Hubali
ಹುಬ್ಬಳ್ಳಿ-ಧಾರವಾಡಗಳನ್ನು ರಾಜ್ಯದ ವಿದ್ಯಾ ಕಾಶಿ ಎಂದೂ ಸಹ ಗುರುತಿಸಲಾಗುತ್ತದೆ. ಸಾಕಷ್ಟು ಅತ್ಯುತ್ತಮ ವಿದ್ಯಾಸಂಸ್ಥೆಗಳು ಈ ನಗರಗಳಲ್ಲಿ ಇವೆ. ಆದರೆ ಇಲ್ಲಿನ ಹಲವು ಜನ ತಮ್ಮ ದಡ್ಡತನದಿಂದ ಕಳೆದ ಕೇವಲ 60 ತಿಂಗಳಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಅಸಲಿಗೆ ಕಳೆದು ಕೊಂಡೊರುವ ಹಣದ ಮೊತ್ತ ಇನ್ನೂ ಹೆಚ್ಚಿದೆ ಎನ್ನಲಾಗುತ್ತಿದೆ. ಅದೂ ಹೀಗೆ ಹಣ ಕಳೆದುಕೊಂಡವರು, ಸಾಮಾನ್ಯ ಜನರು ಮಾತ್ರವಲ್ಲ, ಇವರಲ್ಲಿ ಎಂಜಿನಿಯರ್, ವೈದ್ಯರುಗಳ ಸಹ ಇದ್ದಾರೆ.
ಅಂದಹಾಗೆ ಹುಬ್ಬಳ್ಳಿ-ಧಾರವಾಡದ ಜನ 20 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿರುವುದು ಆನ್ ಲೈನ್ ವಂಚನೆಯಲ್ಲಿ. ಕಳೆದ ಆರು ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಸೈಬರ್ ಪೊಲೀಸ್ ಠಾಣೆಯಲ್ಲಿ ಆನ್ ಲೈನ್ ವಂಚನೆಯ 114 ಪ್ರಕರಣಗಳು ದಾಖಲಾಗಿದ್ದು, 20 ಕೋಟಿ ರೂಪಾಯಿ ಹಣವನ್ನು ಆನ್ ಲೈನ್ ವಂಚನೆಯಲ್ಲಿ ಅವಳಿ ನಗರದ ಜನ ಕಳೆದುಕೊಂಡಿದ್ದಾರೆ.
ಭಾರತೀಯರ ಮೆಚ್ಚಿನ ಸಮೋಸ ನಿಜಕ್ಕೂ ಭಾರತೀಯರದ್ದಲ್ಲ, ಸಮೋಸ ಭಾರತಕ್ಕೆ ಬಂದಿದ್ದು ಹೇಗೆ?
ಈ ಬಗ್ಗೆ ಮಾತನಾಡಿರುವ ಸೈಬರ್ ಇಲಾಖೆ ಎಸಿಪಿ ಶಿವಾಜಿ ಕಟಕಬಾವಿ, ‘ಕಳೆದ ಆರು ತಿಂಗಳಲ್ಲಿ 19.98 ಕೋಟಿ ಹಣ ವಂಚನೆ ಆನ್ ಲೈನ್ ಮೂಲಕ ನಡೆದಿದೆ. ಕೆಲವು ಪ್ರಕರಣದಲ್ಲಿ ಸಂತ್ರಸ್ತರು ಕೂಡಲೆ ನಮಗೆ ಮಾಹಿತಿ ನೀಡಿದ್ದರೆ, ಕೆಲವು ಪ್ರಕರಣಗಳಲ್ಲಿ ತಡವಾಗಿ ಮಾಹಿತಿ ನೀಡಿದ್ದಾರೆ. ಅಂಥಹಾ ಖಾತೆಗಳ ಬ್ಯಾಂಕ್ ಖಾತೆ ಸೀಜ್ ಮಾಡಿಸಿದ್ದೇವೆ ಎಂದಿದ್ದಾರೆ.
ಕಳೆದ ಆರು ತಿಂಗಳಲ್ಲಿ ನಾವು 7.85 ಕೋಟಿ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸೀಜ್ ಮಾಡಿಸಿ ಸಂತ್ರಸ್ತರಿಗೆ ವಾಪಸ್ ಕೊಡಿಸಿದ್ದೇವೆ. ಕಳೆದ ಆರು ತಿಂಗಳಲ್ಲಿ ದಾಖಲಾದ ಬಹುತೇಕ ದೂರುಗಳಲ್ಲಿ ಷೇರು ಮಾರುಕಟ್ಟರ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ ನಡೆದಿರುವುದೇ ಹೆಚ್ಚು ಎಂದು ಅವರು ಗುರುತಿಸಿದ್ದಾರೆ.
ಈ ವಂಚನೆಗೆಲ್ಲ ಬಹುತೇಕ ಬಳಕೆ ಆಗಿರುವುದು ಉತ್ತರ ಭಾರತದವರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳು. ಇವನ್ನೆಲ್ಲ ಟ್ರೇಸ್ ಮಾಡಿ ಪತ್ತೆ ಹಚ್ಷಿ ಶಿಕ್ಷೆ ಕೊಡಿಸುವುದು ಸುಲಭದ ಸಂಗತಿಯಲ್ಲ ಎಂದಿದ್ದಾರೆ.