House of dragon
ರಕ್ತಪಾತ ಪ್ರಾರಂಭವಾಗಲು ಸಜ್ಜಾಗಿದೆ! ಜಿಯೊಸಿನಿಮಾ ತನ್ನ ಜಾಗತಿಕ ಎಚ್.ಬಿ.ಒ. ಸೀರೀಸ್ ಹೌಸ್ ಆಫ್ ದಿ ಡ್ರ್ಯಾಗನ್ ಎಸ್2 ಅಧಿಕೃತ ಟ್ರೈಲರ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಜಿಯೊಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ಹೌಸ್ ಆಫ್ ದಿ ಡ್ರ್ಯಾಗನ್ ಎಸ್2 ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದ್ದು ಪ್ರತಿ ಸೋಮವಾರ ಯು.ಎಸ್. ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ.
ಜಾರ್ಜ್ ಆರ್.ಆರ್. ಮಾರ್ಟಿನ್ ಅವರ ‘ಫೈರ್ ಅಂಡ್ ಬ್ಲಡ್’ ನೀಳ ಕಾದಂಬರಿ ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ಹೇಳುತ್ತಿದ್ದು ಈ ರಾಜ ಕುಟುಂಬದಲ್ಲಿ ಅತ್ಯಂತ ಕಠಿಣ ಅಧಿಕಾರದ ಸಂಘರ್ಷಗಳ ನಂತರ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತವೆ ಮತ್ತು ಉಕ್ಕಿನ ಸಿಂಹಾಸನವನ್ನು ಮರಳಿ ಪಡೆಯಲು ಎದುರಾದ ಆಂತರಿಕ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಹೇಳುತ್ತದೆ. ಡ್ರ್ಯಾಗನ್ ಗಳು ಮತ್ತು ರಾಜವಂಶಗಳ ವಿಶ್ವದಲ್ಲಿರುವ ಈ ಸರಣಿಯು ಏಳು ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಮುಖರ ಮಹತ್ವಾಕಾಂಕ್ಷೆ, ನಿಷ್ಠೆ ಮತ್ತು ವಂಚನೆಗಳ ಸಂಕೀರ್ಣ ಸಂಬಂಧಗಳ ಕಥೆ ಹೊಂದಿದೆ.
ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ. ಹೆಚ್ಚುವರಿ ತಾರಾಗಣದಲ್ಲಿ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ ಇದ್ದಾರೆ. ಹೊಸ ಸೀಸನ್ ನಲ್ಲಿ ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್ ಮತ್ತು ವಿನ್ಸೆಂಟ್ ರೆಗಾನ್ ಇದ್ದಾರೆ.
ನೇರಳೆ ಹಣ್ಣು ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು
ಹೌಸ್ ಆಫ್ ಡ್ರ್ಯಾಗನ್ ಎಸ್2 ಜೊತೆಯಲ್ಲಿ ಜಿಯೊಸಿನಿಮಾ ಪ್ರೀಮಿಯಂ ಸ್ಥಳೀಯ ಭಾಷೆಗಳಲ್ಲಿ ಮುಂಚೂಣಿಯ ಅಂತಾರಾಷ್ಟ್ರೀಯ ಕಂಟೆಂಟ್, ಸಮಗ್ರ ಮಕ್ಕಳು ಹಾಗೂ ಕೌಟುಂಬಿಕ ಮನರಂಜನೆ, ಒರಿಜಿನಲ್ಸ್, ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ವಿಶೇಷ ಬಿಫೋರ್-ಟಿವಿ ಪ್ರೀಮಿಯರ್ ಗಳು ಮತ್ತು ಲೈವ್ ಚಾನೆಲ್ ಗಳನ್ನು 4ಕೆ ಗುಣಮಟ್ಟದಲ್ಲಿ ಎಲ್ಲವೂ ಕೇವಲ ತಿಂಗಳಿಗೆ ರೂ. 29ರಲ್ಲಿ ಒಂದು ಡಿವೈಸ್ ಗೆ ಹಾಗೂ 4 ಏಕಕಾಲದ ಸ್ಕ್ರೀನ್ ಗಳಿಗೆ ತಿಂಗಳಿಗೆ ರೂ.89ರಲ್ಲಿ ನೀಡುತ್ತಿದೆ. ಇನ್ನೇಕೆ ಕಾಯುತ್ತಿದ್ದೀರಿ? ಈಗಲೇ ಜಿಯೊಸಿನಿಮಾ ಪ್ರೀಮಿಯಂಗೆ ಚಂದಾದಾರರಾಗಿರಿ ಮತ್ತು ಹೌಸ್ ಆಫ್ ಡ್ರ್ಯಾಗನ್ ಎಸ್2 ಮತ್ತು ನಿಮ್ಮ ಭಾಷೆಯಲ್ಲಿ ಹೆಚ್ಚು ವೀಕ್ಷಿಸಿ!