Site icon Samastha News

MLA salary: ಯಾವ ರಾಜ್ಯದ ಶಾಸಕರಿಗೆ ಹೆಚ್ಚು ಸಂಬಳ ಸಿಗುತ್ತೆ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

MLA salary

MLA salary

ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ ಹೊರತಾಗಿ ಬಹುತೇಕ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ವಿಶೇಷವಾಗಿ ಶಾಸಕರಿಗೆ ಸರ್ಕಾರಿ ಸಂಬಳ-ಸವಲತ್ತುಗಳು ಸಿಕ್ಕೆ ಸಿಗುತ್ತವೆ ಎಂಬುದು ಗೊತ್ತಿರುವ ವಿಷಯವೇ. ಆದರೆ ಈ ಸಂಬಳ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹಾಗಿದ್ದರೆ ಯಾವ ರಾಜ್ಯದ ಶಾಸಕರಿಗೆ ಹೆಚ್ಚು ಸಂಬಳ ಸಿಗುತ್ತದೆ ಯಾವ ರಾಜ್ಯದ ಶಾಸಕರಿಗೆ ಕಡಿಮೆ ಸಂಬಳವಿದೆ? ಮಾಹಿತಿ ಇಲ್ಲಿದೆ.

ಆಶ್ಚರ್ಯವಾಗಬಹುದು, ದೊಡ್ಡ ರಾಜ್ಯಗಳಿಗಿಂತಲೂ ಸಣ್ಣ ಹಾಗೂ ಹಿಂದುಳಿದ ಎನಿಸಿಕೊಂಡ ರಾಜ್ಯಗಳ ಶಾಸಕರಿಗೆ ಸಂಬಳ ಹೆಚ್ಚಿದೆ. ಜಾರ್ಖಂಡ್ ರಾಜ್ಯದ ಶಾಸಕರಿಗೆ ಅತಿ ಹೆಚ್ಚು ಸಂಬಳವಿದೆ. ಈ ರಾಜ್ಯದ ಶಾಸಕರಿಗೆ ತಿಂಗಳಿಗೆ ಬರೋಬ್ಬರಿ 2.88 ಲಕ್ಷ‌ ರೂಪಾಯಿ ಸಂಬಳ ಸಿಗುತ್ತದೆ‌. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವಿದೆ‌. ಇಲ್ಲಿ ಶಾಸಕರಿಗೆ ತಿಂಗಳಿಗೆ 2.61 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ. ಮೂರನೇ ಸ್ಥಾನದಲ್ಲಿ ಈಶಾನ್ಯದ ಪುಟ್ಟ ರಾಜ್ಯ ಮಣಿಪುರವಿದೆ. ಈ ರಾಜ್ಯದ ಶಾಸಕರಿಗೆ ತಿಂಗಳಿಗೆ 2. 50 ಲಕ್ಷ ರೂಪಾಯಿ ಸಿಗುತ್ತದೆ.

6 ತಿಂಗಳಲ್ಲಿ 20 ಕೋಟಿ ಕಳೆದುಕೊಂಡ ಹುಬ್ಬಳ್ಳಿ-ಧಾರವಾಡ ಜನ, ಹೇಗೆ?

ನಾಲ್ಕನೇ ಸ್ಥಾನದಲ್ಲಿ ನೆರೆಯ ತೆಲಂಗಾಣ ರಾಜ್ಯವಿದೆ. ಈ ರಾಜ್ಯದ ಶಾಸಕ ತಿಂಗಳಿಗೆ 2.50 ಲಕ್ಷ ಸಂಬಳ ಪಡೆಯುತ್ತಾನೆ. ಐದನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶವಿದೆ. ಇಲ್ಲಿ ಶಾಸಕ ಪ್ರತಿ ತಿಂಗಳು 2.10 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾನೆ. ಆರನೇ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದ ಶಾಸಕರಿಗೆ ತಿಂಗಳಿಗೆ 2.05 ಲಕ್ಷ ಸಂಬಳ ದೊರೆಯುತ್ತಿದೆ.

ಉಳಿದ ರಾಜ್ಯಗಳ ಪಟ್ಟಿ ಇಲ್ಲಿದೆ

7) ಉತ್ತರಕಾಂಡ- ಸಂಬಳ 2.04 ಲಕ್ಷ
8) ಮೆಘಾಲಯ- ಸಂಬಳ 2.02 ಲಕ್ಷ
9) ಉತ್ತರ ಪ್ರದೇಶ- ಸಂಬಳ 1.87 ಲಕ್ಷ
10) ಬಿಹಾರ- ಸಂಬಳ 1.65 ಲಕ್ಷ
11) ಸಿಕ್ಕಿಂ- 1.65 ಲಕ್ಷ
12) ಚತ್ತೀಸ್ ಘಡ- 1.60 ಲಕ್ಷ
13) ಮಿಜೊರಂ- 1.50 ಲಕ್ಷ
14) ಮಧ್ಯ ಪ್ರದೇಶ- 1.50 ಲಕ್ಷ
15) ರಾಜಸ್ಥಾನ- 1.42 ಲಕ್ಷ
16) ಗುಜರಾತ್- 1.37 ಲಕ್ಷ
17) ನಾಗಾಲ್ಯಾಂಡ್- 1.35 ಲಕ್ಷ
18) ಆಂಧ್ರ ಪ್ರದೇಶ- 1.25 ಲಕ್ಷ
19) ಪಶ್ಚಿಮ ಬಂಗಾಳ- 1.21 ಲಕ್ಷ
20) ಅರುಣಾಚಲ ಪ್ರದೇಶ- 1.20 ಲಕ್ಷ
21) ಗೋವಾ- 1.17 ಲಕ್ಷ
22) ಹರಿಯಾಣ- 1.15 ಲಕ್ಷ
23) ತಮಿಳುನಾಡು- 1.05 ಲಕ್ಷ
24) ಪಾಂಡಿಚೆರಿ- 1.05 ಲಕ್ಷ
25) ಒಡಿಸಾ- 1 ಲಕ್ಷ
26) ಪಂಜಾಬ್- 94 ಸಾವಿರ
27) ದೆಹಲಿ- 90 ಸಾವಿರ
28) ತ್ರಿಪುರ- 84 ಸಾವಿರ
29) ಅಸ್ಸಾಂ- 80 ಸಾವಿರ
30) ಕೇರಳ‌- 70 ಸಾವಿರ

Exit mobile version