Smart Glasses
ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾದ ಬೆಳವಣಿಗೆಗಳು ನಡೆಯುತ್ತಿವೆ. ಮೊಬೈಲ್ ಸಾಧನಗಳು ಪ್ರತಿ ವರ್ಷವೂ ಉತ್ತಮಗೊಳ್ಳುತ್ತಾ ಸಾಗುತ್ತಿವೆ, ಹೊಸ ಹೊಸ ತಂತ್ರಜ್ಞಾನ ಸೇರಿಕೊಳ್ಳುತ್ತಿವೆ. ಈ ತಂತ್ರಜ್ಞಾನ ಕ್ರಾಂತಿಯಲ್ಲಿ ಗೂಗಲ್ ಮುಂಚೂಣಿಯಲ್ಲಿ ನಿಂತಿದೆ. ಇದೀಗ ‘ಮಿಕ್ಸಡ್ ರಿಯಾಲಿಟಿ’ ತಂತ್ರಜ್ಞಾನದ ಅಡಿ ಹೊಸ ರೀತಿಯ ಕನ್ನಡಕ ನಿರ್ಮಾಣ ಆಗಲಿದೆ.
ಹೌದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕನ್ನಡಕದ ಆವೀಷ್ಕಾರ ಚಾಲ್ತಿಯಲ್ಲಿದ್ದು, ಈ ಯೋಜನೆಗಾಗಿ ಎರಡು ದೈತ್ಯ ಸಂಸ್ಥೆಗಳಾದ ಗೂಗಲ್ ಮತ್ತು ಸ್ಯಾಮ್’ಸಂಗ್ ಕೈ ಜೋಡಿಸಿವೆ. ಈಗಾಗಲೆ ಗೂಗಲ್ ಗ್ಲಾಸ್ ಅನ್ನು ಆವಿಷ್ಕರಿಸಿತ್ತು. ಆದರೆ ಆ ಗ್ಲಾಸ್ ನಲ್ಲಿ ಸಾಕಷ್ಟು ನ್ಯೂನತೆಗಳಿದ್ದ ಕಾರಣ ಆ ಗೂಗಲ್ ಗ್ಲಾಸ್ ಯೋಜನೆಯನ್ನು ಮುಂದುವರೆಸಿರಲಿಲ್ಲ. ಆದರೆ ಈಗ ಸ್ಯಾಮ್’ಸಂಗ್ ಜೊತೆ ಕೈ ಜೋಡಿಸಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕನ್ನಡಕ ನಿರ್ಮಾಣಕ್ಕೆ ಮುಂದಾಗಿದೆ.
ಗೂಗಲ್-ಸ್ಯಾಮ್’ಸಂಗ್ ಕನ್ನಡಕದಲ್ಲಿ ಮೊಬೈಲ್‌ನಲ್ಲಿರುವ ಹಲವು ಅಂಶಗಳ ಜೊತೆಗೆ ಇನ್ನೂ ಹತ್ತು ಹಲವು ವಿಶೇಷತೆಗಳು ಇರಲಿವೆ. ಈ ಕನ್ನಡಕ ಧರಿಸುವವರಿಗೆ ನಿಜ ಲೋಕದ ಜೊತೆಗೆ ಡಿಜಿಟಲ್ ಲೋಕವೂ ಏಕ ಕಾಲಕ್ಕೆ ಕಾಣಿಸಿಕೊಳ್ಳಲಿದೆ. ಕನ್ನಡಕ ಧರಿಸಿ ಯಾವ ವ್ಯಕ್ತಿಯನ್ನು ನೋಡುತ್ತಾರೋ ಆ ವ್ಯಕ್ತಿಯ ಬಗ್ಗೆ ಮಾಹಿತಿಗಳು ಕನ್ನಡಕದಲ್ಲಿ ಕಾಣಿಸಿಕೊಳ್ಳುತ್ತವೆ (ಆ ವ್ಯಕ್ತಿಯ ಮಾಹಿತಿ ಗೂಗಲ್ ಸ್ಪೇಸ್ ನಲ್ಲಿ ಇದ್ದರೆ).
Refex Eveelz: ಓಲಾ-ಊಬರ್ ದುಬಾರಿಯಾಯ್ತೆ? ರಿಯಾಯಿತಿ ದರ ಘೋಷಿಸಿದೆ ಹೊಸ ಟ್ಯಾಕ್ಸಿ ಸಂಸ್ಥೆ
ವಿಡಿಯೋ ರೆಕಾರ್ಡ್, ಫೋಟೊ, ಕರೆ, ಸಂಗೀತ ಇನ್ನಿತರೆ ಆಯ್ಕೆಗಳುಳ್ಳ ಕನ್ನಡಕಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಸ್ಯಾಮ್’ಸಂಗ್- ಗೂಗಲ್ ಹೊಂದಾಣಿಕೆಯಲ್ಲಿ ಬರಲಿರುವ ಈ ಕನ್ನಡಕ ಅವೆಲ್ಲಕ್ಕಿಂತಲೂ ಹೆಚ್ಚು ತಂತ್ರಜ್ಞಾನ ಪೂರ್ಣವಾಗಿರಲಿದೆ.