Site icon Samastha News

Bengaluru: ಬೆಂಗಳೂರಿನ ಈಗಿನ ಜನಸಂಖ್ಯೆ ಎಷ್ಟು? ನಿಜಕ್ಕೂ ಬೆಂಗಳೂರು ಸುರಕ್ಷಿತವಾ?

Bengaluru

Bengaluru

ಬೆಂಗಳೂರು ದಿನೇ ದಿನೇ ಹಿಗ್ಗುತ್ತಲೇ ಸಾಗುತ್ತಿದೆ. ಇಲ್ಲಿನ ಜನಸಂಖ್ಯೆ ಅದೆಷ್ಟು ಬೇಗ ಹೆಚ್ಚಾಗುತ್ತಿದೆಯೆಂದರೆ ಕಳೆದ ಕೆಲ ವರ್ಷಗಳಲ್ಲಿ ಆರಂಭವಾಗಿರುವ ಕುಡೊಯುವ ನೀರಿನ ಸಮಸ್ಯೆ ಇನ್ನೆರಡು-ಮೂರು ವರ್ಷಗಳಲ್ಲಿ ಹೆಮ್ಮರವಾಗಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ‌. ಅಂದಹಾಗೆ ಬೆಂಗಳೂರಿನ ಈಗಿನ ಜನಸಂಖ್ಯೆ ಎಷ್ಟು? ಎಷ್ಟು ವೇಗವಾಗಿ ನಗರದ ಜನಸಂಖ್ಯೆ ಹೆಚ್ಚಾಗುತ್ತಿದೆ?

ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ, ಬೆಂಗಳೂರು ನಗರ ಜಿಲ್ಲೆ. ಆದರೆ ಇದು‌ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ ಏನಲ್ಲ. ಆದರೂ ಸಹ ಈ ನಗರದಲ್ಲಿ ರಾಜ್ಯದ ಉಳಿದೆಲ್ಲ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚು ಜನಸಂಖ್ಯೆ ಇದೆ‌. ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ವರದಿ ಪ್ರಕಾರ 2024 ರಲ್ಲಿ ಬೆಂಗಳೂರು ನಗರದಲ್ಲಿ 1.40 ಕೋಟಿ ಜನ ವಾಸವಿದ್ದಾರೆ. ನಿಖರ ಸಂಖ್ಯೆ ಇದಕ್ಕಿನಂತಲೂ ಹೆಚ್ಚಾಗಿರಬಹುದು. ಕೇವಲ 50 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 20 ಹೆಚ್ಚು ಪಟ್ಟು ಹೆಚ್ಚಾಗಿದೆ.

ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇಕಡ 25% ಜನ ಬೆಂಗಳೂರು ಒಂದರಲ್ಲೇ ವಾಸವಿದ್ದಾರೆ. ಹಾಗಾಗಿ ಬೆಂಗಳೂರಿನ ಮೇಲೆ ಅತಿಯಾದ ಒತ್ತಡ ಉಂಟಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಹೆಚ್ಚುವರಿ ರಸ್ತೆಗಳು, ಹೆಚ್ಚುವರಿ ಮೆಟ್ರೋ ಲೈನ್’ಗಳನ್ನು ಮಾಡಬಹುದು ಆದರೆ ಹೆಚ್ಚುವರಿ ಕುಡಿಯುವ ನೀರು ಎಲ್ಲಿಂದ ತರುವುದು? ಜನ ವಾಸಿಸಲು ಹೆಚ್ಚುವರಿ  ಸ್ಥಳವನ್ನು ಎಲ್ಲಿಂದ ತರುವುದು. ಹಾಗಾಗಿಯೇ ಕೆಲ ತಜ್ಞರು ಹೇಳುತ್ತಿರುವಂತೆ ಬೆಂಗಳೂರು ಇನ್ನು ಕೆಲ ವರ್ಷಗಳಲ್ಲಿ ಬದುಕಲು ಯೋಗ್ಯವಲ್ಲದ ನಗರವಾಗಿ ಮಾರ್ಪಾಡಲಾಗಲಿದೆ‌. ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಲಿದೆ. ವಾಯು ಮಾಲಿನ್ಯ ವಿಪರೀತ ಆಗಲಿದೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಜನ ವಾಸಿಸುವುದು ಮೈಸೂರು ನಗರದಲ್ಲಿ, ಆದರೆ ಬೆಂಗಳೂರು ಹಾಗೂ‌ ಮೈಸೂರು ನಗರದ ಜನಸಂಖ್ಯೆಯ ನಡುವೆ ಆಕಾಶ ಭೂಮಿಯ ಅಂತರ ಇದೆ. ಇವುಗಳ ಹೊರತಾಗಿ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿಯೂ ಸಹ ಹೆಚ್ಚು ಜನ ವಾಸವಿದ್ದಾರೆ.

Biriyani: ಮೂರು ರೂಪಾಯಿಗೆ ಹೊಟ್ಟೆ ತುಂಬ ಬಿರಿಯಾನಿ!

ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಸವಲತ್ತುಗಳನ್ನು ಹೆಚ್ಚು ಮಾಡುವ ಜೊತೆಗೆ ಬೆಂಗಳೂರಿಗೆ ಪರ್ಯಾಯವಾಗಿ ಬೇರೆ ನಗರಗಳನ್ನು ಸಹ ಅಭಿವೃದ್ಧಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲ ಪ್ರಯತ್ನಗಳು ನಡೆಯುತ್ತಿವೆ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರಗಳನ್ನು ಸಹ ಅಭಿವೃದ್ದಿ ಪಡಿಸುವ ಯತ್ನಗಳಾಗುತ್ತಿವೆ.

Exit mobile version