MS Dhoni
ಮಹೇಂದ್ರ ಸಿಂಗ್ ಧೋನಿ, ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ. ಪ್ರಮುಖ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಗೆದ್ದ ತಂಡದ ನಾಯಕತ್ವ ವಹಿಸಿದ್ದರು ಧೋನಿ. ಇಷ್ಟು ಮಾತ್ರವೇ ಅಲ್ಲದೆ ಧೋನಿ, ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಸಹ ಆಗಿದ್ದವರು. ಧೋನಿ , ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿ ವರ್ಷಗಳೇ ಆಗಿದೆ. ಈಗ ಧೋನಿ ವರ್ಷಕ್ಕೆ ಎಷ್ಟು ಹಣ ಗಳಿಸುತ್ತಿದ್ದಾರೆ ಮತ್ತು ಅವರ ಆದಾಯದ ಮೂಲಗಳು ಯಾವುದು?
ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಆಡುತ್ತಿದ್ದಾಗ, ಕ್ರಿಕೆಟ್ ನಿಂದ ಬರುವ ಸಂಭಾವನೆ, ಜಾಹೀರಾತು, ಸ್ಪಾನ್ಸರ್ ಶಿಪ್ ಇನ್ನೂ ಕೆಲವು ಮೂಲಗಳಿಂದ ಹಣ ಗಳಿಸುತ್ತಿದ್ದರು ಧೋನಿ. ಆದರೆ ನಿವೃತ್ತಿ ಆದ ಬಳಿಕವೂ ಸಹ ಧೋನಿಯ ವಾರ್ಷಿಕ ಆದಾಯ ಕಡಿಮೆಯೇನೂ ಆಗಿಲ್ಲ. ಈಗಲೂ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯವನ್ನು ಧೋನಿ ಗಳಿಸುತ್ತಾರೆ. ಈಗ ಕ್ರಿಕೆಟ್ ಹೊರತಾಗಿ ಬೇರೆ ಬೇರೆ ಮೂಲಗಳಿಂದ ಧೋನಿಗೆ ಆದಾಯ ಬರುತ್ತಿವೆ.
ಮಹೇಂದ್ರ ಸಿಂಗ್ ಧೋನಿ ಒಳ್ಳೆಯ ಕ್ರಿಕೆಟಿಗ ಮಾತ್ರವೆ ಅಲ್ಲ ಉದ್ಯಮಿಯೂ ಹೌದು. ಧೋನಿ ಹಲವು ಹೊಸ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರದ್ದೇ ಹೆಸರಿನ ಶಿಕ್ಷಣ ಸಂಸ್ಥೆ ಮತ್ತು ಕ್ರಿಕೆಟ್ ಅಕಾಡೆಮಿಗಳನ್ನು ಧೋನಿ ಹೊಂದಿದ್ದಾರೆ. ಧೋನಿಯ ಶಿಕ್ಷಣ ಸಂಸ್ಥೆಯ ಜಾಹೀರಾತು ಆಗಾಗ್ಗೆ ಟಿವಿ, ಯೂಟ್ಯೂಬ್ ಗಳಲ್ಲಿ ಕಾಣಿಸುತ್ತಿರುತ್ತವೆ.
ಧೋನಿ ಕೆಲವು ಫಿಟ್ ನೆಸ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ, ಮಾತ್ರವಲ್ಲದೆ ‘ಸೆವೆನ್’ ಹೆಸರಿನ ಲೈಫ್ ಸ್ಟೈಲ್ ಬ್ರ್ಯಾಂಡ್ ನ ಮಾಲೀಕರು ಸಹ ಹೌದು. ಧೋನಿ, ಡ್ರೋನ್ ಇನ್ನೋವೇಷನ್ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಮಾತ್ರವೇ ಅಲ್ಲದೆ ಒಂದು ಸಾಫ್ಟ್ ವೇರ್ ಉದ್ಯಮದ ಮೇಲೂ ಸಹ ಧೋನಿ ಹೂಡಿಕೆ ಮಾಡಿದ್ದಾರೆ. ಧೋನಿ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದು, ಕೆಲವು ತಂತ್ರಜ್ಞಾನ ಸಂಬಂಧಿ ಸ್ಟಾರ್ಟ್ ಅಪ್ ಗಳ ಮೇಲೆ ಹೂಡಿಕೆ ಮಾಡಿದ್ದಾರೆ.
ಧೋನಿ ಈಗಲೂ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾರ್ಸ್ 24, ಪಾಲಿಸಿ ಬಜಾರ್, ಡ್ರೀಮ್ಸ್ 11, ಗಲ್ಫ್ ಆಯಿಲ್, ಏಶಿಯನ್ ಶೂಸ್, ಓರಿಯೋ, ಸಿಟ್ರಾನ್ ಕಾರು ಇನ್ನೂ ಕೆಲವು ಕಂಪೆನಿಗಳ ರಾಯಭಾರಿ ಆಗಿದ್ದು, ಇವುಗಳಿಂದಲೂ ವಾರ್ಷಿಕವಾಗಿ ಸುಮಾರು 50 ಕೋಟಿ ಹಣ ಗಳಿಕೆ ಮಾಡುತ್ತಾರೆ. ಧೋನಿ ತಮ್ಮದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ ಹೊಂದಿದ್ದಾರೆ. ಈಗಾಗಲೇ ಒಂದು ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.
MS Dhoni: ಧೋನಿ ಜೊತೆ ಮಾತು ಬಿಟ್ಟು ಹತ್ತು ವರ್ಷವಾಯ್ತು: ಹರ್ಭಜನ್ ಸಿಂಗ್
ನೆನಪಿರಲಿ ಧೋನಿ ನಿವೃತ್ತಿ ಪಡೆದಿರುವುದು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಮಾತ್ರ, ಅವರು ಇನ್ನೂ ಐಪಿಎಲ್ ಆಡುತ್ತಿದ್ದಾರೆ. ಐಪಿಎಲ್ ನಿಂದ ವರ್ಷಕ್ಕೆ ಸುಮಾರು 50 ಕೋಟಿ ಹಣವನ್ನು ಧೋನಿ ಗಳಿಸುತ್ತಾರೆ. ಅಂದಹಾಗೆ ಧೋನಿ ಕೃಷಿಕರೂ ಹೌದು, ರಾಂಚಿಯಲ್ಲಿ ಅವರು ಸಾವಯವ ಕೃಷಿ ಮಾಡುತ್ತಾರೆ. ಥರಹೇವಾರಿ ತರಕಾರಿ, ಹಣ್ಣುಗಳನ್ನು ಸಹ ಬೆಳೆಯುತ್ತಾರೆ ಇದರಿಂದ ವರ್ಷಕ್ಕೆ ಸುಮಾರು 20 ರಿಂದ 40 ಲಕ್ಷದ ವರೆಗೆ ಹಣ ಗಳಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಧೋನಿ ಈಗಲೂ ಸಹ ವರ್ಷಕ್ಕೆ ಸುಮಾರು 100 ಕೋಟಿ ಆದಾಯ ಗಳಿಸುತ್ತಾರೆ.