Indian Food
ಭಾರತ ಹಲವು ಸಂಸ್ಕೃತಿಗಳ ಆಗರ, ಭಾರತದ ಧಾರ್ಮಿಕ ಸಂಸ್ಕೃತಿ, ಕಲಾ ಸಂಸ್ಕೃತಿಗಳ ಜೊತೆಗೆ ಭಾರತದ ಆಹಾರ ಸಂಸ್ಕೃತಿಗೂ ಸುದೀರ್ಘ ಇತಿಹಾಸವಿದೆ. ಪಾಯಸ, ಪುಳಿಯೋಗರೆಗಳಿಂದ ಹಿಡಿದು ಬಿರಿಯಾನಿ, ಬಟರ್ ಚಿಕನ್ ವರೆಗೆ ಸಾವಿರಾರು ಭಿನ್ನ ಮತ್ತು ರುಚಿಕರವಾದ ಆಹಾರ ಖಾದ್ಯಗಳನ್ನು ಜಗತ್ತಿಗೆ ಪರಿಚಯಿಸಿದೆ. ಮಾತ್ರವಲ್ಲದೆ ಹಲವು ಖಾದ್ಯಗಳನ್ನು ಭಾರತೀಯರು ಪ್ರತಿದಿನದ ಆಹಾರ ಸೇವನೆಯ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ಭಾರತೀಯರ ಮೆಚ್ಚಿನ ಸಮೋಸ ಸಹ ಒಂದು.
ಸಮೋಸ ಭಾರತೀಯರ ಮೆಚ್ಚಿಬ ಟಾಪ್ 10 ಖಾದ್ಯಗಳಲ್ಲಿ ಒಂದೆನ್ನಬಹುದು. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಮೋಸ ತನ್ನ ಅದ್ಬುಯ ರುಚಿಯಿಂದ ದಕ್ಷಿಣ ಭಾರತದವರನ್ನೂ ಸಹ ಸೆಳೆದಿದೆ. ಹೊರಗೆ ತುಸು ಗಟ್ಟಿಯಾಗಿ ಕ್ರಿಸ್ಪಿಯಾಗಿರುವ ಸಮೋಸ ಒಳಗೆ ರುಚಿಯಾದ, ಮೆತ್ತನೆಯ ಆಲೂಗಡ್ಡೆಯ ಪಲ್ಯವನ್ನು ತುಂಬಿಕೊಂಡಿರುತ್ತದೆ. ಸಮೋಸಾವನ್ನು ಖಾರ-ಸಿಹಿ ಚಟ್ನಿ ಹಾಗೂ ತಂಡರಿಸಿದ ಈರುಳ್ಳಿಗಳ ಜೊತೆ ಮೆಲ್ಲುತ್ತಿದ್ದರೆ ಆಹಾ ಉದ್ಘಾರ ತನ್ನಿಂದ ತಾನೆ ಹೊರ ಬರುತ್ತದೆ.
Lokayukta: ಕರ್ನಾಟಕದ 11 ಸರ್ಕಾರಿ ನೌಕರರಿಂದ 451 ಕೋಟಿ ಅಕ್ರಮ ಆಸ್ತಿ ವಶಪಡಿಸಿಕೊಂಡ ಲೋಕಾಯುಕ್ತ!
ಭಾರತೀಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಈ ಸಮೋಸ ಅಸಲಿಗೆ ಭಾರತೀಯ ಆಹಾರವೇ ಅಲ್ಲ. ಸಮೋಸ ಭಾರತಕ್ಕೆ ಬಂದಿದ್ದು ವಿದೇಶಿಗರಿಂದ. ಮಧ್ಯಪ್ರಾಚ್ಯ ದೇಶಗಳಿಂದ ಭಾರತಕ್ಕೆ ಈ ಅದ್ಭುತ ಖಾದ್ಯ ಸಮೋಸಾದ ಪರಿಚಯವಾಯ್ತು. 9ನೇ ಶತಮಾನದಲ್ಲಿ ಈ ಸಮೋಸ ಭಾರತಕ್ಕೆ ಬಂತು.
ಪರ್ಷಿಯಾದ ಮುಸ್ಲಿಂ ವ್ಯಾಪಾರಿಗಳು, ಪ್ರವಾಸಿಗರು ಸಮೋಸ ಅನ್ನು ಭಾರತಕ್ಕೆ ಪರಿಚಯಿಸಿದರು. ಸಮೋಸ ಅನ್ನು ಅಲ್ಲಿ ‘ಸಾನ್ ಬೋಸಾಗ್’ ಎಂದು ಕರೆಯಲಾಗುತ್ತಿತ್ತು. ಸಾನ್ ಬೋಸಾಗ್ ಈಗ ಭಾರತಕ್ಕೆ ಬಂತು ಸಮೋಸ ಆಗಿದೆ. ಪರ್ಷಿಯಾದ ಇತಿಹಾಸಕಾರ ಅಬೋಲ್ಫಜಲ್ ಬಲ್ ಹಕಿ 10, 11 ಶತಮಾನದಲ್ಲಿ ಸಮೋಸ ಅನ್ನು ಖಾದ್ಯವನ್ನಾಗಿ ಬಳಸುತ್ತಿದ್ದ ಬಗ್ಗೆ ಉಲ್ಲೆಖಿಸಿದ್ದಾರೆ.
ಆರಂಭದಲ್ಲಿ ಈ ಸಮೋಸ ಅರಮನೆಗಳಲ್ಲಿ, ರಾಜ ಕುಟುಂಬದ ಸದಸ್ಯರಿಗಾಗಿ ಮಾತ್ರವೇ ಮಾಡಲಾಗುತ್ತಿತ್ತು ಆದರೆ ಅದರ ಅದ್ಭುತ ರುಚಿ, ಸರಳವಾಗಿ ತಯಾರಿಸುವ ವಿಧಾನದಿಂದಾಗಿ ಬಹಳ ಬೇಗ ಜನಪ್ರಿಯಗೊಂಡು ಅರಸ, ಬಡವ-ಬಲ್ಲಿದ ಎಂಬ ಗಡಿಯನ್ನೆಲ್ಲ ದಾಟಿ ಎಲ್ಲರ ಮೆಚ್ಷಿನ ತಿನಿಸಾಯಿತು.
ಈಗಂತೂ ದಕ್ಷಿಣ ಏಷ್ಯಾದ ಪ್ರಮುಖ ಖಾದ್ಯಗಳಲ್ಲಿ ಒಂದಾಗಿದೆ. ಸಮೋಸ ಒಳಗೆ ಆಲೂಗಡ್ಡೆ ಮಾತ್ರವೇ ಅಲ್ಲದೆ ಚಿಕನ್, ಮಟನ್, ಈರುಳ್ಳಿ ಏನೇನೋ ಸ್ಟಫಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.