Site icon Samastha News

OTT News: ಒಟಿಟಿಯಲ್ಲಿ ಲಭ್ಯ ಈ ಐದು ಬ್ಲಾಕ್‌ ಬಸ್ಟರ್‌ ಸಿನಿಮಾ: ವೀಕ್ಷಿಸುವುದು ಎಲ್ಲಿ?

OTT News

OTT News

ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಚಿತ್ರಮಂದಿರಗಳು ಬಣಗುಡುತ್ತಿವೆ. ಐಪಿಎಲ್‌ ಮತ್ತು ಲೋಕಸಭೆ ಚುನಾವಣೆಗಳಿದ್ದ ಕಾರಣ ಯಾವುದೇ ದೊಡ್ಡ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಈಗಲೂ ಸಹ ಟಿ20 ವಿಶ್ವಕಪ್, ಬಿರುಸಿನ ರಾಜಕೀಯ ಚಟುವಟಿಕೆಗಳು ಜೋರಾಗಿರುವ ಕಾರಣ ನಟರು ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಈ ಒಟಿಟಿ ಕಾಲದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಲೇ ಬೇಕೆಂದೇನೂ ಇಲ್ಲ. ಮನೆಯಲ್ಲಿದ್ದುಕೊಂಡೇ ಮೆಚ್ಚಿನ ನಟರ ಸಿನಿಮಾಗಳನ್ನು ವೀಕ್ಷಿಸಬಹುದು. ಇತ್ತೀಚೆಗೆ ಬಿಡುಗಡೆ ಆದ ಕೆಲವು ಬ್ಲಾಕ್‌ ಬಸ್ಟರ್‌ ಆಕ್ಷನ್‌ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಅಕ್ವಮ್ಯಾನ್ ಮತ್ತು ಲಾಸ್ಟ್ ಕಿಂಗ್‌ ಡಂ

2018ರ ಬ್ಲಾಕ್ ಬಸ್ಟರ್ ಸರಣಿ ಅಕ್ವಮ್ಯಾನ್ ನ ನಿರೀಕ್ಷೆಯ ‘ಅಕ್ವಾಮ್ಯಾನ್ ಮತ್ತು ಲಾಸ್ಟ್ ಕಿಂಗ್ಡಂ’ 2023ರಲ್ಲಿ ಬಿಡುಗಡೆ ಆಗಿ ಸೂಪರ್‌ ಹಿಟ್‌ ಆಗಿತ್ತು. ಈ ಸೂಪರ್ ಹೀರೋ ಸಿನಿಮಾವನ್ನು ಜೇಮ್ಸ್ ವ್ಯಾನ್ ನಿರ್ದೇಶಿಸಿದ್ದು, ಡಿಸಿ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. 1700 ಕೋಟಿ ರೂಪಾಯಿ ಬಜೆಟ್ ನ ಅದ್ಧೂರಿ ಸಿನಿಮಾ ಇದು. ಜೇಸನ್ ಮೊಮೋ, ಅಕ್ವಾಮ್ಯಾನ್ ಆಗಿ ನಟಿಸಿರುವ ಈ ಸಿನಿಮಾದಲ್ಲಿ ಅವರ ಸೋದರ ಆರ್ಮ್ ಪಾತ್ರದಲ್ಲಿ ಪ್ಯಾಟ್ರಿಕ್ ವಿಲ್ಸನ್ ನಟಿಸಿದ್ದಾರೆ. ಸಮುದ್ರದಾಳದಲ್ಲಿ ನಡೆಯುವ ಈ ಸಿನಿಮಾ ಅತ್ಯದ್ಬುತವಾದ ಸಾಹಸ ದೃಶ್ಯಗಳನ್ನು, ಅದ್ಧೂರಿ ವಿಎಫ್‌ಎಕ್ಸ್‌ ಹಾಗೂ ಸಮುದ್ರದಾಳದ ಅದ್ಭುತ ಪ್ರಪಂಚವನ್ನು ಒಳಗೊಂಡಿದೆ. ಈ ಅದ್ಧೂರಿ ಚಿತ್ರ ಜಿಯೋ ಸಿನಿಮಾಸ್‌ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಫಾಸ್ಟ್ ಎಕ್ಸ್

ಫಾಸ್ಟ್‌ ಆಂಡ್‌ ಫ್ಯೂರಿಯಸ್‌ ಸಿನಿಮಾ ಸರಣಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ವರ್ಗವೇ ಇದೆ. ಇತ್ತೀಚೆಗೆ ಬಿಡುಗಡೆ ಆದ ಫಾಸ್ಟ್‌ ಎಕ್ಸ್‌ ಸಿನಿಮಾ ಇದೀಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ವಿನ್ ಡೀಸೆಲ್, ಮೊರಿಟ್ಜ್, ಜೆಫ್ ಕಿರ್ಸ್ ಚೆನ್ ಬೌಮ್, ಸಮಂತಾ ವಿನ್ಸೆಂಟ್ ಮತ್ತು ಜಸ್ಟಿನ್ ಲಿನ್ ನಟಿಸಿದ್ದು, ಈ ಸಿನಿಮಾದ ಬಜೆಟ್‌ ಬರೋಬ್ಬರಿ 3150 ಕೋಟಿ ರೂಪಾಯಿಗಳು. ಎಫ್9(2021) ಸಿಕ್ವೆಲ್ ಆಗಿರುವ ಇದು ಫಾಸ್ಟ್ ಅಂಡ್ ಫ್ಯೂರಿಯಸ್ ಫ್ರಾಂಚೈಸಿಯಲ್ಲಿ ಹತ್ತನೇ ಪ್ರಮುಖ ಕಂತು ಮತ್ತು 11ನೇ ಫ್ರಾಂಚೈಸಿ ಸಿನಿಮಾ ಇದಾಗಿದೆ. ವಿನ್ ಡೀಸೆಲ್ ಡೊಮಿನಿಕ್ ಟೊರೆಟ್ಟೊ ಆಗಿ ನಟಿಸಿರುವ ಈ ಚಲನಚಿತ್ರವು ಪ್ರಭಾವಿ ನಟ ನಟಿಯರನ್ನು ಹೊಂದಿದ್ದು ಅದರಲ್ಲಿ ಮಿಷೆಲ್ ರೊಡ್ರಿಗಸ್, ಟೈರೀಸ್ ಗಿಬ್ಸನ್, ಕ್ರಿಸ್ “ಲುಡಾಕ್ರಿಸ್” ಬ್ರಿಡ್ಜಸ್ ಮತ್ತಿತರರು ಇದ್ದಾರೆ. ಈ ಸಿನಿಮಾ ಸಹ ಜಿಯೋ ಸಿನಿಮಾಸ್‌ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಜಿಯೋ: ಕೇವಲ 29 ರೂಪಾಯಿಗೆ ವೀಕ್ಷಿಸಿ ಸಿನಿಮಾ, ಧಾರಾವಾಹಿ, ಕ್ರಿಕೆಟ್ ಎಲ್ಲ

ಇಂಡಿಯಾನಾ ಜೋನ್ಸ್ ಅಂಡ್ ಡಯಲ್ ಆಫ್ ಡೆಸ್ಟಿನಿ

ಇಂಡಿಯಾನಾ ಜೋನ್ಸ್‌ ಸಿನಿಮಾ ಸರಣಿ ಬಹಳ ಹಳೆಯ ಮತ್ತು ಯಶಸ್ವಿ ಸಿನಿಮಾ ಸರಣಿ. ಜೇಮ್ಸ್ ಮಾರಿಗೋಲ್ಡ್ ನಿರ್ದೇಶನ ಮತ್ತು ಕ್ಯಾಥ್ಲೀನ್ ಕೆನಡಿ, ಫ್ರಾಂಕ್ ಮಾರ್ಷಲ್ ಮತ್ತು ಸಿಮೋನ್ ಎಮ್ಯಾನ್ಯುಯೆಲ್ ನಿರ್ಮಾಣದ ಈ ಸಿನಿಮಾದ ಬಜೆಟ್ 2700 ಕೋಟಿ ರೂಪಾಯಿ. ಇಂಡಿಯಾನಾ ಜೋನ್ಸ್ ಐದನೆಯ ಮತ್ತು ಅಂತಿಮ ಕಂತಾಗಿರುವ ಈ ಚಲನಚಿತ್ರವು ಇಂಡಿಯಾನಾ ಜೋನ್ಸ್ ಅಂಡ್ ಕಿಂಗ್ಡಂ ಆಫ್ ಕ್ರಿಸ್ಟಲ್ ಸ್ಕಲ್ ಸರಣಿಯಾಗಿದ್ದು ಈ ಚಲನಚಿತ್ರವು ಹ್ಯಾರಿಸನ್ ಫೋರ್ಡ್, ಜಾನ್ ರಿಸ್-ಡೇವಿಸ್ ಮತ್ತು ಕರೆನ್ ಅಲೆನ್ ಅವರನ್ನು ಪ್ರಮುಖ ಪಾತ್ರಗಳಲ್ಲಿ ಹೊಂದಿದೆ. ಹೊಸಬರಾದ ಫೋಬಿ ವಾಲರ್-ಬ್ರಿಡ್ಜ್, ಅಂಟೋನಿಯೊ ಬಂದೆರಾಸ್, ಟೋಬಿ ಜೋನ್ಸ್, ಬಾಯ್ಸ್ ಹೋಲ್ಡ್ ಬ್ರೂಕ್, ಎಥನ್ನ್ ಇಸಿಡೋರ್ ಮತ್ತು ಮ್ಯಾಡ್ಸ್ ಮಿಕೆಲ್ಸೆನ್ ನಟಿಸಿದ್ದಾರೆ. 1969ರಲ್ಲಿ ನಡೆಯುವ ಈ ಕಥೆಯು ಇಂಡಿ ಮತ್ತು ಆತನ ಮೊಮ್ಮಗಳು ಹೆಲೆನಾ ಅವರು ಮಾಜಿ ನಾಜಿಯಿಂದ ಬದಲಾದ ನಾಸಾ ವಿಜ್ಞಾನಿಯ ವಿರುದ್ಧದ ಹೋರಾಟವಾಗಿದೆ. ಈ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ ನಲ್ಲಿ ಲಭ್ಯವಿದೆ.

ಜವಾನ್

ಶಾರುಖ್‌ ಖಾನ್‌ ನಟಿಸಿ ತಮಿಳಿನ ಅಟ್ಲಿ ನಿರ್ದೇಶಿಸಿರುವ “ಜವಾನ್”‌ ಪಕ್ಕಾ ಥ್ರಿಲ್ಲರ್ ಸಿನಿಮಾ ಆಗಿದ್ದು, ಕಳೆದ ವರ್ಷ ಬಿಡುಗಡೆ ಆದ ಈ ಸಿನಿಮಾ ಸೂಪರ್-ಡೂಪರ್‌ ಹಿಟ್‌ ಎನಿಸಿಕೊಂಡಿದೆ. ಸಿನಿಮಾವನ್ನು ಗೌರಿ ಖಾನ್ ಮತ್ತು ಗೌರವ್ ವರ್ಮಾ ರೆಡ್ ಚಿಲ್ಲೀಸ್ ಎಂಟರ್ಟೈನ್ ಮೆಂಟ್ ಅಡಿಯಲ್ಲಿ ನಿರ್ಮಿಸಿದ್ದು ರೂ.300 ಕೋಟಿ ಬಜೆಟ್ ಹೊಂದಿದೆ. ಶಾರೂಕ್ ಖಾನ್ ತಂದೆ ಹಾಗೂ ಮಗ ಎರಡು ಪಾತ್ರಗಳಲ್ಲಿ ನಡಿಸಿದ್ದು ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಎನಿಸಿಕೊಂಡಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಯಶ್ ‘ಟಾಕ್ಸಿಕ್’ ಸಿನಿಮಾಕ್ಕೆ ಕರೀನಾ ಕಪೂರ್ ನಾಯಕಿಯಲ್ಲ, ದಕ್ಷಿಣದ ನಾಯಕಿಯೇ ಫೈನಲ್!

ಲಿಯೊ

ಜನಪ್ರಿಯ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶಿಸಿದ “ಲಿಯೋ” ಸಿನಿಮಾದಲ್ಲಿ ದಳಪತಿ ವಿಜಯ್‌ ನಟಿಸಿದ್ದು, ಸಿನಿಮಾ ಕುತೂಹಲ ಭರಿತ ಆಕ್ಷನ್‌ ಥ್ರಿಲ್ಲರ್‌ ಕತೆಯನ್ನು ಒಳಗೊಂಡಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೊ ನಿರ್ಮಾಣ ಮಾಡಿರುವ ಈ ಸಿನಿಮಾ 300 ಕೋಟಿ ಬಜೆಟ್ ಹೊಂದಿದೆ. ಈ ತಮಿಳು ಆಕ್ಷನ್ ಥ್ರಿಲ್ಲರ್ ನಲ್ಲಿ ವಿಜಯ್ ನಾಯಕ ಪಾತ್ರ ವಹಿಸಿದ್ದು ಅವರೊಂದಿಗೆ ಸಂಜಯ್ ದತ್, ಅರ್ಜುನ್ ಸರ್ಜಾ, ತ್ರಿಶಾ ಮತ್ತಿತರರು ನಟಿಸಿದ್ದಾರೆ. ಲೋಕೇಶ್ ಸಿನಿಮ್ಯಾಟಿಕ್‌ ಲೋಕದ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೂ ಲೋಕೇಶ್‌ ಈ ಮೊದಲು ನಿರ್ದೇಶಿಸಿದ್ದ ಖೈದಿ ಹಾಗೂ ವಿಕ್ರಂ ಸಿನಿಮಾದ ಕತೆಗೂ ಲಿಂಕ್‌ ಇದೆ. ಈ ಸಿನಿಮಾ “ಎ ಹಿಸ್ಟರಿ ಆಫ್ ವಯೊಲೆನ್ಸ್”ನಿಂದ ಸ್ಫೂರ್ತಿ ಪಡೆದಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

Exit mobile version