YouTuber Ranveer Allahbadia
ಯೂಟ್ಯೂಬ್ ವಿಡಿಯೋಗಳಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ ದೇಶದ ಹೆಸರಾಂತ ಯೂಟ್ಯೂಬರ್ ಒಬ್ಬರ ಯೂಟ್ಯೂಬ್ ಖಾತೆ ಹ್ಯಾಕ್ ಆಗಿದ್ದು, ಖಾತೆಯಲ್ಲಿದ್ದ ಎಲ್ಲ ವಿಡಿಯೋಗಳನ್ನು ಹ್ಯಾಕರ್ ಗಳು ಡಿಲೀಟ್ ಮಾಡಿದ್ದಾರೆ. ಖಾತೆಗೆ ‘ಟೆಸ್ಲಾ’ ಎಂದು ಮರುನಾಮಕರಣ ಮಾಡಿದ್ದು ಚಾನೆಲ್’ನಲ್ಲಿ ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್’ರ ವಿಡಿಯೋ ಅಪ್’ಲೋಡ್ ಮಾಡಿದ್ದಾರೆ.
ರಣ್ವೀರ್ ಅಲ್ಹಾಬಾದಿಯಾ ದೇಶದ ಖ್ಯಾತ ಯೂಟ್ಯೂಬರ್ ಗಳಲ್ಲಿ ಒಬ್ಬರು. ಯೂಟ್ಯೂಬ್ ವಿಡಿಯೋಗಳಿಂದ ಅತಿ ಹೆಚ್ಚು ಸಂಪಾದನೆ ಮಾಡುತ್ತಿದ್ದ ಟಾಪ್ 5 ಯೂಟ್ಯೂಬರ್’ಗಳಲ್ಲಿ ಅವರೂ ಸಹ ಒಬ್ಬರಾಗಿದ್ದರು ಆದರೆ ಈಗ ಅವರ ಚಾನೆಲ್ ಹ್ಯಾಕ್ ಆಗಿದ್ದು, ರಣ್ವೀರ್ ಮಾಡಿದ್ದ ಎಲ್ಲ ವಿಡಿಯೋಗಳನ್ನು ಹ್ಯಾಕರ್’ಗಳು ಡಿಲೀಟ್ ಮಾಡಿದ್ದಾರೆ. ಈ ಘಟನೆ ದೇಶದ ಇತರೆ ಯೂಟ್ಯೂಬರ್’ಗಳಲ್ಲಿ ದೊಡ್ಡ ಆತಂಕ ಉಂಟು ಮಾಡಿದೆ.
ರಣ್ವೀರ್ ಅಲ್ಹಾಬಾದಿಯಾ ಮೂರು ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದರು. ‘ಬೀರ್ ಬೈಸಿಪ್ಸ್’ ಅವರ ಪ್ರಮುಖ ಯೂಟ್ಯೂಬ್ ಚಾನೆಲ್, ಒಂದು ಖಾಸಗಿ ಯೂಟ್ಯೂಬ್ ಚಾನೆಲ ಮತ್ತು ಶಾರ್ಟ್ಸ್ ಗಳನ್ನು ಅಪ್ ಲೋಡ್ ಮಾಡಲು ಪ್ರತ್ಯೇಕ ಚಾನೆಲ್ ತೆರೆದಿದ್ದರು. ಈ ಮೂರು ಚಾನೆಲ್ ಗಳ ಪೈಕಿ ಅವರ ಪ್ರಮುಖ ಚಾನೆಲ್ ಆಗಿರುವ ‘ಬಿಯರ್ ಬೈಸೆಪ್ಸ್’, ಹಾಗೂ ಅವರ ಖಾಸಗಿ ಚಾನೆಲ್ ಹ್ಯಾಕ್ ಆಗಿದೆ. ಎರಡಕ್ಕೂ ‘ಎಲಾನ್ ಟ್ರಂಫ್ ಟೆಸ್ಲಾ ಲೈವ್’ ಮತ್ತು ‘ಟೆಸ್ಲಾ.ಎಲಾನ್.ಟ್ರಂಪ್’ ಎಂದು ಹೆಸರು ಬದಲಿಸಲಾಗಿದೆ.
ರಣ್ವೀರ್ ಅಲಹಾಬಾದಿಯಾ, ದೇಶದ ಹಲವು ಖ್ಯಾತನಾಮರನ್ನು ಸಂದರ್ಶನ ಮಾಡಿ ತಮ್ಮ ಎರಡೂ ಚಾನೆಲ್ ಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು. ವಿದೇಶಾಂಗ ಸಚಿವ ಜಯಶಂಕರ್ ಸೇರಿದಂತೆ ಹಲವಾರು ಖ್ಯಾತ ನಾಮ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು, ಕಲಾವಿದರು, ಸ್ಟಾರ್ ನಟ-ನಟಿಯರು, ಹಿಂದೂ ಸಂಘಟನೆಗಳ ಮುಖಂಡರು, ಫಿಟ್ ನೆಸ್ ಕೋಚ್’ಗಳು, ದೇಶದ ಖ್ಯಾತ ವೈದ್ಯರು, ದೇಶ, ವಿದೇಶದ ಖ್ಯಾತ ಯೂಟ್ಯೂಬರ್’ಗಳನ್ನು ಸಹ ಸಂದರ್ಶನ ಮಾಡಿದ್ದರು. ಆ ಎಲ್ಲ ವಿಡಿಯೋಗಳು ಈಗ ಡಿಲೀಟ್ ಆಗಿವೆ.
Online sale: ಬಿಗ್ ಬಿಲಿಯನ್ ಡೇ, ಗ್ರೇಟ್ ಇಂಡಿಯನ್ ಸೇಲ್ ಎಂಬ ಫ್ಲಿಪ್’ಕಾರ್ಟ್, ಅಮೆಜಾನ್’ನ ಮಂಕುಬೂದ
ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನೆಲ್ ಅನ್ನು ಕೆಲ ದುರ್ಷರ್ಮಿಗಳು ಹ್ಯಾಕ್ ಮಾಡಿದ್ದರು. ಅದರ ಬೆನ್ನಲ್ಲೆ ಈಗ ಖ್ಯಾತ ಯೂಟ್ಯೂಬರ್ ಚಾನೆಲ್ ಹ್ಯಾಕ್ ಆಗಿದೆ. ತನ್ನ ಚಾನೆಲ್ ಹ್ಯಾಕ್ ಆದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಣ್ವೀರ್, ‘ಬೀರ್ ಬೈಸೆಪ್ಸ್ ಸಾವನ್ನಪ್ಪಿದೆ, ಆ ಮೂಲಕ ನನ್ನ ವೃತ್ತಿ ಸಹ ಸಾವನ್ನಪ್ಪಿದೆ. ಇಷ್ಟು ದಿನ ನಿಮ್ಮೊಂದಿಗೆ ಇದ್ದ ಬಗ್ಗೆ ನನಗೆ ಖುಷಿ ಇದೆ’ ಎಂದು ಬರೆದುಕೊಂಡಿದ್ದಾರೆ.