Site icon Samastha News

Mandya: ಮಂಡ್ಯ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ ಕುಮಾರಸ್ವಾಮಿ, ಮಾಡಿಸಿದ್ದ ಅಡುಗೆಗಳು ಏನೇನು?

Mandya

Mandya

ಕೆಲ ತಿಂಗಳ ಹಿಂದೆ ಶಾಸಕ ಆಗಿದ್ದ ಕುಮಾರಸ್ವಾಮಿ ಈಗ ಕೇಂದ್ರ ಸಚಿವ. ಕೇಂದ್ರ ಕೈಗಾರಿಕೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಚ್​ಡಿಕೆ. ಬಿಜೆಪಿ ಜೊತೆ ಕೈಜೋಡಿಸಿ ಲೋಕಸಭೆ ಚುನಾವಣೆ ಎದುರಿಸಿದ್ದ ಕುಮಾರಸ್ವಾಮಿ, ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಇದ್ದ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಇದೇ ಜೆಡಿಎಸ್​ನ ಅಭ್ಯರ್ಥಿ ಆಗಿದ್ದ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ಸುಮಲತಾ ಅವರನ್ನು ಗೆಲ್ಲಿಸಿದ್ದ ಮಂಡ್ಯ ಜನ ಸುಮಲತಾ ಅವರಿಗೆ ಟಿಕೆಟ್ ತಪ್ಪಿಸಿ ಚುನಾವಣೆಗೆ ನಿಂತಿರುವ ಕುಮಾರಸ್ವಾಮಿ ಅವರಿಗೆ ಮತ ನೀಡುತ್ತಾರೆಯೇ? ಎಂಬ ಅನುಮಾನ ಎದ್ದಿತ್ತು. ಆದರೆ ಭರ್ಜರಿ ಮುನ್ನಡೆಯಲ್ಲಿ ಕುಮಾರಸ್ವಾಮಿ ವಿಜೇತರಾದರು. ಅತ್ಯಂತ ಅಗತ್ಯವಾಗಿದ್ದ ಗೆಲುವನ್ನು ದೊರಕಿಸಿಕೊಟ್ಟ ಮತದಾರರಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಧನ್ಯವಾದ ಹೇಳಿದ್ದಾರೆ ಕುಮಾರಸ್ವಾಮಿ.

ಮಂಡ್ಯದ ಪಾಂಡವಪುರದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕೃತಜ್ಞತಾ ಸಮಾವೇಶವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ತಮ್ಮ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಎಚ್​ಡಿ ಕುಮಾರಸ್ವಾಮಿ ಧನ್ಯವಾದ ಹೇಳಿದರು. ಈ ಕಾರ್ಯಕ್ರಮದಲ್ಲಿ ಜನರಿಗೆ ಭರ್ಜರಿ ಬಾಡೂಟವನ್ನು ಕುಮಾರಸ್ವಾಮಿ ಹಾಕಿಸಿದರು. ಹಲವು ವಿಧದ ನಾನ್ ವೆಜ್ ತಿನಿಸುಗಳನ್ನು ಕಾರ್ಯಕ್ರಮದಲ್ಲಿ ಮಾಡಿ ಜನರಿಗೆ ಬಡಿಸಲಾಯ್ತು. ಅಂದಹಾಗೆ ಮಾಡಿಸಲಾಗಿದ್ದ ಅಡುಗೆ ಐಟಂಗಳು ಯಾವುವು? ಇಲ್ಲಿದೆ ಪಟ್ಟಿ.

ಯಾವ ರಾಜ್ಯದ ಶಾಸಕರಿಗೆ ಹೆಚ್ಚು ಸಂಬಳ ಸಿಗುತ್ತೆ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಈ ಕಾರ್ಯಕ್ರಮದಲ್ಲಿ ಅಡುಗೆ ಮಾಡಲು 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆಗಳನ್ನು ಬಳಸಲಾಗಿದೆ. ಸುಮಾರು 500 ಮಂದಿ ಅಡುಗೆ ಬಾಣಸಿಗರು ಮತ್ತು 500 ಮಂದಿ ಸಹಾಯಕರು ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ. ಭಾರಿ ದೊಡ್ಡ ಪೆಂಡಾಲ್ ಹಾಕಿಸಿ ಬಂದವರಿಗೆಲ್ಲ ಊಟ ಹಾಕಿಸಿದ್ದಾರೆ ಎಚ್​ಡಿ ಕುಮಾರಸ್ವಾಮಿ.

ಕಾರ್ಯಕ್ರಮದಲ್ಲಿ ಮುದ್ದೆ, ಬೋಟಿ ಗೊಜ್ಜು, ಚಿಕನ್, ಘೀ ರೈಸ್, ಮಟನ್ ಸಾಂಬಾರ್, ತಿಳಿ ಸಾರು, ಎಗ್ ಬುರ್ಜಿ, ಬೇಯಿಸಿದ ಮೊಟ್ಟೆ, ಮೊಸರುಬಜ್ಜಿ, ಪಾಯಸಗಳನ್ನು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾಡಿಸಿದ್ದರು. 25 ರಿಂದ 30 ಸಾವಿರ ಜನರಿಗೆ ಅಡುಗೆಯನ್ನು ಮಾಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲಾಯ್ತು.

Exit mobile version