Lithium Deposits
ಭೂಮಿಯ ಅಡಿ ಸಿಗುವ ನಿಕ್ಷೇಪಗಳಲ್ಲಿ ಚಿನ್ನ ಅತ್ಯಂತ ಮೌಲ್ಯಯುತವಾದುದು ಎಂಬುದು ನಮ್ಮ ನಂಬಿಕೆ. ಆದು ಪೂರ್ಣ ಸತ್ಯವಲ್ಲ. ಭೂಮಿಯ ಅಡಿಯಲ್ಲಿ ದೊರೆಯುವ ಇನ್ನೂ ಕೆಲವು ಅದಿರುಗಳಯ ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತವೆ ಮತ್ತು ಈ ಆಧುನಿಕ ಯುಗದಲ್ಲಿ ಹೆಚ್ಚು ಅವಶ್ಯಕವೂ ಆಗಿವೆ. ಅಂಥಹಾ ಕೆಲವು ನೆಲದಾಳದ ವಸ್ತುಗಳಲ್ಲಿ ಲೀಥಿಯಂ ಸಹ ಒಂದು. ಈ ದುಬಾರಿ ಬೆಲೆಯ ಲೀಥಿಯಂ ನಿಕ್ಷೇಪ ಕರ್ನಾಟಕದಲ್ಲಿ ಪತ್ತೆಯಾಗಿದೆ!
ಜಗತ್ತೆಲ್ಲ ಬ್ಯಾಟರಿ ಶಕ್ತಿಗಳತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ಲೀಥಿಯಂಗೆ ಚಿನ್ನಕ್ಕಿಂತಲೂ ಹೆಚ್ಚಿನ ಬೇಡಿಕೆ ಇದೆ. ಲೀಥಿಯಂನ ಒಂದು ಗ್ರಾಂಗೆ 30 ಸಾವಿರ ರೂಪಾಯಿ ಬೆಲೆ ಇದೆಯಂತೆ ಮಾರುಕಟ್ಟೆಯಲ್ಲಿ. ಇಂಥಹಾ ಅಪರೂಪದ ಅದಿರು ಕರ್ನಾಟಕದ ಮಂಡ್ಯ ಮತ್ತು ಯಾದಗಿರಿಯಲ್ಲಿ ಪತ್ತೆ ಆಗಿದೆ. ಈ ಅದಿರು ನಿಕ್ಷೇಪ ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯ ಮರಳಗಾಲದ ಬಳಿ ಸುಮಾರು 1600 ಟನ್ ಲೀಥಿಯಮ್ ನಿಕ್ಷೇಪ ಪತ್ತೆ ಆಗಿದೆ. ಕೇಂದ್ರ ಭೂವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿಯೂ ಉತ್ತಮ ಪ್ರಮಾಣದ ಲೀಥಿಯಮ್ ಇರುವುದು ಪ್ರಾಥಮಿಕ ಸರ್ವೆಗಳಿಂದ ತಿಳಿದು ಬಂದಿದೆ. ಚತ್ತೀಸ್ ಘಡ ರಾಜ್ಯದ ಕೋಬ್ರ ಜಿಲ್ಲೆಯಲ್ಲಿಯೂ ಲೀಥಿಯಂ ನಿಕ್ಷೇಪ ಪತ್ತೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಲೀಥಿಯಂ, ವಿಶ್ವದಲ್ಲೆ ಅತಿ ಹೆಚ್ಚು ಬೇಡಿಕೆ ಇರುವ ಅದಿರುಗಳಲ್ಲಿ ಒಂದಾಗಿದೆ. ಈಗಿನ ಸೋಲಾರ್ ಮತ್ತು ಬ್ಯಾಟರಿ ಶಕ್ತಿಗೆ ಲೀಥಿಯಂ ಅತ್ಯಂತ ಅವಶ್ಯಕವಾಗಿದೆ.
Darshan Thoogudeepa: ಕೊಲ್ಲೂರಿನಲ್ಲಿ ದರ್ಶನ್ ಗಾಗಿ ಪತ್ನಿಯಿಂದ ಯಾಗ, ಏನಿದರ ಮಹತ್ವ, ಕೊಲ್ಲೂರಿನ ಮಹಿಮೆ ಏನು?
ಹಿಮಾಚಲ ಪ್ರದೇಶದಲ್ಲಿ ಅತ್ಯಂತ ಅಮೂಲ್ಯವಾದ ಯುರೇನಿಯಂ ಇರುವುದು ಸಹ ಪತ್ತೆಯಾಗಿದೆ ಎಂದು ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಪರಮಾಣು ಶಕ್ತಿ ಆಯೋಗವು ಈ ಪ್ರದೇಶದಲ್ಲಿ ಈ ವರೆಗೆ ಯಾವುದೇ ಸಂಶೋಧನೆಗಳನ್ನು ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ. ಯುರೇನಿಯಂ ಪತ್ತೆ ಆಗಿರುವ ಸ್ಥಳದಲ್ಲಿ ಸಣ್ಣ ಸಣ್ಣ ನ್ಯೂಕ್ಲಿಯರ್ ಮಾಡ್ಯುಲರ್ ರಿಯಾಕ್ಟರ್ ಗಳನ್ನು ನಿರ್ಮಿಸುವ ಬಗ್ಗೆ ಆಲೋಚಿಸಲಾಗಿದ್ದು, ಮಾಡ್ಯುಲರ್ ರಚನೆ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದಿದ್ದಾರೆ.