇ ಡಿಕೆ ಶಿಚಕುಮಾರ್ ಅವರಿಗೆ ಈ ಬಂಗಲೆ ನಿಯೋಜಿತವಾಗಿತ್ತು. ಆದರೆ ಬೆಂಗಳೂರಿನಲ್ಲಿಯೇ ಐಶಾರಾಮಿ ಮನೆ ಹೊಂದಿರುವ ಡಿಕೆ ಶಿವಕುಮಾರ್ ಬಂಗಲೆಗೆ ಶಿಫ್ಟ್ ಆಗಿರಲಿಲ್ಲ.

ಚಿಕ್ಕಬಳ್ಳಾಪುರ: ತಮ್ಮದೇ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತರು

ಆದರೆ ಈಗ ಮನಸ್ಸು ಬದಲಿಸಿರುವ ಡಿಕೆ ಶಿವಕುಮಾರ್, ಈಗ ಕುಮಾರ ಪಾರ್ಕ್ ನ 1 ನೇ ನಂಬರ್ ಬಂಗಲೆಗೆ ವಾಸ್ತವ್ಯ ಬದಲಿಸುತ್ತುದ್ದಾರೆ. ಈ ಬಂಗಲೆಯಲ್ಲಿ ನೆಲೆಸಿದವರು ರಾಜಕೀಯವಾಗಿ ಅಭಿವೃದ್ಧಿಯಾಗುತ್ತಾರೆ ಎಂಬ ನಂಬಿಕೆ ಇದೆ. ಬಂಗಾರಪ್ಪ, ಧರಮ್ ಸಿಂಗ್, ಸಿದ್ದರಾಮಯ್ಯ ಅವರುಗಳು ಈ ಬಂಗಲೆಯಲ್ಲಿ ನೆಲೆಸೊದ ಬಳಿಕವಷ್ಟೆ ಸಿಎಂ ಆಗಿದ್ದು ವಿಶೇಷ. ತಾವೂ ಸಹ ಸಿಎಂ ಆಗುವ ಉದ್ದೇಶದಿಂದಲೇ ಈಗ ಡಿಕೆ ಶಿವಕುಮಾರ್ ಆ ಬಂಗಲೆಗೆ ವಾಸ್ತವ್ಯ ಬದಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Exit mobile version