ಈ ಮೂಲಕ ತಮ್ಮೆಲ್ಲರ ಗಮನಕ್ಕೆ ತಿಳಿಯಪಡಿಸುವ ವಿಷಯವೇನೆಂದರೆ ದಿನಾಂಕ 11.05.2025 ರಂದು ರವಿವಾರ ಮುಂಜಾನೆ ಸರಿಯಾಗಿ 10 ಗಂಟೆಗೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಸರ್ಕಿಟ್ ಹೌಸ್ ಸಭಾಭವನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಆಯೋಜಿಸಬೇಕಾಗಿರುವ ಕಾರ್ಯ ಚಟುವಟಿಕೆಗಳು ಹಾಗೂ ಈ ಎರಡು ವರ್ಷದಲ್ಲಿ ಬೆಳಗಾವಿ ಜಿಲ್ಲಾ ಘಟಕ ನಡೆದು ಬಂದಿರುವ ದಾರಿ ಹಾಗೂ ಸಮಗ್ರ ಎಲ್ಲ ವಿಷಯಗಳ ಚರ್ಚೆ ಮಾಡುವುದಕ್ಕಾಗಿ ಮತ್ತು ಈ ವರ್ಷದ ಬಡ ಮತ್ತು ಪ್ರತಿಭಾವಂತ ಹಡಪದ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಪೂರ್ವಭಾವಿ ಸಭೆಗೆ ತಮ್ಮೆಲ್ಲರನ್ನ ಅತ್ಯಂತ ಆತ್ಮೀಯವಾಗಿ ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇವೆ. ಎಲ್ಲರನ್ನೂ ದೂರವಾಣಿ ಕರೆ ಮಾಡಿ ಸಂಪರ್ಕಿಸಲು ಸಾಧ್ಯವಾಗದ ಕಾರಣ ಈ ಸಂದೇಶವನ್ನು ತಾವೆಲ್ಲರೂ ಅತ್ಯಂತ ಪ್ರೀತಿಯ ಮನವಿ ಎಂದು ಸ್ವೀಕರಿಸಿ ಆ ಸಭೆಗೆ ಹಾಜರಾಗಲು ಇಡೀ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿ ರುತ್ತಾರೆ. ಹಾಗಾಗಿ ಆ ಸಭೆಗೆ ಹಾಜರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವುದರ ಮೂಲಕ ಜಿಲ್ಲಾ ಘಟಕಕ್ಕೆ ಇನ್ನಷ್ಟು ಬಲ ತುಂಬಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.
ಸ್ಥಳ : ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಸರ್ಕ್ಯೂಟ್ ಹೌಸ್ ಸಭಾಭವನ
ಸಮಯ : ಮುಂಜಾನೆ 10:00
ದಿನಾಂಕ : 11/05/2025

