Site icon Samastha News

Bengaluru: ಆತಂಕಕಾರಿ ಬೆಳವಣಿಗೆ, ಬೆಂಗಳೂರಿನಲ್ಲಿ ಡ್ರಗ್ಸ್ ಚಾಕಲೇಟ್ ಮಾರಾಟ

Bengaluru

Bengaluru

ಮಕ್ಕಳಿಗೆ ಹೆದರಿಸಲು ಚಾಕಲೇಟ್’ನಲ್ಲಿ ಮತ್ತು ಬರುವ ಔಷಧ ಸೇರಿಸಿರುತ್ತಾರೆ ಎಂದೆಲ್ಲ ಹೇಳುವುದು ಸಾಮಾನ್ಯ. ಈಗ ನಿಜಕ್ಕೂ ಬೆಂಗಳೂರಿನಲ್ಲಿ ಡ್ರಗ್ಸ್ ಚಾಕಲೇಟ್ ಮಾರಾಟ ಪತ್ತೆಯಾಗಿದೆ. ಬೆಂಗಳೂರು ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಆಗಬಹುದಾಗಿದ್ದ ಬೃಹತ್ ಅನಾಹುತವೊಂದು ತಪ್ಪಿದೆ. ‘ಆಯುರ್ವೇದ ಮೆಡಿಸಿನ್’ ಹೆಸರಿನಲ್ಲಿ ಚರಸ್ ಬೆರೆಸಿದ ಚಾಕಲೇಟ್’ಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿರುವುದು ಪತ್ತೆ ಆಗಿದೆ.

ಪ್ರಕರಣದಲ್ಲಿ ಜಿಗಣಿ ಪೊಲೀಸರು ಆರು ಮಂದಿ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. ಈ ದುರುಳರು, ಚರಸ್ ಬೆರೆಸಿ ಚಾಕಲೇಟ್ ಮಾದರಿಯ ವಸ್ತುವನ್ನು, ಚಾಕಲೇಟ್ ರೀತಿ, ಚಿಪ್ಸ್ ರೀತಿ ಕಾಣುವ ಪ್ಯಾಕೆಟ್’ಗಳಿಗೆ ಹಾಕಿ ಅದಕ್ಕೆ ‘ಆಯುರ್ವೇದ ಮೆಡಿಸಿನ್’ ಎಂದು ಹೆಸರು ನೀಡಿ ಮಾರಾಟ ಮಾಡುತ್ತಿದ್ದಿದ್ದು ಪತ್ತೆಯಾಗಿದೆ.

ಈ ಚಾಕಲೇಟ್ ಕವರ್’ಗಳನ್ನು ಬೆಂಗಳೂರು ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ ಐದು ಮಂದಿ ಉತ್ತರ ಪ್ರದೇಶ ರಾಜ್ಯದವರಾಗಿದ್ದಾರೆ, ಒಬ್ಬ ವ್ಯಕ್ತಿ ಜಾರ್ಖಂಡ್ ರಾಜ್ಯದವನಾಗಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ಜೀತು ಬಿಸಂಬರ್ ರಾಜಾಜಿನಗರದಲ್ಲಿ ಕೊರಿಯರ್ ಏಜೆಂಟ್ ಆಗಿದ್ದು, ಉತ್ತರ ಪ್ರದೇಶದ ಮೋನು ಹೆಸರಿನ ವ್ಯಕ್ತಿಯಿಂದ ಈ ಚರಸ್ ಚಾಕಲೇಟ್’ಗಳನ್ನು ಖರೀದಿಸಿ, ಅವನ್ನು ಇತರೆ ಐದು ಜನರಿಗೆ ನೀಡಿ ಪಾನ್ ಶಾಪ್’ಗಳಿಗೆ ಮಾರಲು ನೀಡಿದ್ದಾನೆ.

Bengaluru: ಬೆಂಗಳೂರಿನ ಈಗಿನ ಜನಸಂಖ್ಯೆ ಎಷ್ಟು? ನಿಜಕ್ಕೂ ಬೆಂಗಳೂರು ಸುರಕ್ಷಿತವಾ?

ಆರೋಪಿಗಳಿಂದ 10 ಸಾವಿರಕ್ಕೂ ಹೆಚ್ಚು ಚಾಕಲೇಟ್ ಪೊಟ್ಟಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ ಸುಮಾರು ಹತ್ತು ಲಕ್ಷ ರೂಪಾಯಿ ಎನ್ನಲಾಗಿದ್ದು, ಆರೋಪಿಗಳೆಲ್ಲರನ್ನೂ ಬಂಧಿಸಿರುವ ಜಿಗಣಿ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪ್ರಕರಣ ಕುರಿತಾಗಿ ಉತ್ತರ ಪ್ರದೇಶ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

Exit mobile version