Site icon Samastha News

House of the dragon: ಜಿಯೋ ಸಿನಿಮಾಸ್ ನಲ್ಲಿ‌ ವಿಶ್ವದ ಜನಪ್ರಿಯ ವೆಬ್ ಸರಣಿ ಕೇವಲ 29 ರೂಪಾಯಿಗೆ

House of the Dragon

ವಿಶ್ವದ ಜನಪ್ರಿಯ ವೆಬ್‌ ಸರಣಿ ಅಥವಾ ಟಿವಿ ಶೋ ಆಗಿದ್ದ ʼಗೇಮ್‌ ಆಫ್‌ ಥ್ರೋನ್‌ʼನ ಪ್ರೀಕ್ವೆಲ್‌ ಬಹು ನಿರೀಕ್ಷಿತ ʼಹೌಸ್‌ ಆಫ್‌ ದಿ ಡ್ರ್ಯಾಗನ್”‌ ಸೀಸನ್‌ 2 ಜೂನ್‌ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಏಕಕಾಲಕ್ಕೆ ಈ ಸರಣಿ ಬಿಡುಗಡೆ ಆಗಲಿದೆ. ಮೊದಲೆಲ್ಲ ಭಾರತದ ಪ್ರೇಕ್ಷಕರು ಭಾರಿ ಮೊತ್ತ ಪಾವತಿಸಿ ಒಟಿಟಿಯಲ್ಲಿ ಈ ಶೋ ಅನ್ನು ವೀಕ್ಷಿಸಬೇಕಿತ್ತು ಈಗ ಪರಿಸ್ಥಿತಿ ಬದಲಾಗಿದೆ.

ಹೆಚ್ಚುವರಿಯಾಗಿ ಅತ್ಯಂತ ನಿರೀಕ್ಷೆಯ ʼಹೌಸ್ ಆಫ್ ಡ್ರ್ಯಾಗನ್ ಸೀಸನ್ 2ʼ ಜೂನ್ 17ರಂದು ಜಿಯೋ ಸಿನಿಮಾಸ್‌ನಲ್ಲಿ ಪ್ರಸಾರವಾಗಲಿದ್ದು ಶೋನ ಕಂತುಗಳು ಪ್ರತಿ ಸೋಮವಾರ ಯು.ಎಸ್. ಜೊತೆಯಲ್ಲಿಯೇ ಭಾರತದಲ್ಲಿಯೂ ಬಿಡುಗಡೆಯಾಗಲಿವೆ. ಜಿಯೋ ಸಿನಿಮಾಸ್‌ ನಲ್ಲಿ ಜಾಹೀರಾತು ಮುಕ್ತ ವೀಕ್ಷಣೆಯ ಅನುಭವ ನೀಡುತ್ತಿದ್ದು ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ ಮತ್ತು ಬಂಗಾಳಿ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಸ್ಟ್ರೀಮಿಂಗ್ ನಲ್ಲಿ ವೀಕ್ಷಿಸಬಹುದಾಗಿದೆ.

https://samasthanews.com/five-blockbuster-action-movies-that-you-can-watch-on-ott/

ಜಿಯೊಸಿನಿಮಾ ಸ್ಥಳೀಯ ಭಾಷೆಗಳಲ್ಲಿಯೂ ಈ ಮುಂಚೂಣಿಯ ಅಂತಾರಾಷ್ಟ್ರೀಯ ಕಂಟೆಂಟ್ ಅನ್ನು ಬಿಡುಗಡೆ ಮಾಡಲಿದ್ದು ಸಮಗ್ರವಾದ ಮಕ್ಕಳ ಮತ್ತು ಕುಟುಂಬದ ಮನರಂಜನೆ, ಪ್ರಕಾರ ವ್ಯಾಖ್ಯಾನಿಸುವ ಒರಿಜಿನಲ್ಸ್, ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ವಿಶೇಷ ಟಿ.ವಿ.ಗಿಂತಲೂ ಮುಂಚೆ ಪ್ರಸಾರ ಮತ್ತು ಲೈವ್ ಚಾನೆಲ್ ಗಳು ಎಲ್ಲವೂ 4ಕೆ ಗುಣಮಟ್ಟದಲ್ಲಿ ಕೇವಲ ತಿಂಗಳಿಗೆ ರೂ 29ರಲ್ಲಿ ಆನಂದಿಸಿ.

ಜಿಯೊಸಿನಿಮಾ ತನ್ನ ವೀಕ್ಷಕರಿಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಕಂಟೆಂಟ್ ಪೂರೈಸುವ ಮೂಲಕ ಮುಂಚೂಣಿಯಲ್ಲಿದೆ. ಮನರಂಜನೆಯ ಅನುಭವವನ್ನು ಉನ್ನತೀಕರಿಸುವ ಈ ಅಂತಾರಾಷ್ಟ್ರೀಯ ಕಂಟೆಂಟ್ ಕೊಡುಗೆಯಲ್ಲಿ ವಿಸ್ತಾರ ಶ್ರೇಣಿಯ ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ಅತ್ಯಂತ ಪ್ರಶಂಸೆಗೆ ಒಳಗಾದ ಸೀರೀಸ್ ಒಳಗೊಂಡಿದೆ. ಎಚ್.ಬಿ.ಒ ಮತ್ತು ಪೀಕಾಕ್ ಹಬ್ ನಂತಹ ಜಾಗತಿಕ ನೆಟ್ವರ್ಕ್ ಗಳಿಂದ ಪ್ರೀಮಿಯಂ ಕಂಟೆಂಟ್ ಅಲ್ಲದೆ ಜಿಯೊಸಿನಿಮಾ ಗೇಮ್ ಆಫ್ ಥ್ರೋನ್ಸ್, ಹೌಸ್ ಆಫ್ ಡ್ರ್ಯಾಗನ್ ಎಸ್1, ಸಕ್ಸೆಷನ್, ಓಪನ್ ಹೀಮರ್, ಫಾಸ್ಟ್ ಅಂಡ್ ಫ್ಯೂರಿಯಸ್ 7, ಬಾರ್ಬೀ, ಲಾಸ್ಟ್ ಆಫ್ ಅಸ್, ಮತ್ತಿತರೆ ಒಳಗೊಂಡಿದೆ.

Exit mobile version