Site icon Samastha News

JIO: ಕೇವಲ 29 ರೂಪಾಯಿಗೆ ವೀಕ್ಷಿಸಿ ಸಿನಿಮಾ, ಧಾರಾವಾಹಿ, ಕ್ರಿಕೆಟ್ ಎಲ್ಲ

JIO

JIO

ಅಂತರ್ಜಾಲ ಕ್ಷೇತ್ರದಲ್ಲಿ ಭಾರತದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದ ಜಿಯೋ, ಒಟಿಟಿ ಮೂಲಕವೂ ಹೊಸ ಕ್ರಾಂತಿ ಸೃಷ್ಟಿಸುತ್ತಿದೆ. ಇತರೆ ಒಟಿಟಿಗಳು ವರ್ಷಕ್ಕೆ ಎರಡು ಸಾವಿರ, ತಿಂಗಳಿಗೆ 700-800 ರೂಪಾಯಿ ಶುಲ್ಕಗಳನ್ನು ಪಡೆಯುತ್ತಿರುವ ಸಮಯದಲ್ಲಿ ಜಿಯೋ ತಿಂಗಳಿಗೆ 29 ರೂಪಾಯಿಗೆ ಏಕಕಾಲಕ್ಕೆ ನಾಲ್ಕು ಮೊಬೈಲ್ ಡಿವೈಸ್​ಗಳಲ್ಲಿ ಸಿನಿಮಾ, ಧಾರಾವಾಹಿ, ಕ್ರಿಕೆಟ್ ಇನ್ನಿತರೆ ಮನೊರಂಜನಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಒದಗಿಸಿದೆ.

ಭಾರತದ ಮುಂಚೂಣಿಯ ಸ್ಟ್ರೀಮಿಂಗ್ ಪ್ಲಾಟ್ ಫಾರಂ ಜಿಯೊಸಿನಿಮಾ ಇತ್ತೀಚೆಗೆ ತನ್ನ ಜಾಹೀರಾತು ಮುಕ್ತ ಪ್ಲಾನ್- ಜಿಯೊಸಿನಿಮಾ ಪ್ರೀಮಿಯಂ ಅನ್ನು ಪ್ರಾರಂಭಿಕ ಬೆಲೆ ತಿಂಗಳಿಗೆ ಕೇವಲ ₹29/ಕ್ಕೆ ಒಂದು ಡಿವೈಸ್ ಗೆ ಮತ್ತು ಏಕಕಾಲಕ್ಕೆ ನಾಲ್ಕು ಡಿವೈಸ್ ಗಳಿಗೆ ತಿಂಗಳಿಗೆ ₹89/ರಂತೆ ಪ್ರಕಟಿಸಿದೆ. ಚಂದಾದಾರಿಕೆಯ ಭಾಗವಾಗಿ ಸದಸ್ಯರು ಕಲರ್ಸ್ ನ ಅವರ ಅಚ್ಚುಮೆಚ್ಚಿನ ಧಾರಾವಾಹಿಗಳಾದ ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ಶ್ರೀಗೌರಿ, ಅಂತರ್ ಪಟ ಮತ್ತಿತರೆ ಕಾರ್ಯಕ್ರಮಗಳನ್ನು ಹಾಗೂ ವಯಾಕಾಂ18 ನೆಟ್ವರ್ಕ್ ಚಾನೆಲ್ ಗಳಾದ ನಿಕಲೊಡಿಯೊನ್, ಎಂಟಿವಿ ಮತ್ತಿತರೆ ಇಡೀ ಕಲರ್ಸ್ ಸ್ಥಳೀಯ ಭಾಷೆಯ ಚಾನೆಲ್ ಗಳ ಇಡೀ ವ್ಯಾಪ್ತಿಯನ್ನು ಮುಂಚೆಯೇ ಪಡೆಯುತ್ತಾರೆ.

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

ಅಷ್ಟೇ ಅಲ್ಲ, ಜಿಯೊಸಿನಿಮಾ ಪ್ರೀಮಿಯಂ ಮುಂಚೆಯೇ ಲಭ್ಯತೆ ನೀಡುವುದರ ಆಚೆಗೂ ಹೋಗುತ್ತದೆ ಮತ್ತು ವಯಾಕಾಂ18ರ 20+ ಟಿ.ವಿ. ಚಾನೆಲ್ ಗಳ ಸ್ಟ್ರೀಮಿಂಗ್ ಲಭ್ಯವಿರುತ್ತದೆ. ಇದು ಜಾಹೀರಾತು ಮುಕ್ತ ಅನುಭವ, ಹೈ-ಡೆಫನಿಷನ್ ಗುಣಮಟ್ಟ(4ಕೆವರೆಗೆ) ಮತ್ತು ಆಫ್ಲೈನ್ ವೀಕ್ಷಣೆಗೆ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ನೀಡುವುದರಿಂದ ಚಲನೆಯಲ್ಲಿ ವೀಕ್ಷಿಸಲು ಅಥವಾ ಬಫರಿಂಗ್ ತಪ್ಪಿಸಲು ಅತ್ಯಂತ ಸೂಕ್ತವಾಗಿದೆ.

ಜಿಯೊಸಿನಿಮಾ ಪ್ರೀಮಿಯಂಗೆ ಚಂದಾದಾರರಾಗಿರಿ ಮತ್ತು ನಿಮ್ಮ ಅಚ್ಚುಮೆಚ್ಚಿನ ಧಾರಾವಾಹಿಗಳನ್ನು ಟಿ.ವಿ.ಗಿಂತ ಮುಂಚೆಯೇ ಕೇವಲ ತಿಂಗಳಿಗೆ ₹29ರಲ್ಲಿ ಆನಂದಿಸಬಹುದಾಗಿದೆ. ಜಿಯೋನಲ್ಲಿ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರೆ ಕೆಲವು ಭಾಷೆಗಳ ಸೂಪರ್ ಹಿಟ್ ಸಿನಿಮಾಗಳು ಸ್ಟ್ರೀಮ್ ಆಗುತ್ತಿವೆ. ಜೊತೆಗೆ ಕ್ರಿಕೆಟ್ ಲೈವ್ ಪ್ರಸಾರವೂ ಆಗುತ್ತಿದೆ.

Exit mobile version