Food Safety: ಮಾರುಕಟ್ಟೆಯಲ್ಲಿವೆ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣು, ಸರ್ಕಾರ ನೀಡಿದೆ ಎಚ್ಚರಿಕೆ

0
149
Food safety

Food Safety

ಇದು ಮಾವಿನ ಹಣ್ಣಿನ ಸೀಸನ್‌. ಹಲವಾರು ರಸಭರಿತ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿವೆ. ಮಲಗೋವಾ, ರಸಪುರಿ, ಅಲ್ಫೋನ್ಸ್‌, ಕೇಸರ್‌, ಬದಾಮಿ ಇನ್ನೂ ಹಲವಾರು ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿದ್ದು ಒಂದಕ್ಕಿಂತಲೂ ಒಂದು ಭಿನ್ನ ರುಚಿ ಒಳಗೊಂಡಿದ್ದು ಮಾವು ಪ್ರಿಯರು ನಾಲಗೆ ರುಚಿ ತಣಿಸುತ್ತಿವೆ. ಆದರೆ ಕೆಲವು ಲಾಭಕೋರ ವ್ಯಾಪಾರಿಗಳು ಮಾವನ್ನು ಹಣ್ಣು ಮಾಡಲು ರಾಸಾಯನಿಕಗಳು ಬಳಸಿ ಅವುಗಳನ್ನು ಸೇವನೆಗೆ ಅಯೋಗ್ಯವನ್ನಾಗಿಸಿದ್ದಾರೆ. ಇದೀಗ ಸರ್ಕಾರದ ಎಫ್‌ಎಸ್‌ಎಸಎಐ (ಫುಡ್‌ ಸೇಫ್ಟಿ) ಮಾವಿನ ಹಣ್ಣಿನ ಸೇವನೆ ಬಗ್ಗೆ ಎಚ್ಚರಿಕೆ ನೀಡಿದೆ.

ಮಾವನ್ನು ಕೃತಕವಾಗಿ ಹಣ್ಣಾಗಿಸಲು ಕೆಲವು ವ್ಯಾಪಾರಿಗಳು ನಿಷೇಧಿತ ಕ್ಯಾಲ್ಶಿಯಂ ಕಾರ್ಬೈಡ್‌ ಅನ್ನು ಬಳಸುತಾರೆ. ಇದರ ಸೇವನೆ ಅತ್ಯಂತ ಅಪಾಯಕಾರಿ. ಕ್ಯಾಲ್ಷಿಯಂ ಕೃಬೈಡ್‌ ಬಳಕೆಯನ್ನು 2011 ರಲ್ಲಿಯೇ ನಿಷೇಧ ಮಾಡಲಾಗಿದೆ. ಆದರೂ ಸಹ ಕೆಲವು ವ್ಯಾಪಾರಿಗಳು ಮಾವಿನ ಕಾಯಿನ್ನು ಶೀಘ್ರವಾಗಿ ಹಣ್ಣು ಮಾಡಲು ಇದನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಮಾವಿನ ಹಣ್ಣುಗಳು ವಿಷಕಾರಿಯಾಗುತ್ತಿವೆ ಎಂದಿದೆ ಎಫ್‌ಎಸ್‌ಎಸಎಐ.

ಈ ವಿಷಕಾರಿ ಮಾವಿನ ಹಣ್ಣನನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆಯೂ ಕೆಲವು ಸೂಚನೆಗಳನ್ನು ಎಫ್‌ಎಸ್‌ಎಸಎಐ ಹಂಚಿಕೊಂಡಿದೆ. ಮಾವಿನ ಹಣ್ಣಿನ ಮೇಲೆ ಕಪ್ಪು ಮಚ್ಚೆಗಳು ಇದ್ದರೆ ಅದನ್ನು ಅಪಾಯಕಾರಿ ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದೆ ಎಂದು ಅರ್ಥ. ಅಪಾಯಕಾರಿ ಕ್ಯಾಲ್ಷಿಯಂ ಕೃಬೈಡ್‌ ಬಳಸಿ ಹಣ್ಣು ಮಾಡಿದ ಮಾವಿನ ಹಣ್ಣುಗಳು ಬಹಳ ಗಾಢವಾದ ವಾಸನೆಯನ್ನು ಹೊಂದಿರುತ್ತವೆ. ಅಲ್ಲದೆ ಅವುಗಳ ರುಚಿ ತುಸು ಭಿನ್ನವಾಗಿರುತ್ತವೆ. ಹಾಗೂ ಇವು ಬಹಳ ಗಾಢವಾದ ಹಳದಿ ಬಣ್ಣ ಹೊಂದಿರುತ್ತವೆ. ಇವು ಬೇಗನೆ ಕೆಡುತ್ತವೆ ಸಹ. ಇಂಥಹಾ ಹಣ್ಣುಗಳ ಖರೀದಿಯನ್ನು ಅವಾಯ್ಡ್‌ ಮಾಡಿ ಎಂದಿದೆ ಎಫ್‌ಎಸ್‌ಎಸಎಐ.

Kalki 2898 AD: ಕಲ್ಕಿ ಸಿನಿಮಾದ ನಟರು ಪಡೆದ ಸಂಭಾವನೆ ಎಷ್ಟು?

ಮಾವಿನ ಕಾಯನ್ನು ಹಣ್ಣು ಮಾಡಲು ಹಲವು ವ್ಯಾಪಾರಿಗಳು ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ರಾಸಾಯನಿಕ ಮಿಶ್ರಿತ ಮಾವು ತಿನ್ನುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಮಾವಿನ ಹಣ್ಣನ್ನು ಮನೆಗೆ ತಂದಾಗ ಅದನ್ನು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನಸಿಟ್ಟು ಬಳಿಕ ಸರಿಯಾಗಿ ಒರೆಸಿ ಆ ನಂತರ ಸೇವಿಸಿದರೆ ರಾಸಾಯನಿಕಗಳ ಪ್ರಭಾವ ಕಡಿಮೆ ಇರುತ್ತದೆ ಎನ್ನಲಾಗುತ್ತದೆ.

LEAVE A REPLY

Please enter your comment!
Please enter your name here