SIP
ಹಣವನ್ನು ಮರೆಯಬಾರದು, ಹೂಡಿಕೆಯನ್ನೂ ಅಷ್ಟೆ, ಆದರೆ ಇಲ್ಲೊಬ್ಬ ಆಸಾಮಿ ಹಣ ಹೂಡಿಕೆ ಮಾಡಿ ಅದರ ಬಗ್ಗೆ ಮರೆತೇ ಹೋಗಿದ್ದ. ಆದರೆ ಹಾಗೆ ಮರೆತು ಹೋಗಿದ್ದ ಹಣದಿಂದಲೇ ಆತ ಕೋಟ್ಯಧಿಪತಿ ಆಗಿದ್ದಾನೆ. ಗೋವಾದ ಮ್ಯೂಚ್ಯುಲ್ ಫಂಡ್ ಡೈರೆಕ್ಟರ್ ಒಬ್ಬರ ಗ್ರಾಹಕನ ಕತೆ ಇದು. ಒಂಬತ್ತು ವರ್ಷಗಳ ಹಿಂದೆ ಹೂಡಿಕೆ ಆರಂಭಿಸಿ ಮರೆತು ಹೋಗಿದ್ದ ಮ್ಯೂಚಲ್ ಫಂಡ್ ನಿಂದಾಗಿ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಾನೆ.
ಗೋವಾದ ಮ್ಯೂಚ್ಯುಲ್ ಫಂಡ್ ಅಡ್ವೈಸರ್, ಸೆಲ್ಸೊ ಫರ್ನಾಂಡೀಸ್ ರ ಗ್ರಾಹಕನೊಬ್ಬಾತ 2008 ರಲ್ಲಿ 10 ಸಾವಿರ ರೂಪಾಯಿಯ ಮ್ಯೂಚ್ಯುಲ್ ಫಂಢ್ ಎಸ್ಐಪಿ ಪ್ರಾರಂಭ ಮಾಡಿದ್ದರಂತೆ. ಎನ್ಎವಿ ಮಾರ್ಗ್ ಫೈನ್ಯಾನ್ಸ್ ಮೂಲಕ ಆತ ಹೂಡಿಕೆ ಆರಂಭಿಸಿದ್ದಾನೆ. ಸತತವಾಗಿ ಐದು ವರ್ಷ ಅಂದರೆ 2013 ರ ವರೆಗೆ ಹೂಡಿಕೆ ಮಾಡಿದ ಆತ ಆ ಬಳಿಕ ಕುವೈತ್’ಗೆ ಉದ್ಯೋಗಕ್ಕಾಗಿ ಹೋಗಿದ್ದಾನೆ. ಆ ಬಳಿಕ ಮ್ಯೂಚ್ಯುಲ್ ಫಂಡ್ ಅಡ್ವೈಸರ್ ಅವರ ಸಂಪರ್ಕಕ್ಕೆ ಆತ ಸಿಕ್ಕಿಲ್ಲ. ಮುಂದೆ 10 ಸಾವಿರದ ಎಸ್ಐಪಿ ಸಹ ತುಂಬಿಲ್ಲ. 60 ತಿಂಗಳು ತಲಾ ಹತ್ತು ಸಾವಿರದಂತೆ ಹೂಡಿಕೆ ಮಾಡಿದ್ದ ಆ ವ್ಯಕ್ತಿ 6 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ. ಅದು ಆತನ ಮೊದಲ ಹೂಡಿಕೆ ಆಗಿತ್ತಂತೆ.
Investment: ಹಣ ಎಲ್ಲಿ ಹೂಡಿಕೆ ಮಾಡ್ತೀರಿ? ಬೆಂಗಳೂರಿನ ಕೋಟ್ಯಧೀಶ ಕೊಟ್ಟರು ಉತ್ತರ
2022 ರಲ್ಲಿ ಆ ವ್ಯಕ್ತಿ ಭಾರತಕ್ಕೆ ವಾಪಸ್ಸಾಗಿದ್ದಾನೆ. ಆಗ ಆತ ಮತ್ತೆ ಎನ್ಎವಿ ಮಾರ್ಗ್’ಗೆ ಹೋಗಿ ತನ್ನ ಮ್ಯೂಚ್ಯುಲ್ ಫಂಡ್ ಬಗ್ಗೆ ವಿಚಾರಿಸಿದಾಗ ಆತನಿಗೆ ಆಸ್ಚರ್ಯ ಆಗಿದೆ. ಆತ ಹೂಡಿಕೆ ಮಾಡಿದ್ದ 6 ಲಕ್ಷ ರೂಪಾಯಿ ಕೇವಲ ಒಂಬತ್ತು ವರ್ಷದಲ್ಲಿ ಒಂದು ಕೋಟಿ ರೂಪಾಯಿ ಆಗಿತ್ತು! ಇದನ್ನು ಕಂಡು ಖುಷಿಯಾದ ಆ ಗ್ರಾಹಕ ಹೂಡಿಕೆ ಮುಂದುವರೆಸಿದ್ದಾರೆ. ಹೂಡಿಕೆ ಮೊತ್ತವನ್ನೂ ಹೆಚ್ಚು ಮಾಡಿದ್ದಾರೆ. 2024 ಕ್ಕೆ ಆತನ ಮ್ಯೂಚ್ಯುಲ್ ಫಂಡ್ ಮೊತ್ತ 1.40 ಕೋಟಿ ಆಯ್ತಂತೆ ಬಳಿಕ ಅದನ್ನು ಬೇರೊಂದು ಹೂಡಿಕೆಗೆ ಬದಲಾಯಿಸಿಕೊಂಡಿದ್ದಾರೆ ಆ ಗ್ರಾಹಕ.