BCCI
ಭಾರತದ ಕ್ರಿಕೆಟ್ ಅನ್ನು ನಿಯಂತ್ರಿಸುತ್ತಿರುವ ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಭಾರತದ ಅತ್ಯಂತ ಶ್ರೀಮಂತ ಸರ್ಕಾರಿ ಅಂಗ ಸಂಸ್ಥೆಗಳಲ್ಲಿ ಒಂದು. ಮಾತ್ರವಲ್ಲದೆ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಸಹ ಹೌದು. ಇಂಗ್ಲೆಂಡ್, ಆಸ್ಟ್ರೇಲಿಯಾದ ಕ್ರಿಕೆಟ್ ಬೋರ್ಡ್ಗಳು ಭಾರತದ ಬಿಸಿಸಿಐನ ಅರ್ಧದಷ್ಟು ಶ್ರೀಮಂತಿಕೆಯನ್ನು ಸಹ ಹೊಂದಿಲ್ಲ. ಅಂದಹಾಗೆ ಬಿಸಿಸಿಐನ 2023ರ ವಾರ್ಷಿಕ ಆದಾಯ ಎಷ್ಟು? ಐಪಿಎಲ್ ಮಾತ್ರದಿಂದಲೇ ಪ್ರತಿ ವರ್ಷ ಬಿಸಿಸಿಐ ಗಳಿಸುತ್ತಿರುವ ಹಣವೆಷ್ಟು? ಇಲ್ಲಿದೆ ಮಾಹಿತಿ.
2023ರ ಐಪಿಎಲ್ ಇಂದ ಬಿಸಿಸಿಐ ಗಳಿಸಿರುವ ಮೊತ್ತ ಬರೋಬ್ಬರಿ 5120 ಕೋಟಿ ರೂಪಾಯಿ. ತಮ್ಮ ಗಳಿಕೆಯನ್ನು ಸ್ವತಃ ಬಿಸಿಸಿಐ ಹೇಳಿಕೊಂಡಿದೆ. ಅಂದಹಾಗೆ 2022 ರಲ್ಲಿ ಬಿಸಿಸಿಐ, ಐಪಿಎಲ್ ಟೂರ್ನಿಯಿಂದ ಗಳಿಸಿರುವ ಮೊತ್ತದ ದುಪ್ಪಟ್ಟು ಹಣವನ್ನು 2023 ರಲ್ಲಿ ಗಳಿಸಿದೆ. 2022 ರಲ್ಲಿ 2367 ಕೋಟಿ ರೂಪಾಯಿ ಹಣವನ್ನು ಬಿಸಿಸಿಐ, ಐಪಿಎಲ್ನಿಂದ ಗಳಿಸಿತ್ತು. ಒಂದೇ ವರ್ಷದಲ್ಲಿ ಆ ಮೊತ್ತ ದುಪ್ಪಟ್ಟಾಗಿದೆ.
ಇನ್ನು ಬಿಸಿಸಿಐ 2023ರಲ್ಲಿ ಗಳಿಕೆ ಮಾಡಿರುವ ವಾರ್ಷಿಕ ಆದಾಯ ಬರೋಬ್ಬರಿ 11,769 ಕೋಟಿ ರೂಪಾಯಿ. 2022ರ ಆದಾಯದ ಸುಮಾರು 70% ಹೆಚ್ಚುವರಿ ಆದಾಯವನ್ನು 2023 ರಲ್ಲಿ ಬಿಸಿಸಿಐ ಗಳಿಸಿಕೊಂಡಿದೆ. ಮಾತ್ರವಲ್ಲದೆ ಕೋವಿಡ್ ವರ್ಷ ಹೊರತುಪಡಿಸಿದರೆ ವರ್ಷದಿಂದ ವರ್ಷಕ್ಕೆ ಬಿಸಿಸಿಐ ಆದಾಯದಲ್ಲಿ 50% ಗಿಂತಲೂ ಹೆಚ್ಚಳ ಆಗುತ್ತಲೇ ಹೋಗುತ್ತಿದೆ.
2023 ರಿಂದ 27ಕ್ಕೆ ಬಿಸಿಸಿಐ ಹೊಸ ಮೀಡಿಯಾ ಒಪ್ಪಂದವನ್ನು ಐಪಿಎಲ್ ಜೊತೆಗೆ ಮಾಡಿಕೊಂಡಿದೆ. ಈ ನಾಲ್ಕು ವರ್ಷದ ಮೀಡಿಯಾ ಒಪ್ಪಂದದ ಒಟ್ಟು ಮೌಲ್ಯ 49,390 ಕೋಟಿ ರೂಪಾಯಿಗಳು. ದರ ಹೊರತಾಗಿ ಸ್ಪಾನ್ಸರ್ಶಿಪ್ ಡೀಲ್, ಮೀಡಿಯಾ ರೈಟ್ಸ್ ಆದಾಯದಲ್ಲಿ ಆಗಿರುವ ಹೆಚ್ಚಳ, ಫ್ಯಾಂಚೈಸ್ಗಳು ಬಿಸಿಸಿಐಗೆ ಕಟ್ಟಬೇಕಾಗಿರುವ ಮೊತ್ತದಲ್ಲಿ ಹೆಚ್ಚಳ, ಸ್ಪಾನ್ಸರ್ಶಿಪ್ ರೆವಿನ್ಯೂ ಹೆಚ್ಚಳ ಇದೆಲ್ಲದರಿಂದ ಬಿಸಿಸಿಐನ ಆದಾಯ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದೆ.
Sachin Tendulkar: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಹಣ ಗಳಿಸಿದ ಸಚಿನ್ ತೆಂಡೂಲ್ಕರ್
ಐಪಿಎಲ್ ಇಂದ ಮಾತ್ರವೇ ಅಲ್ಲದೆ ಡಬ್ಲುಪಿಎಲ್ (ವಿಮೆನ್ ಪ್ರೀಮಿಯರ್ ಲೀಗ್) ಇಂದ ಬಿಸಿಸಿಐ ಸುಮಾರು 1300 ಕೋಟಿ ರೂಪಾಯಿ ಆದಾಯ ಗಳಿಸಿದೆ. ಒಟ್ಟಾರೆಯಾಗಿ ಬಿಸಿಸಿಐ ಪ್ರಸ್ತುತ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿದೆ.