ಬೆಂಗಳೂರು ಭಾರತದ ಸ್ಟಾರ್ಟ್ ಅಪ್ ರಾಜಧಾನಿ. ಬೆಂಗಳೂರಿನಲ್ಲಿ ಹಲವು ಹೊಸ ಹೊಸ ಕಂಪೆನಿಗಳು ಜನ್ಮ ತಳೆಯುತ್ತಿವೆ, ಮಿಲಿಯನ್, ಬಿಲಿಯನ್ ಡಾಲರ್ ಮೌಲ್ಯದ ಕಂಪೆನಿಗಳಾಗಿ ಬೆಳೆಯುತ್ತಿವೆ. ಕೆಲವು ಕಂಪೆನಿಗಳಂತೂ ಅಂತರಾಷ್ಟ್ರೀಯ ದೈತ್ಯ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದು ನಿಂತಿವೆ. ಅಂಥಹದೇ ಒಂದು ಸಂಸ್ಥೆಯ ಮೇಲೆ ವಿಶ್ವದ ಬಹುದೊಡ್ಡ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಭಾರಿ ಮೊತ್ತದ ಹಣವನ್ನು ಹೂಡಿಕೆ ಮಾಡಿದೆ.
ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಫ್ಲಿಪ್ ಕಾರ್ಟ್ ಬೆಂಗಳೂರಿನ ಸಂಸ್ಥೆ. ವಿಶ್ವದ ದೈತ್ಯ ಸಂಸ್ಥೆ ಅಮೆಜಾನ್‌ಗೆ ಭಾರತ ಸೇರಿದಂತೆ ಹಲವು ಕಡೆಗಳಲ್ಲಿ ಫ್ಲಿಪ್ ಕಾರ್ಟ್ ಸೆಡ್ಡು ಹೊಡೆಯುತ್ತಿದೆ. ಇದೀಗ ಈ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಗೂಗಲ್ ಸಂಸ್ಥೆ 3000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.ವಿಶೇಷವೆಂದರೆ ಇದೇ ಸಂಸ್ಥೆಯ ದೊಡ್ಡ ಭಾಗವನ್ನು ಅಮೆರಿಕದ ದೈತ್ಯ ಶಾಪಿಂಗ್ ಸಂಸ್ತೆ ವಾಲ್‌ಮಾರ್ಟ್ ಖರೀದಿ ಮಾಡಿದೆ. ಅದೂ ಅಮೆಜಾನ್ ಜೊತೆ ಹರಾಜಿನಲ್ಲಿ ಹೋರಾಡಿ ಫ್ಲಿಪ್‌ಕಾರ್ಟ್ ಮೇಲೆ ಹೂಡಿಕೆ ಮಾಡಿದೆ. ಮೈಕ್ರೊಸಾಫ್ಟ್ ಸಹ ಫ್ಲಿಪ್ ಕಾರ್ಟ್ ಮೇಲೆ ಹೂಡಿಕೆ ಮಾಡಿದೆ.
ಗೂಗಲ್ ಸಂಸ್ಥೆಯು ಫ್ಲಿಪ್ ಕಾರ್ಟ್‌ಗೆ ಹಲವು ವಿಧದಲ್ಲಿ ಸಹಾಯ ಮಾಡಲಿದೆ. ಗೂಗಲ್‌ನ ಪ್ರಸ್ತಾವಿತ ಹೂಡಿಕೆಯಿಂದ ಸಾಕಷ್ಟು ಸಹಾಯ ಕಂಪೆನಿಗೆ ಸಹಾಯ ಮಾಡಲಿದೆ. ಗೂಗಲ್ ನ ಕ್ಲೌಡ್ ಸಹಯೋಗವು ಫ್ಲಿಪ್‌ಕಾರ್ಟ್ ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ದೇಶದಾದ್ಯಂತ ಗ್ರಾಹಕರಿಗೆ ಸೇವೆ ಸಲ್ಲಿಸಲು ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಆಧುನೀಕರಿಸಲು ಸಹಾಯ ಮಾಡುತ್ತದೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ.
ದಾಸವಾಳ ಹೂವಿನ ಹತ್ತು ಉಪಯೋಗಗಳ ಪಟ್ಟಿ ಇಲ್ಲಿದೆ
ಈಗಾಗಲೇ ವಾಲ್ ಮಾರ್ಟ್, ಈ ಬೆ, ಮೈಕ್ರೋಸಾಫ್ಟ್ ಈಗ ಗೂಗಲ್ ಅಂಥಹಾ ದೈತ್ಯ ಕಂಪೆನಿಗಳ ಹೂಡಿಕೆಯನ್ನು ಪಡೆದಿರುವ ಫ್ಲಿಪ್‌ಕಾರ್ಟ್‌ನ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು 36 ಬಿಲಿಯನ್ ಡಾಲರ್. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 3 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ.