Site icon Samastha News

Food Safety: ಭಾರತದ 400 ಆಹಾರ ಉತ್ಪನ್ನಗಳಲ್ಲಿ ವಿಷಕಾರಕ ಅಂಶ ಪತ್ತೆ

Food Safety

Food Safety

ಭಾರತದ 400 ಆಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಯೂರೋಪಿಯನ್ ಯೂನಿಯನ್ ಕಳೆದ 5 ವರ್ಷಗಳಲ್ಲಿ ಭಾರತದಿಂದ ಆಮದಾಗುತ್ತಿದ್ದ 400 ಕ್ಕೂ ಹೆಚ್ಚು ಆಹಾರ ಉತ್ಪನ್ನಗಳನ್ನು ಪರೀಕ್ಷಿಸಿ ಅದರಲ್ಲಿ ಪತ್ತೆಯಾದ ವಿಷಕಾರಿ ಅಂಶದಿಂದಾಗಿ ಅವುಗಳ ಆಮದಿನ ಮೇಲೆ ನಿಷೇಧ ಹೇರಿದೆ. ಹೀಗೆ ನಿಷೇಧಕ್ಕೆ ಒಳಗಾದ ಉತ್ಪನ್ನಗಳು ಭಾರತದಲ್ಲಿ ಈಗಲೂ ಮಾರಾಟಕ್ಕಿವೆ!

ಯುರೋಪಿಯನ್ ಯೂನಿಯನ್ ನಿಂದ ನಿಷೇಧಕ್ಕೆ ಒಳಪಟ್ಟ 400 ಉತ್ಪನ್ನಗಳ ಪೈಕಿ 21 ಉತ್ಪನ್ನಗಳಲ್ಲಿ ಅತ್ಯಂತ ಅಪಾಯಕಾರಿಯಾದ ಕ್ಯಾಡಿಮಮ್ ಅಂಶ ಕಂಡು ಬಂದಿದೆ. ಕ್ಯಾಡಿಮಮ್ ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ನಿಷೇಧಗೊಂಡಿರುವ 51 ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಕಂಡು ಬಂದಿವೆ. ರಾಸಾಯನಿಕಗಳು ಕಂಡು ಬಂದ ಅಕ್ಕಿ, ಕಾಳು, ಮಸಾಲೆ ಪದಾರ್ಥಗಳಲ್ಲಿ ಟ್ರೈಸಿಕ್ಲಾಜೋಲ್ ಎಂಬ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ. 52 ಉತ್ಪನ್ನಗಳಲ್ಲಿ ಒಂದಕ್ಕಿಂತಲೂ ಹೆಚ್ಚು ರಾಸಾಯನಿಕ ಅಥವಾ ಫಂಗಸ್ ಅನ್ನು ಒಳಗೊಂಡಿದೆ.

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

ಯೂರೋಪಿಯನ್ ಯೂನಿಯನ್ ನಿಷೇಧ ಮಾಡಿರುವ ಉತ್ಪನ್ನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ಅವುಗಳಲ್ಲಿರುವ ರಾಸಾಯನಿಕ ಅಂಶಗಳಿಂದ ಕ್ಯಾನ್ಸರ್, ಶಾಶ್ವತ ಅಂಗವಿಕಲತೆ‌ ಉಂಟಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆರ್ಗ್ಯಾನಿಕ್ ಎಂಬ ಹಣೆಪಟ್ಟಿಯಂದಿಗೆ ಆಮದು ಮಾಡಿರುವ ವಸ್ತುಗಳಲ್ಲಿಯೂ ಸಹ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿವೆ!

ಯುರೋಪಿಯನ್ ಯೂನಿಯನ್ ನಿಷೇಧ ಹೇರಿರುವ ಆಹಾರ ಉತ್ಪನ್ನಗಳು ಭಾರತದಲ್ಲಿ ಈಗಲೂ ಮಾರುಕಟ್ಟೆಯಲ್ಲಿವೆ ಎಂಬುದು ಆತಂಕಕಾರಿ ವಿಷಯ.

Exit mobile version