Sister Shivani: ನೀರು ಕುಡಿಯುವ ಮುನ್ನ ಈ ಸಣ್ಣ ಕೆಲಸ ಮಾಡಿ, ಬದಲಾವಣೆ ಗುರುತಿಸಿ

0
126
Sister Shivani

Sister Shivani

ಸಾಧ್ವಿ ಶಿವಾನಿ, ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ‌ ಇವರನ್ನು ಬಹುತೇಕರು ನೋಡಿಯೇ ಇರುತ್ತಾರೆ. ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು ಮತ್ತು ಮೋಟಿವೇಷನಲ್ ಸ್ಪೀಕರ್. ಇವರ ಮೃದು ಮಾತು, ಮಾತಿನಂತೆ ಸ್ವತಃ ನಡೆದುಕೊಳ್ಳುವ ರೀತಿಯಿಂದ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಇವರು ಪಡೆದುಕೊಂಡಿದ್ದಾರೆ. ತಮ್ಮ ಆಧ್ಯಾತ್ಮಿಕ ಭಾಷಣಗಳಲ್ಲಿ ಪಾಸಿಟಿವ್ ಅಫರ್ಮೇಷನ್ (ಧನಾತ್ಮಕ ನಂಬುವಿಕೆ) ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ.

ನಾವು ಏನಾಗಬೇಕು, ನಮಗೆ ಏನಾಗಬೇಕು ಎಂಬುದನ್ನು ಮೊದಲು ನಾವು ಧೃಡವಾಗಿ ನಂಬಿ ಅದನ್ನು ಯೂನಿವರ್ಸ್’ಗೆ ಹೇಳುವುದನ್ನು ಅಫರ್ಮೇಷನ್ ಎಂದು ಸರಳವಾಗಿ ಹೇಳಬಹುದು. ಇದರಿಂದ ನಾವು ಏನು ಅಂದುಕೊಂಡಿರುತ್ತೇವೆಯೋ ಅದು ನಡೆಯುತ್ತದೆ, ಅಥವಾ ಅಂದುಕೊಂಡಿದ್ದನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಈ ಪಾಸಿಟಿವ್ ಅಫರ್ಮೇಷನ್ ಬಗ್ಗೆ ಸಾಧ್ವಿ ಶಿವಾನಿ ಹೆಚ್ಚು ಮಾತನಾಡುತ್ತಿರುತ್ತಾರೆ.

ಇತ್ತೀಚೆಗೆ ಇದೇ ವಿಷಯವಾಗಿ ಶಿವಾನಿ ಮಾತನಾಡಿರುವ ವಿಡಿಯೋ ಒಂದು ಹರಿದಾಡುತ್ತಿದೆ. ವಿಡಿಯೋನಲ್ಲಿ, ಶಿವಾನಿ, ನೀರು ಕುಡಿಯುವ‌ ಮುನ್ನ ಮಾಡಬೇಕಾದ ಸಣ್ಣ ಕೆಲಸವೊಂದರ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಹೇಗೆ ದೊಡ್ಡ ಮಟ್ಟದ ಬದಲಾವಣೆ ಜೀವನದಲ್ಲಿ ಆಗಲಿದೆ ಎಂಬುದನ್ನು ವಿವರಿಸಿದ್ದಾರೆ. ‘ನೀರು ಕುಡಿಯುವ ಮುನ್ನ ಐದು ಸೆಕೆಂಡ್ ಗಳು ಸಮಯ ತೆಗೆದುಕೊಂಡು ಕೆಲವು ಅಫರ್ಮೇಷನ್ ಗಳನ್ನು ಶಿವಾನಿ ಮಾಡಿಕೊಳ್ಳುತ್ತಾರಂತೆ.

ನೀರನ್ನು ಗ್ಲಾಸ್’ನಲ್ಲಿ ತುಂಬಿಕೊಂಡ ಬಳಿ ಮೊದಲಿಗೆ ಅವರು ಪರಮಾತ್ಮನಿಗೆ ಧನ್ಯವಾದ ಹೇಳುತ್ತಾರೆ. ನೀರು ಕೊಟ್ಟ ಪರಮಾತ್ಮನಿಗೆ ವಂದನೆ ಅರ್ಪಿಸಿ, ನಾನು ಸದಾ ಈ ನೀರಿನಂತೆ ಶಾಂತವಾಗಿರುತ್ತೇನೆ, ಸದಾ ಸಂತೋಷವಾಗಿರುತ್ತೇನೆ, ಸದಾ ಶಕ್ತಿಯುತವಾಗಿರುತ್ತೇನೆ ಮತ್ತು‌ ರೋಗಗಳಿಂದ ಮುಕ್ತವಾಗಿರುತ್ತೇನೆ, ಹೀಗೆ ಇನ್ನೂ ಕೆಲವು ಪಾಸಿಟಿವ್ ವಿಷಯಗಳನ್ನು ಮನಸ್ಸಿನಲ್ಲಿ ಅಂದುಕೊಂಡ ಬಳಿಕವೇ ನೀರು ಕುಡಿಯುತ್ತಾರಂತೆ. ಇದರಿಂದ ಪಾಸಿಟಿವ್ ಅಫರ್ಮೇಷನ್ ಆಗಿ ಅದು ತಮ್ಮ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಾಧ್ವಿ ಶಿವಾನಿ.

Bengaluru: 56 ಕೋಟಿ ಕದ್ದ ಎಂಜಿನಿಯರ್, ಎರಡು ವರ್ಷದ ಬಳಿಕ ಬಂಧನ

ಪ್ರತಿದಿನ ಸುಮಾರು 7 ರಿಂದ 8 ಬಾರಿ ನೀರು ಕುಡಿಯುತ್ತೀರ ಪ್ರತಿಬಾರಿ ನೀರು ಕುಡಿಯುವ ಮುಂಚೆ ಐದು ಸೆಕೆಂಡ್ ಕಾದು ಹೀಗೆ ಪಾಸಿಟಿವ್ ಅಫರ್ಮೇಷನ್ ಮಾಡಿದರೆ ಅದರ ಪರಿಣಾಮ ದೊಡ್ಡ ಮಟ್ಟದಲ್ಲಿ ವೈಕ್ತಿಕ ಆರೋಗ್ಯ ಮತ್ತು ಜೀವನದ ಮೇಲೆ ಆಗುತ್ತದೆ ಎನ್ನುತ್ತಾರೆ ಸಾಧ್ವಿ ಶಿವಾನಿ. ನೀರು ಜೀವದ್ರವ, ಅದಕ್ಕೆ ಅಪಾರವಾದಿ ಶಕ್ತಿಯಿದೆ, ನಾವು ಅಂದುಕೊಂಡ ಪಾಸಿಟಿವ್ ಅಫರ್ಮೇಷನ್ ಅನ್ನು ಯೂನಿವರ್ಸ್’ಗೆ ತಲುಪಿಸುವಲ್ಲಿ ನೀರು ವಾಹಕವಾಗಿ ಕೆಲಸ ಮಾಡಿತ್ತದೆ ಎಂದಿದ್ದಾರೆ ಶಿವಾನಿ.

LEAVE A REPLY

Please enter your comment!
Please enter your name here