Site icon Samastha News

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

Royal enfield-honda mavrick 440

Royal Enfield

ಭಾರತದಲ್ಲಿ 350 ಸಿಸಿ ಬೈಕ್ ಸೆಗ್ಮೆಂಟ್​ನಲ್ಲಿ ರಾಯಲ್ ಎನ್​ಫೀಲ್ಡ್ ಅನ್ನು ಮೀರಿಸುವ ಇನ್ನೊಂದು ಬೈಕ್ ಇಲ್ಲ. ರಾಯಲ್ ಎನ್​ಫೀಲ್ಡ್ ಹೊಸ ತಲೆಮಾರಿನ ಬೈಕ್​ಗಳು ಬಿಡುಗಡೆ ಆದಾಗಿನಿಂದ ಈಗಿನ ವರೆಗೆ ಅಂದರೆ ಸುಮಾರು 10 ವರ್ಷದಿಂದಲೂ ಈ ಬೈಕ್​ಗಳು ಮಾರುಕಟ್ಟೆಯಲ್ಲಿ ಮಹಾರಾಜನಂತೆ ಮೆರೆಯುತ್ತಿವೆ. ಆದರೆ ಇತ್ತೀಚೆಗೆ ಅದರಲ್ಲೂ ಕೋವಿಡ್ ಬಳಿಕ ಬಂದಿರುವ ಕೆಲವು ಬೈಕ್​ಗಳು ರಾಯಲ್ ಎನ್​ಫೀಲ್ಡ್​ಗೆ ಟಕ್ಕರ್ ಕೊಡುವ ಪ್ರಯತ್ನದಲ್ಲಿವೆ. ಆದರೆ ರಾಯಲ್ ಎನ್​ಫೀಲ್ಡ್​ ಎದುರಾಳಿಯಾಗಿ ಫೀಲ್ಡಿಗಿಳಿದ ಎಷ್ಟೋ ಬೈಕ್​ಗಳು ಸ್ಪರ್ಧೆಯಿಂದ ಹೊರಬಿದ್ದಿವೆ. ಆದರೆ ಕೆಲವು ಮಾತ್ರ ನಿಜಕ್ಕೂ ಠಕ್ಕರ್ ಕೊಡುತ್ತಿವೆ. ಅದರಲ್ಲಿ ಒಂದು ‘ಮ್ಯಾವರಿಕ್’.

ಹಾಲಿವುಡ್​ನ ಬಹು ಜನಪ್ರಿಯ ನಟ ಟಾಮ್ ಕ್ರೂಸ್​ನ ‘ಮ್ಯಾವರಿಕ್’ ಸಿನಿಮಾ ನೆನಪಿದೆಯಲ್ಲಿವೆ. ವೈಮಾನಿಕ ಸಾಹಸದ ಕತೆಯನ್ನು ಒಳಗೊಂಡಿರುವ ಈ ಸಿನಿಮಾದಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿರುವ ‘ಮ್ಯಾವರಿಕ್’ ಬೈಕ್ ಹೆಸರಿನ ತಕ್ಕಂತೆ ಸಖತ್ ಸ್ಟೈಲಿಷ್ ಆಗಿದೆ ಮತ್ತು ಪವರ್​ಫುಲ್ ಆಗಿಯೂ ಇದೆ. ಬೆಲೆ ಬಹುತೇಕ ರಾಯಲ್ ಎನ್​ಫೀಲ್ಡ್ ಕ್ಲಾಸಿಕ್ 350 ಅಷ್ಟೆ ಇದೆಯಾದರೂ ಅದಕ್ಕಿಂತಲೂ ಹೆಚ್ಚು ಪವರ್​ಫುಲ್ ಹಾಗೂ ಸ್ಟೈಲಿಷ್ ಆಗಿದೆ. ‘ಮ್ಯಾವರಿಕ್’ ಬೈಕ್ ಅನ್ನು ಉತ್ಪಾದಿಸಿ ಮಾರಾಟ ಮಾಡುತ್ತಿರುವುದು ಹೋಂಡಾ ಸಂಸ್ಥೆ.

ಜನಪ್ರಿಯ ಹಾರ್ಲೆ ಡೇವಿಡ್​ಸನ್ ಎಕ್ಸ್ 440 ಬೈಕಿನಿಂದ ಸ್ಪೂರ್ತಿ ಪಡೆದು ಅದೇ ರೀತಿ ನಿರ್ಮಾಣವಾಗಿರುವ ಹೊಂಡಾ ‘ಮ್ಯಾವರಿಕ್’ ಬೈಕ್, ರಾಯಲ್ ಎನ್​ಫೀಲ್ಡ್​ಗಿಂತಲೂ ಹೆಚ್ಚು ಸಿಸಿ ಹಾಗೂ ಬಿಎಚ್​ಪಿ ಮೂಲಕ ಹೆಚ್ಚು ಶಕ್ತಿಯನ್ನು ಒಳಗೊಂಡಿದೆ. ಹೊಂಡಾ ‘ಮ್ಯಾವರಿಕ್’ ಬೈಕು 440 ಸಿಸಿಯನ್ನು ಒಳಗೊಂಡಿದ್ದು, ರಾಯಲ್ ಎನ್​ಫೀಲ್ಡ್ 350 ಗಿಂತಲೂ ಹೆಚ್ಚು ಶಕ್ತಿಯುತವಾಗಿದೆ. ರಾಯಲ್ ಎನ್​ಫೀಲ್ಡ್​ಗಳು ಭಾರತದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ರಾಯಲ್ ಎನ್​ಫೀಲ್ಡ್ ಬದಲಿಗೆ ಅದೇ ರೀತಿಯ ಶಕ್ತಿ ಹೊಂದಿರುವ ಬೈಕು ಹುಡುಕುತ್ತಿರುವವರಿಗೆ ಈ ಬೈಕ್ ಅತ್ಯುತ್ತಮ ಆಯ್ಕೆ ಆಗಲಿದೆ.

Two Wheeler: ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್ ಯಾವುದು?

ಶಕ್ತಿಯಲ್ಲಿ ಮಾತ್ರವೇ ಅಲ್ಲದೆ ಹಲವು ವಿಧದಲ್ಲಿ ಈ ಬೈಕು ಉತ್ತಮವಾಗಿದೆ. ರಾಯಲ್ ಎನ್​ಫೀಲ್ಡ್​ನಲ್ಲಿ ಹಳೆಯ ಮಾದರಿಯ ಅನಲಾಗ್ ಕ್ಲಸ್ಟರ್, ಸ್ಪೀಡೋ ಮೀಟರ್ ಇದ್ದರೆ ಮ್ಯಾವರಿಕ್​ನಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದೆ. ರಾಯಲ್ ಎನ್​ಫೀಲ್ಡ್ ನಲ್ಲಿ ಹೆಡ್​ಲೈಟ್, ಟೇಲ್ ಲ್ಯಾಂಪ್, ಇಂಡಿಕೇಟರ್​ಗಳು ಹಾಲೊಜನ್ ಆಗಿದ್ದರೆ ಮ್ಯಾವರಿಕ್​ನಲ್ಲಿ ಡಿಜಿಟಲ್ ಆಗಿವೆ. ಟೈರುಗಳ ಸೈಜ್ ಸಹ ರಾಯಲ್ ಎನ್​ಫೀಲ್ಡ್​ಗಿಂತಲೂ ದೊಡ್ಡದಾಗಿಯೂ ಎತ್ತರವಾಗಿಯೂ ಇವೆ. ರಾಯಲ್ ಎನ್​ಫೀಲ್ಡ್​ನಲ್ಲಿ ಇಲ್ಲದ ಕೆಲವು ಸುರಕ್ಷತಾ ತಂತ್ರಜ್ಞಾನ ಮ್ಯಾವರಿಕ್​ನಲ್ಲಿದೆ. ಇನ್ನು ಬೆಲೆ ಸಹ ರಾಯಲ್ ಎನ್​ಫೀಲ್ಡ್​ ಕ್ಲಾಸಿಕ್ 350 ಯಷ್ಟೆ ಇದೆ. ಹೆಚ್ಚೆಂದರೆ ಒಂದು ಹತ್ತರಿಂದ ಹದಿನೈದು ಸಾವಿರ ಹೆಚ್ಚಿಗಿರಬಹುದು. ಅಲ್ಲದೆ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ 440 ಸಿಸಿ ಬೈಕ್ ಎಂದರೆ ಅದು ಹೊಂಡಾ ಮ್ಯಾವರಿಕ್ ಮಾತ್ರ.

Exit mobile version