The Rameshwaram Cafe
ಪ್ರತಿ ಔಟ್ ಲೆಟ್, 5 ರಿಂದ 8
12 ರಿಂದ 15 ಸಾವಿರ ದೋಸೆ 5
12 ರಿಂದ 15 ಸಾವಿರ ಇಡ್ಲಿ
ದಿನದ ಮೊತ್ತ 24 ಲಕ್ಷ, ತಿಂಗಳಿಗೆ 7.5 ಕೋಟಿ
ದಿ ರಾಮೇಶ್ವರಂ ಕೆಫೆ, ಬೆಂಗಳೂರಿಗರ ಮೆಚ್ಚಿನ ಹೋಟೆಲ್, ಕೆಲ ತಿಂಗಳ ಹಿಂದೆ ಬಾಂಬ್ ಬ್ಲಾಸ್ಟ್’ಗೂ ಗುರಿ ಆಗಿದ್ದ ಈ ಹೋಟೆಲ್’ನಲ್ಲಿ ಜನ ಇಲ್ಲದ ದಿನವೇ ಇಲ್ಲ. 2021 ರಲ್ಲಿ ಕೇವಲ ಒಂದು ಔಟ್’ಲೆಟ್ ಮೂಲಕ ಪ್ರಾರಂಭವಾದ ಈ ಹೋಟೆಲ್ ಚೇನ್ ಈಗ ಬೆಂಗಳೂರಿನಲ್ಲಿ ಐದು ಹಾಗೂ ಹೈದರಾಬಾದ್’ನಲ್ಲಿ ಒಂದು ಬ್ರ್ಯಾಂಚ್ ಹೊಂದಿದೆ. ಎಲ್ಲ ಬ್ರ್ಯಾಂಚ್’ಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿವೆ.
ಅಂದಹಾಗೆ ‘ದಿ ರಾಮೇಶ್ವರಂ ಕೆಫೆ’ ಯಲ್ಲಿ ಪ್ರತಿ ದಿನ ಮಾರಾಟವಾಗುವ ಇಡ್ಲಿ, ದೋಸೆಗಳ ಸಂಖ್ಯೆ ಗೊತ್ತಾದರೆ ಸಾಕು ಈ ಹೋಟೆಲ್ ಅದೆಷ್ಟು ಯಶಸ್ವಿಯಾಗಿ ನಡೆಯುತ್ತಿದೆ ಎಂಬ ಅಂದಾಜು ಸಿಗುತ್ತದೆ. ಈ ಹೋಟೆಲ್ ಚೇನ್ ಮಾಲೀಕರಾದ ರಘು ಹಾಗೂ ಅವರ ಪತ್ನಿ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹೋಟೆಲ್’ನಲ್ಲಿ ಪ್ರತಿದಿನ ಮಾರಾಟವಾಗುವ ಇಡ್ಲಿ, ದೋಸೆಗಳ ಸಂಖ್ಯೆ ಎಷ್ಟೆಂದು ಹೇಳಿಕೊಂಡಿದ್ದಾರೆ.
ದಿ ರಾಮೇಶ್ವರಮ್ ಕೆಫೆಯ ಎಲ್ಲ ಔಟ್’ಲೆಟ್ ಗಳನ್ನೂ ಸೇರಿದರೆ ಪ್ರತಿದಿನ 12 ಸಾವಿರದಿಂದ 15 ಸಾವಿರ ಇಡ್ಲಿಗಳು ಮಾರಾಟ ಆಗುತ್ತವೆ. ಪ್ರತಿದಿನ 12 ರಿಂದ 15 ಸಾವಿರ ದೋಸೆ ಮಾರಾಟ ಆಗುತ್ತವೆ. ಸುಮಾರು 15 ರಿಂದ 17 ಸಾವಿರ ಕಾಫಿ ಅಥವಾ ಟೀ ಮಾರಾಟ ಆಗುತ್ತದೆ. ಇವರ ಪ್ರತಿ ಔಟ್ ಲೆಟ್’ಗೆ ಪ್ರತಿದಿನ 5 ರಿಂದ 8 ಸಾವಿರ ಜನ ಗ್ರಾಹಕರು ಭೇಟಿ ನೀಡುತ್ತಾರೆ.
ಕೆಲವರು ಹೆಚ್ಚು ಕೆಲವರು ಕಡಿಮೆ ಬಿಲ್ ಮಾಡುತ್ತಾರೆ ಹಾಗಾಗಿ ಸರಾಸರಿ ಬಿಲ್ ಮೊತ್ತವನ್ನು ಹಿಡಿದು ಲೆಕ್ಕ ಹಾಕಿದರೆ 8000 ಗ್ರಾಹಕರಿಗೆ ಪ್ರತಿ ತಿಂಗಳು 24 ಲಕ್ಷ ರೂಪಾಯಿ ವ್ಯವಹಾರ ನಡೆಯುತ್ತದೆ, ಪ್ರತಿ ತಿಂಗಳಿಗೆ 7.5 ಕೋಟಿ ರೂಪಾಯಿ ವ್ಯವಹಾರ ದಿ ರಾಮೇಶ್ವರಮ್ ಕೆಫೆಯಲ್ಲಿ ನಡೆಯುತ್ತದೆ. 50% ಆದಾಯ ಎಂದುಕೊಂಡರೆ ದಿ ರಾಮೇಶ್ವರಮ್ ಕೆಫೆಯ ತಿಂಗಳ ಅದಾಯ ಸುಮಾರು 3.5 ಕೋಟಿ ರೂಪಾಯಿಗಳು.
IIT: ಕಾಲೇಜು ಮುಗಿಯುವ ಮುನ್ನವೇ ಸಿಕ್ತು 4.3 ಕೋಟಿ ರೂಪಾಯಿ ಸಂಬಳದ ಉದ್ಯೋಗ
ದಿ ರಾಮೇಶ್ವರಮ್ ಕೆಫೆ ಮಾಲೀಕರು ಈಗ ಪ್ರಾಂಚೈಸ್ ಮಾದರಿಯ ವ್ಯವಹಾರ ನಡೆಸುತ್ತಿದ್ದು, ಭಾರತದ ಬೇರೆ ಬೇರೆ ನಗರಗಳಲ್ಲಿ ಪ್ರಾಂಚೈಸ್ ಮಾದರಿಯಲ್ಲಿ ತಮ್ಮ ಘಟಕಗಳನ್ನು ತೆರೆಯುತ್ತಿದ್ದಾರೆ. ದಿ ರಾಮೇಶ್ವರಮ್ ಕೆಫೆ ಮಾಲೀಕ ರಘು ಹೇಳುವಂತೆ ಪ್ರತಿ ತಿಂಗಳು ಅವರಿಗೆ ಸುಮಾರು 10 ಸಾವಿರ ಅಪ್ಲಿಕೇಶನ್’ಗಳು ಬರುತ್ತವೆಯಂತೆ ಆದರೆ ಅವರು ವರ್ಷಕ್ಕೆ ಇಬ್ಬರಿಗೆ ಮಾತ್ರವೇ ಪ್ರಾಂಚೈಸ್ ನೀಡುತ್ತಾರಂತೆ.