IPL Champions
ಐಪಿಎಲ್ 2024 ಅದ್ದೂರಿಯಾಗಿ ಮುಗಿದಿದೆ. ತಂಡಗಳು ಕಪ್ ಗಾಗಿ ಶಕ್ತಿಮೀರಿ ಪ್ರಯತ್ನಿಸಿದವು, ಆದರೆ ಅಂತಿಮವಾಗಿ ಈ ಬಾರಿಯ ಕಪ್ ಕೆಕೆಆರ್ ನದ್ದಾಯ್ತು. ಟೂರ್ನಿಯ ಮೊದಲಿನಿಂದಲೂ ಚೆನ್ನಾಗಿ ಆಡಿದ್ದ ಹೈದರಾಬಾದ್ ತಂಡ ಫೈನಲ್ ನಲ್ಲಿ ಎಡವಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಆದರೆ ಐಪಿಎಲ್ ಗೆದ್ದ ಕೆಕೆಆರ್ ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು? ದ್ವಿತೀಯ ಸ್ಥಾನ ಪಡೆದ ಹೈದರಾಬಾದ್ ಗೆ ಎಷ್ಟು ಸಿಕ್ಕಿತು?
ಈ ಐಪಿಎಲ್ ಸೀಸನ್ ಗೆ ಒಟ್ಟು 46.5 ಕೋಟಿ ಬಹುಮಾನದ ಮೊತ್ತವನ್ನು ಬಿಸಿಸಿಐ ನಿಗದಿ ಪಡಿಸಿತ್ತು. ಮೊದಲ ಬಹುಮಾನ ಗೆದ್ದ ಕೆಕೆಆರ್ ಗೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನದ ಮೊತ್ತ ನೀಡಲಾಯ್ತು. ಈ ಮೊತ್ತ ತಂಡದ ಮಾಲೀಕನ ಪಾಲಾಗುತ್ತದೆ. ದ್ವಿತೀಯ ಸ್ಥಾನ ಪಡೆದ ಹೈದರಾಬಾದ್ ತಂಡಕ್ಕೆ 13 ಕೋಟಿ ರೂಪಾಯಿ ದೊರಕಿತು.
ಮೂರನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ಕೋಟಿ ರೂಪಾಯಿ ಬಹುಮಾನ ನೀಡಲಾಯ್ತು. ನಾಲ್ಕನೇ ಸ್ಥಾನದಲ್ಲಿ ಟೂರ್ನಿಯಿಂದ ನಿರ್ಗಮಿಸಿದ RCB ಗೆ ಸಿಕ್ಕಿದ್ದು 6.50 ಕೋಟಿ ರೂಪಾಯಿ. ಅತಿ ಹೆಚ್ಚು ರನ್ ಭಾರಿಸಿ ಆರೆಂಜ್ ಕ್ಯಾಪ್ ಪಡೆದ ಕೊಹ್ಲಿಗೆ 10 ಲಕ್ಷ, ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದ ಪಂಜಾಬ್ ನ ಹರ್ಷಲ್‌ಪಟೇಲ್ ಗೆ ತಲಾ 10 ಲಕ್ಷ ಹಣ ನಿಒಡಲಾಗಿದೆ. ಟೂರ್ನಿಯ ಮೌಲ್ಯಯುತ ಆಟಗಾರ ಎನಿಸಿಕೊಂಡ ಸುನಿಲ್ ನರೇನ್ ಗೆ 1 2 ಲಕ್ಷ ಹಣ ನೀಡಲಾಯ್ತು.
Chikkaballapur: 2 ರೂಪಾಯಿ ವಾಪಸ್ ಕೊಡದಿದ್ದರೆ ತೀವ್ರ ಹೋರಾಟ: ಸಂಸದ ಕೆ ಸುಧಾಕರ್
ಟೂರ್ನಿಯ ಮೊದಲ ನಾಲ್ಕು ತಂಡಗಳಿಗೆ ಮಾತ್ರವೇ ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ. ಹಾಗಾಗಿ ಕ್ವಾಲಿಫೈಯರ್ ರೌಂಡ್ ಗೆ ಬಾರದ ಯಾವುದೇ ತಂಡಕ್ಕೆ ಬಹುಮಾನದ ಮೊತ್ತ ನೀಡಲಾಗಿಲ್ಲ.