Site icon Samastha News

Refex Eveelz: ಓಲಾ-ಊಬರ್ ದುಬಾರಿಯಾಯ್ತೆ? ರಿಯಾಯಿತಿ ದರ ಘೋಷಿಸಿದೆ ಹೊಸ ಟ್ಯಾಕ್ಸಿ ಸಂಸ್ಥೆ

Refex Eveelz

Refex Eveelz

ಟ್ಯಾಕ್ಸಿ ಪ್ರಯಾಣ ಎಂಬುದು ಬೆಂಗಳೂರಿನಲ್ಲಿ ಬಹಳ ಖರ್ಚಿನ ವಿಷಯವಾಗಿದೆ. ಇತ್ತೀಚೆಗಿನ ವರದಿಯೊಂದರ ಪ್ರಕಾರ ದಿನವೂ ಹತ್ತು ಕಿ.ಮೀ ಟ್ಯಾಕ್ಸಿಯಲ್ಲಿ ಓಡಾಡುವವರು ಸಹ ತಿಂಗಳಿಗೆ ಸುಮಾರು 30 ರಿಂದ 50 ಸಾವಿರ ರೂಪಾಯಿ ಹಣ ಕೇವಲ ಟ್ಯಾಕ್ಸಿಗೆ ವ್ಯಯಿಸಬೇಕಿದೆಯಂತೆ! ಬೆಂಗಳೂರಿನ ಟ್ಯಾಕ್ಸಿ ಸೇವೆ ಅತ್ಯಂತ ದುಬಾರಿ ಆಗಿರುವಾಗಲೆ ಹೊಸ ಟ್ಯಾಕ್ಸಿ ಸೇವಾ ಸಂಸ್ಥೆಯೊಂದು ಅತ್ಯಂತ ಕಡಿಮೆ ಬೆಲೆಗೆ ಸೇವೆ ಒದಗಿಸುವುದಾಗಿ ರಿಯಾಯಿತಿ ಘೋಷಿಸಿದೆ.

ರಿಫೆಕ್ಸ್ ಇವೀಲ್ಜ್ ಸಂಸ್ಥೆ, ಬ್ಯಾಟರಿ ಚಾಲಿತ ಕಾರುಗಳನ್ನು ಟ್ಯಾಕ್ಸಿ ಸೇವೆಗೆ ಬಳಸುತ್ತಿದ್ದು, ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಇತರೆ ಕಂಪೆನಿಗಳಿಗಿಂತಲೂ ಕಡಿಮೆ ಬೆಲೆಗೆ, ಸುರಕ್ಷಿತ ಹಾಗೂ ತ್ವರಿತ ಟ್ಯಾಕ್ಸಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಇದೀಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಹೊಸ ರಿಯಾಯಿತಿ ದರವನ್ನು ಸಹ ರಿಫೆಕ್ಸ್ ಇವೀಲ್ಜ್ ಸಂಸ್ಥೆ ಘೋಷಿಸಿದೆ.

ಬೆಂಗಳೂರು ನಗರದ ಯಾವುದೇ ಭಾಗದಿಂದಲೂ ಸಹ ರಿಫೆಕ್ಸ್ ಇವೀಲ್ಜ್ ನ ಟ್ಯಾಕ್ಸಿ ಬುಕ್ ಮಾಡಿ ಕೇವಲ 999 ರೂಪಾಯಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣವನ್ನು ತಲುಪಬಹುದಾಗಿದೆ. ಈಗ ಚಾಲ್ತಿಯಲ್ಲಿರುವ ಯಾವುದೇ ಜನಪ್ರಿಯ ಟ್ಯಾಕ್ಸಿ ಸಂಸ್ಥೆಗಳು ಇಷ್ಟು ಕಡಿಮೆ ಮೊತ್ತಕ್ಕೆ  ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆ ಕೊಡುತ್ತಿಲ್ಲ ಎಂಬುದು ಕಂಪೆನಿಯ ವಾದ.

ರಿಫೆಕ್ಸ್ ಇವೀಲ್ಜ್, ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನಷ್ಟೆ ಟ್ಯಾಕ್ಸಿ ಸೇವೆಗೆ ಬಳಸುತ್ತಿದ್ದು ಸಹಜವಾಗಿಯೇ ಇಂಧನ ದರ ಉಳಿತಾಯವಾಗಲಿರುವ ಕಾರಣ, ಈ ಸಂಸ್ಥೆ ಅತ್ಯಂತ ಕಡಿಮೆ ಬೆಲೆಗೆ ಟ್ಯಾಕ್ಸಿ ಸೇವೆ ನೀಡುತ್ತಿದೆ. ಕಡಿಮೆ ದರ ಮಾತ್ರವೇ ಅಲ್ಲದೇ ಯಾವುದೇ ಹೆಚ್ಚುವರಿ ಚಾರ್ಜ್ ಗಳನ್ನು ಪ್ರಯಾಣಿಕರಿಂದ ಪಡೆಯುತ್ತಿಲ್ಲ ರಿಫೆಕ್ಸ್ ಇವೀಲ್ಜ್.

 Richest village: ಭಾರತದ ಕೋಟ್ಯಧಿಪತಿಗಳ ಹಳ್ಳಿ ಇದು, ಗ್ರಾಮದವರೆಲ್ಲರೂ ಕೋಟ್ಯಧಿಪತಿಗಳೆ

ಪ್ಲೇ ಸ್ಟೋರ್ ನಲ್ಲಿ‌ ರಿಫೆಕ್ಸ್ ಇವೀಲ್ಜ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಟ್ಯಾಕ್ಸಿ ಬುಕ್ ಮಾಡುವ ಸಮಯದಲ್ಲಿ SUPER-TEMBER ಪ್ರೋಮೊ‌ ಕೋಡ್ ಹಾಕಿದರೆ ಸಾಕು ಕೇವಲ 999 ರೂಪಾಯಿಗೆ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ. ಯಾವುದೇ ಕ್ಯಾನ್ಸಲೇಷನ್ ಚಾರ್ಜ್ ಸಹ ಇರುವುದಿಲ್ಲ.

Exit mobile version