Indian Government: ಜೂನ್ 1 ರಿಂದ ಬದಲಾಗಲಿವೆ ಡ್ರೈವಿಂಗ್ ಲೈಸೆನ್ಸ್ ನಿಯಮಗಳು, ಇಲ್ಲಿವೆ ತಿಳಿದುಕೊಳ್ಳಬೇಕಾದ ಅಂಶಗಳು

0
158
Indian Government

Indian Government

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭವಲ್ಲ. ಹಲವು ಬಾರಿ ಸರ್ಕಾರಿ ಕಚೇರಿಗಳನ್ನು ಸುತ್ತಬೇಕು, ಹಲವು ದಾಖಲೆಗಳನ್ನು ಸಲ್ಲಿಸಬೇಕು, ಅದಾದ ಬಳಿಕ ಪರೀಕ್ಷೆ ಎದುರಿಸಿ ಪಾಸ್ ಆಗಬೇಕು. ಈ ಪ್ರಕ್ರಿಯೆಯಲ್ಲಿರುವ ಕಠಿಣತೆಯಿಂದಲೇ ಅಡ್ಡ ದಾರಿಯಲ್ಲಿ ಹಣ ಕೊಟ್ಟು ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಅರ್ಹರಲ್ಲದವರು ಹಣ ಕೊಟ್ಟು ಲೈಸೆನ್ಸ್ ಪಡೆಯುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತದೆ.

ಆರ್ಟಿಓ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಗ್ರಾಮೀಣ ಭಾಗದವರಿಗೆ ಲೈಸೆನ್ಸ್ ಪಡೆಯಲು ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಈ ನಿಯಮಗಳು ಕೂಮ್ 1 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳು ಈ ಕೆಳ ಕಂಡಂತಿವೆ.

* ಡ್ರೈವಿಂಗ್ ಶಾಲೆಗಳಲ್ಲಿಯೇ ಪರೀಕ್ಷೆ

ಈ ಮೊದಲು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಆರ್ಟಿಓ ಕಚೇರಿಗೆ ಬಂದು ಚಾಲನಾ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಇನ್ನು ಮುಂದೆ ಪರವಾನಗಿ ಹೊಂದಿರುವ ಡ್ರೈವಿಂಗ್ ಸ್ಕೂಲ್ ಗಳಲ್ಲಿಯೇ ವಾಹನ ಚಲಾಯಿಸಿ ಅವರಿಂದ ಸರ್ಟಿಫಿಕೇಟ್ ಪಡೆದು ಅದನ್ನು ಆರ್ಟಿಓಗೆ ಸಲ್ಲಿಸಿದರೆ ಸಾಕು ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ. ಆರ್ಟಿಓ ಅಧಿಕಾರಿಗಳ ಮುಂದೆಯೇ ಗಾಡಿ ಓಡಿಸಬೇಕು ಎಂದೇನಿಲ್ಲ.

* ದಾಖಲಾತಿ ಇಲ್ಲದೆಯೂ ಪರವಾನಗಿ

ಈ ಮೊದಲು ಟಿಸಿ ಅಥವಾ ನಿರ್ದಿಷ್ಟ ಶಾಲಾ ದಾಖಲಾತಿ ಇದ್ದರಷ್ಟೆ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಶಾಲಾ ದಾಖಲಾತಿ ಇಲ್ಲದವರು ಸಹ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು.

* ಡ್ರೈವಿಂಗ್ ಶಾಲೆಗಳ ಗುರುತಿಸುವಿಕೆ

ಕೇಂದ್ರ ಸರ್ಕಾರ ಡ್ರೈವಿಂಗ್ ಶಾಲೆಗಳನ್ನು ಗುರುತಿಸಿ ಅವರಿಗೆ ಅಭ್ಯರ್ಥಿಗಳ ಡ್ರೈವಿಂಗ್ ಟೆಸ್ಟ್ ಪಡೆಯುವ ಅಧಿಕಾರ ನೀಡಲಿದೆ. ಡ್ರೈವಿಂಗ್ ಟೆಸ್ಟ್ ಪಡೆಯಲು ಕೆಲವು ನಿಯಮಗಳನ್ನು ಸಹ ವಿಧಿಸಲಿದೆ.

* ದಂಡದ ಮೊತ್ತ ಹೆಚ್ಚಳ

ಲರ್ನಿಂಗ್ ಲೈಸೆನ್ಸ್ ಪಡೆದವರು ಸೂಕ್ತ ಸಂಚಾರಿ ಚಿತ್ರಗಳನ್ನು ಚಾಹನದ ಮೇಲೆ ಅಂಟಿಸದೇ ವಾಹನ ಚಲಾಯಿಸಿದರೆ 2000 ರೂ ದಂಡ ಪಾವತಿಸಬೇಕಾಗುತ್ತದೆ. ಈ ಮೊದಲು ದಂಡಸ ಪ್ರಮಾಣ ಕಡಿಮೆ ಇತ್ತು.ಇನ್ನು ಅಪ್ರಾಪ್ತರಿಗೆ ಓಡಿಸಲು ಗಾಡಿ ಕೊಟ್ಟರೆ ಪೋಷಕರು 25 ಸಾವಿರ ದಂಡ ಪಾವತಿಸಬೇಕಾಗುತ್ತದೆ.

* ಅರ್ಜಿ ಸಲ್ಲಿಸುವಿಕೆ ಸರಳ

ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈಗಾಗಲೇ ಆನ್ ಲೈನ್ ಮಾಡಲಾಗಿದೆ. ಹೊಸ ನಿಯಮಗಳು ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಗೊಳಿಸಲಿವೆ.

Sukesh Chandrashekhar: ಹರಾಜಾಗಲಿವೆ ಬೆಂಗಳೂರಿನ ಮಹಾವಂಚಕ ಸುಖೇಶನ 26 ಐಶಾರಾಮಿ ಕಾರುಗಳು

* ಅರ್ಜಿ ಶುಲ್ಕದಲ್ಲಿ ಬದಲಾವಣೆ

ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಗೆ ಅರ್ಜಿ ಸಲ್ಲಿಸುವ ಶುಲ್ಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಲರ್ನರ್ ಲೈಸೆನ್ಸ್ ಗೆ 200, ಡ್ರೈವಿಂಗ್ ಲೈಸೆನ್ಸ್ 200 ರೂ. ಅಂತರಾಷ್ಟ್ರೀಯ ಲೈಸೆನ್ಸ್ ಗೆ 1000 ರೂ. ಲೇಸೆನ್ಸ್ ರಿನೀವಲ್ ಗೆ 200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

LEAVE A REPLY

Please enter your comment!
Please enter your name here