Health: ಆರೋಗ್ಯಕ್ಕಾಗಿ ಆಹಾರ ಪದಾರ್ಥ ನಿಮ್ಮ ಅಡುಗೆ ಮನೆಯಲ್ಲಿ ಇರಲೇ ಬೇಕು

0
40
Makhana

Health

ಕೋವಿಡ್ ಬಳಿಕ ಭಾರತದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಭಾರತೀಯರ ಆರೋಗ್ಯ ಕ್ಷೀಣಿಸುತ್ತಾ ಬರುತ್ತಿದೆ. ಆರೋಗ್ಯ ಕ್ಷೀಣಿಸುತ್ತಾ ಬರುತ್ತಿದ್ದಂತೆ ಸಹಜವಾಗಿಯೇ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಇತ್ತೀಚೆಗೆ ಹಲವು ಯುವಜನರು ಪ್ರೊಟೀನ್​ಗಳನ್ನು ಲೆಕ್ಕಾ ಹಾಕಿ ಆಹಾರ ಸೇವಿಸುತ್ತಿದ್ದಾರೆ. ಅದು ಸರಿಯೂ ಹೌದು. ಆರೋಗ್ಯಕ್ಕೆ ವರವಾಗುವ ಪದಾರ್ಥಗಳನ್ನು ಸೇವಿಸುವುದೇ ಉತ್ತಮ ಆಹಾರ ಎಂಬುದನ್ನು ವೈದ್ಯರು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇತ್ತೀಚೆಗಂತೂ ಮಧ್ಯಮ ವರ್ಗದ ಜನ ಸಹ ಅವಕಾಡೊ, ಬದಾಮಿ, ಗೊಡಂಬಿ, ಆಲಿವ್ ಆಯಿಲ್​ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇವುಗಳ ಜೊತೆಗೆ ಭಾರತದಲ್ಲಿ ಹೆಚ್ಚಿಗೆ ಸಿಗುವ ‘ಮಖಾನಾ’ ಸಹ ನಿಮ್ಮ ಅಡುಗೆ ಮನೆಗೆ ಸೇರಿಸಿಕೊಳ್ಳಿ.

ಕಮಲದ ಬೀಜವನ್ನು ಮಖಾನಾ ಎಂದು ಕರೆಯಲಾಗುತ್ತದೆ. ಇದರ ಆರೋಗ್ಯಕರ ಅಂಶಗಳು ಎಣಿಸಿದರೆ ಮುಗಿಯುವುದು ಕಷ್ಟ. ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಮಖಾನಾ ಬಳಕೆ ಬಲು ಅಪರೂಪದ್ದು, ಆದರೆ ಇದರ ಹೆಲ್ತ್ ಬೆನಿಫಿಟ್ ಗಮನಿಸಿದರೆ ಎಲ್ಲರ ಮನೆಯಲ್ಲೂ ಇರಬೇಕಾದ ವಸ್ತು ಇದಾಗಿದೆ. ಮಖಾನಾ ಅನ್ನು ವಿದೇಶಗಳಲ್ಲಿ ಸೂಪರ್ ಫುಡ್ ಹೆಸರಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತ ಮತ್ತು ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಇದನ್ನು ಬೆಳೆದು ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಕೇವಲ 100 ಗ್ರಾಂ ಮಖಾನಾನಲ್ಲಿ 9.7 ಗ್ರಾಂ ಪ್ರೊಟೀನ್ ಇರುತ್ತದೆ. 14.5 ಗ್ರಾಂ ಫೈಬರ್ ಇರುತ್ತದೆ. 347 ಕ್ಯಾಲರಿ ಒಳಗೊಂಡಿರುತ್ತದೆ. 60 ಮಿಲಿಗ್ರಾಂ ಕ್ಯಾಲ್ಶಿಯಂ ಇರುತ್ತದೆ. 1.4 ಎಂಜಿ ಕಬ್ಬಿಣದ ಅಂಶ ಇರುತ್ತದೆ. 77 ಗ್ರಾಂ ಪಾರ್ಬೊಹೈಡ್ರೇಟ್ಸ್ ಇರುತ್ತದೆ. ಹಾಗಾಗಿ ಈ ಮಖಾನಾ ದೇಹಕ್ಕೆ ಬಹಳ ಒಳ್ಳೆಯ ಆಹಾರ ಎನಿಸಿಕೊಳ್ಳುತ್ತದೆ. ಪ್ರತಿದಿನ ಇದರ ಸೇವನೆಯಿಂದ ಆರೋಗ್ಯಕರ ಆಹಾರ ಪದಾರ್ಥ ದೇಹ ಸೇರಿದಂತಾಗುತ್ತದೆ.

Healthy recipe: ನಾಲಗೆಗೆ ರುಚಿ, ದೇಹಕ್ಕೆ ಹಿತ, ಮಾಡಿ ತಿನ್ನಿ ನುಗ್ಗೇಕಾಯಿ ಚಟ್ನಿ

ನಿತ್ಯ ಮಖಾನಾ ಸೇವನೆ ಮಾಡುವುದರಿಂದ ಅನಗತ್ಯ ಬೊಜ್ಜು ಕಡಿಮೆ ಆಗುತ್ತದೆ. ರಕ್ತದ ಒತ್ತಡವನ್ನೂ ಸಹ ಈ ಆಹಾರ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇರುತ್ತದೆ. ಆಂಟಿ ಏಜಂಗ್ ಆಹಾರ ಎಂದು ಸಹ ಇದನ್ನು ಕರೆಯಲಾಗುತ್ತದೆ. ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯದಲ್ಲಿ ಹೆಚ್ಚಳವಾಗುತ್ತದೆ. ಕಿಡ್ನಿಯ ಆರೋಗ್ಯವನ್ನು ಇದು ಕಾಪಾಡುತ್ತದೆ. ಇದರಲ್ಲಿ ಗ್ಲೂಟನ್ ಇರುವುದಿಲ್ಲವಾದ್ದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಶಕ್ತಿಯನ್ನು ಉತ್ತಮಪಡಿಸುತ್ತದೆ.

LEAVE A REPLY

Please enter your comment!
Please enter your name here