Gujarat: ಕತ್ತೆಗಳ ಮೇಲೆ ಬಂಡವಾಳ ಹೂಡಿ ಬ್ಯುಸಿನೆಸ್, ತಿಂಗಳಿಗೆ ಲಕ್ಷಾಂತರ ಆದಾಯ ಮಾಡುತ್ತಿರುವ ಯುವಕ

0
164
Gujarat

Gujarat

ಕೆಲಸಕ್ಕೆ ಬಾರದ ಕತ್ತೆ ಎಂದು ಸೋಮಾರಿಗಳನ್ನು ಹಿರಿಯರು ಜರಿಯುವುದುಂಟು. ಕತ್ತೆ ಎಂದರೆ ಅನುಪಯುಕ್ತ, ದಡ್ಡ, ಕೆಲಸಕ್ಕೆ ಬಾರದ ಪ್ರಾಣಿ ಎಂಬ ಧೋರಣೆ ಸಮಾಜದಲ್ಲಿದೆ. ಆದರೆ ಗುಜರಾತ್​ನ ಚಾಲಾಕಿ ಯುವಕನೋರ್ವ ಇದೇ ಕತ್ತೆಗಳನ್ನು ಇಟ್ಟುಕೊಂಡು ಬ್ಯುಸಿನೆಸ್ ಆರಂಭ ಮಾಡಿದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಸಹ ಗಳಿಸುತ್ತಿದ್ದಾನೆ. ಈತನ ಚಾಲಾಕಿತನಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ.

ಕತ್ತೆ ಹಾಲಿಗೆ ದಕ್ಷಿಣದ ರಾಜ್ಯಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಕತ್ತೆ ಹಾಲಿನಲ್ಲಿ ವಿಶೇಷ ಪೌಷ್ಟಿಕಾಂಶಗಳಿವೆ ಎಂಬ ನಂಬಿಕೆ ಇದೆ. ಕತ್ತೆ ಹಾಲು ಕುಡಿದರೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ, ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಕತ್ತೆ ಹಾಲನ್ನು ಹಲವರು ಕುಡಿಸುತ್ತಾರೆ. ಕೆಲವು ಜನಾಂಗದವರು ಕತ್ತೆಗಳನ್ನು ಒಟ್ಟಿಗೆ ಹೊಡೆದುಕೊಂಡು ಊರುಗಳಿಗೆ ಹೋಗಿ ಅಲ್ಲಿಯೇ ಕತ್ತೆ ಹಾಲು ಕರೆದು ಮಾರಾಟ ಮಾಡುತ್ತಾರೆ.

ಆದರೆ ಇದೀಗ ಗುಜರಾತ್​ನ ಧೀರೇನ್​ ಸೋಲಂಕಿ ಎಂಬಾತ ಕೋಳಿ ಫಾರಂ, ಕುರಿ ಫಾರಂ, ಹಸು ಫಾರಂ ಮಾಡಿದಂತೆಯೇ ಕತ್ತೆಗಳ ಫಾರಂ ಮಾಡಿದ್ದಾರೆ. 42 ಕತ್ತೆಗಳನ್ನು ತಮ್ಮ ಫಾರಂನಲ್ಲಿ ಸಾಕಿರುವ ಧೀರೇನ್​ ಸೋಲಂಕಿ ಕತ್ತೆಗಳ ಹಾಲು ಕರೆದು ಅದನ್ನು ದಕ್ಷಿಣದ ರಾಜ್ಯಗಳ ತಮ್ಮ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಅವರು ಮೊದಲಿಗೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡಿದರಂತೆ. ಬಳಿಕ ಖಾಸಗಿ ಉದ್ಯೋಗವನ್ನೂ ಮಾಡಿದರಂತೆ. ಒಮ್ಮೆ ಕೆಲಸ ನಿಮಿತ್ತ ದಕ್ಷಿಣ ಭಾರತಕ್ಕೆ ಹೋದಾಗ ಕತ್ತೆಗಳ ಹಾಲಿಗೆ ಇರುವ ಬೇಡಿಕೆ ಗೊತ್ತಾಗಿ ಅದರ ಬಗ್ಗೆ ತಿಳಿದುಕೊಂಡು ತಮ್ಮ ಹಳ್ಳಿಯಲ್ಲೇ ಕತ್ತೆಗಳ ಫಾರಂ ಪ್ರಾರಂಭ ಮಾಡಿದರಂತೆ.

ರಾಹುಲ್ ಗಾಂಧಿ ಆಸ್ತಿ ಎಷ್ಟು ಕೋಟಿ, ಎಲ್ಲಿಂದ ಬರುತ್ತಿದೆ ಆದಾಯ? ಹೂಡಿಕೆ ಮಾಡಿದ್ದು ಎಲ್ಲೆಲ್ಲಿ?

ಎಂಟು ತಿಂಗಳ ಹಿಂದಷ್ಟೆ ಕೇವಲ 20 ಕತ್ತೆಗಳನ್ನು ಖರೀದಿಸಿ ಫಾರಂ ಆರಂಭ ಮಾಡಿದರಂತೆ ಧೀರೇನ್​ ಸೋಲಂಕಿ. ಆಗ 22 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಎಂಟೇ ತಿಂಗಳಲ್ಲಿ ಬ್ಯುಸಿನೆಸ್ ಬೆಳೆದು ಈಗ 42 ಕತ್ತೆಗಳು ಅವರ ಫಾರಂನಲ್ಲಿವೆ. ಪ್ರತಿ ತಿಂಗಳು ಕತ್ತೆ ಹಾಲು ಮಾರಾಟದಿಂದ ಸುಮಾರು 2 ರಿಂದ ಮೂರು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಧೀರೇನ್.

ಬ್ಯುಸಿನೆಸ್ ಆರಂಭ ಮಾಡಿದ ಮೊದಲ ಐದು ತಿಂಗಳು ವ್ಯಾಪಾರವೇ ಆಗಿರಲಿಲ್ಲವಂತೆ. ಗುಜರಾತ್​ನಲ್ಲಿ ಕತ್ತೆ ಹಾಲಿಗೆ ಮಾರುಕಟ್ಟೆಯೇ ಇಲ್ಲ. ಆಗ ನಾನು ಕೆಲವು ದಕ್ಷಿಣ ಭಾರತದ ವ್ಯಕ್ತಿಗಳೊಡನೆ, ಕಂಪೆನಿಗಳೊಡನೆ ಮಾತನಾಡಿದೆ. ಅಲ್ಲಿ ಕತ್ತೆ ಹಾಲಿಗೆ ಒಳ್ಳೆ ಬೇಡಿಕೆ ಇದೆ. ಈಗ ನಾನು ನನ್ನ ಫಾರಂನ ಕತ್ತೆ ಹಾಲನ್ನು ಕರ್ನಾಟಕ, ಕೇರಳ ಇನ್ನಿತರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಹಸು ಹಾಲಿಗೆ ಲೀಟರ್​ಗೆ 60-65 ರೂಪಾಯಿ ಬೆಲೆ ಇದ್ದರೆ, ಕತ್ತೆಯ ಒಂದು ಲೀಟರ್​ ಹಾಲಿಗೆ 5000 ದಿಂದ 7000 ರೂಪಾಯಿ ಬೆಲೆ ಇದೆ. ಕತ್ತೆಗಳ ಹಾಲನ್ನು ಕರೆದು ಅದನ್ನು ಫ್ರೀಜರ್​ನಲ್ಲಿಟ್ಟು ಆ ಬಳಿಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಹಾಲನ್ನು ಪಾಶ್ಚರೀಕರಿಸಿ ಅದನ್ನು ಪೌಡರ್​ ಅನ್ನಾಗಿ ಮಾಡಿ ಅದನ್ನೂ ಸಹ ಮಾರಾಟ ಮಾಡುತ್ತಾರೆ ಧೀರೆನ್. ಈ ವರೆಗೆ ಸುಮಾರು 38 ಲಕ್ಷ ರೂಪಾಯಿಗಳನ್ನು ಧೀರೇನ್ ಈ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರತಿ ತಿಂಗಳು 3 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here