Site icon Samastha News

Science News: ಮನುಷ್ಯ ಬರಿ ಗಣ್ಣಿನಿಂದ ಎಷ್ಟು ದೂರ ನೋಡಬಲ್ಲ

Science News:

Science News

ಅರಚುವ ಮೈಕ್​ನ ಶಬ್ದ ಎಷ್ಟು ದೂರದ ವರೆಗೆ ಕೇಳುತ್ತದೆ? ಸುಮಾರು 500 ಮೀಟರ್. ಭಾರಿ ಜೋರು ಶಬ್ದವಾದರೆ ಒಂದು ಕಿ.ಮೀ. ದೂರದಿಂದಲೂ ಕೇಳಬಲ್ಲದು. ಒಂದೊಳ್ಳೆಯ ಅಡುಗೆಯ ವಾಸನೆ ಎಷ್ಟು ದೂರದಿಂದ ಮೂಗಿಗೆ ಬಡಿಯಬಹುದು? ಸುಮಾರು 30 ಮೀಟರ್. ಹೀಗೆ ಪಂಚೇಂದ್ರಿಯಗಳಲ್ಲಿ ಮುಖ್ಯವಾದ ಮೂಗು ಮತ್ತು ಕಿವಿಗಳ ಕಾರ್ಯಕ್ಕೆ ಒಂದು ಮಿತಿ ಇದೆ. ಇಂತಿಷ್ಟು ದೂರದಲ್ಲಿ ನಡೆಯುವ ಶಬ್ದ ಅಥವಾ ವಾಸನೆಯನ್ನು ಅವು ಗ್ರಹಿಸಲಾರವು. ಅವುಗಳ ಶಕ್ತಿಗೆ ಅಥವಾ ಕಾರ್ಯಕ್ಷಮತೆಗೆ ಒಂದು ಮಿತಿಯಿದೆ. ಒಂದಿಷ್ಟು ದೂರದ ಬಳಿಕ ಉಂಟಾದ ಶಬ್ದ ಕಿವಿಗೆ ಕೇಳಿಸಿಕೊಳ್ಳಲಾಗುವುದಿಲ್ಲ, ಒಂದಿಷ್ಟು ದೂರದ ಬಳಿಕ ಮೂಗು ವಾಸನೆಯನ್ನು ಗ್ರಹಿಸಲಾಗುವುದಿಲ್ಲ ಎಂದಾದರೆ, ಕಣ್ಣು ಎಷ್ಟು ದೂರ ನೋಡಬಲ್ಲದು, ಅದರ ಕ್ಷಮತೆಗೂ ಮಿತಿ ಇದೆಯೇ? ಬನ್ನಿ ತಿಳಿಯೋಣ.

ಆರೋಗ್ಯವಂತ ವ್ಯಕ್ತಿಯ ಆರೋಗ್ಯವಂತ ಬರಿಗಣ್ಣು ಎಷ್ಟು ದೂರ ನೋಡಬಲ್ಲದು? ಅಥವಾ ಎಷ್ಟು ದೂರದಲ್ಲಿರುವ ವಸ್ತು ಆರೋಗ್ಯವಂತ ಬರಿಗಣ್ಣಿಗೆ ಕಾಣುತ್ತದೆ? ಇದಕ್ಕೆ ಉತ್ತರ ಸುಲಭವಲ್ಲ, ತುಸು ಸಂಕೀರ್ಣ. ಸ್ವಚ್ಛ ಆಕಾಶದಲ್ಲಿ ನಾವು ನಕ್ಷತ್ರಗಳನ್ನು ನೋಡಬಲ್ಲೆವು, ಆ ನಕ್ಷತ್ರಗಳು ಮನುಷ್ಯನಿಂದ ಅದೆಷ್ಟೋ ಜೋತಿರ್ವರ್ಷಗಳಷ್ಟು (Lightyear) ದೂರದಲ್ಲಿದೆ. ಅಸಲಿಗೆ ಮನುಷ್ಯನ ಬರಿಗಣ್ಣಿಗೆ ಕಾಣುತ್ತಿರುವ ಅತ್ಯಂತ ದೂರದ ಗ್ಯಾಲಕ್ಸಿ, ಟ್ರಿಯಾಂಗುಲಮ್ ಗ್ಯಾಲಕ್ಸಿ (Meisser 33). ಈ ಗ್ಯಾಲೆಕ್ಸಿ ಭೂಮಿಯಿಂದ 30 ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರವಿದೆ. ಒಂದು ಜ್ಯೋತಿರ್ವರ್ಷವೆಂದರೆ ಸುಮಾರು 9 ಕೋಟಿ-ಕೋಟಿ ಕಿಲೋ ಮೀಟರ್​ಗಳು. (9.7 ಟ್ರಿಲಿಯನ್) ಅಲ್ಲಿಗೆ 30 ಲಕ್ಷ ಜ್ಯೋತಿರ್ವರ್ಷಗಳು ಎಂದರೆ ಅದೆಷ್ಟು ದೂರ ಇರಬಹುದು? ಊಹಿಸಲು ಸಹ ಸಾಧ್ಯವಿಲ್ಲ.

ವ್ಯಕ್ತಿಯೊಬ್ಬ ಭೂಮಿಯ ಮೇಲೆ ನಿಂತು ಅಂತರಿಕ್ಷದ ಕಡೆಗೆ ನೋಡಿದಾಗ ಆತನ ದೃಷ್ಟಿಗೆ ಮಿತಿ ಇಲ್ಲ. ಬೆಳಕು ಹರಿಯುವ ಎಷ್ಟು ದೂರವಾದರೂ ಆತ ನೋಡಬಲ್ಲ. ಆದರೆ ಭೂಮಿಯ ಮೇಲೆ ನಿಂತು ಮೇಲಕ್ಕಲ್ಲದೆ ಕಣ್ಣಿನ ನೇರಕ್ಕೆ ನೋಡಿದಾಗ ಹೆಚ್ಚು ದೂರ ಆತನ ದೃಷ್ಟಿ ಹರಿಯಲಾರದು. ಭೂಮಿಯ ಮೇಲೆ ಯಾವುದೇ ಅಡ್ಡಿಗಳಿಲ್ಲದೆ ಮನುಷ್ಯನ ಕಣ್ಣು ಸುಮಾರು 3 ಅಥವಾ ನಾಲ್ಕು ಮೈಲಿಗಳಷ್ಟು ದೂರದಲ್ಲಿರುವ ವಸ್ತುವನ್ನಷ್ಟೆ ನೋಡಬಲ್ಲ. ಆಕಾಶ ನೋಡಿದಾಗ ಮಿತಿಯೇ ಇಲ್ಲದಷ್ಟು ದೂರ ನೋಡಬಲ್ಲ ಮನುಷ್ಯ, ಭೂಮಿಯ ಮೇಲ್ಮೈಯ ಮೇಲೆ ಕೆಲವು ಮೈಲುಗಳಷ್ಟೆ ನೋಡಬಲ್ಲ. ಇದಕ್ಕೆ ಕಾರಣ ಭೂಮಿಯ ರಚನೆ.

Sandalwood News: 50 ದಿನ ಪೂರೈಸಿದ ʼಕೆರೆಬೇಟೆʼ: ಹಣ ಮಾಡದಿದ್ದರೂ ಯಶಸ್ಸಿನ ಸಂಭ್ರಮ

ಭೂಮಿ ಗುಂಡಗಿದೆ. ಈ ಗುಂಡಗಿನ ರಚನೆಯಿಂದಾಗಿಯೇ ವ್ಯಕ್ತಿ ಮೂರು ಅಥವಾ ನಾಲ್ಕು ಮೈಲುಗಳ ಆಚೆ ಇರುವ ವಸ್ತುವನ್ನು ಬರಿಗಣ್ಣಿನಿಂದ ನೋಡಲಾರ. ಒಮ್ಮೆ ಊಹಿಸಿಕೊಳ್ಳಿ, ನೀವೊಂದು ಸಮುದ್ರ ದಂಡೆಯ ಮೇಲೆ ನಿಂತಿದ್ದಿದ್ದೀರಿ, ಒಂದು ನಿರ್ದಿಷ್ಟ ದೂರದ ಬಳಿಕ ಸಮುದ್ರ ಹಾಗೂ ಆಕಾಶ ಒಂದಾದಂತೆ ಕಾಣುತ್ತದೆ. ಅದರ ಮುಂದಿನದ್ದು ಏನೂ ಸಹ ನಿಮಗೆ ಕಾಣಿಸುವುದಿಲ್ಲ. ಇದಕ್ಕೆ ಕಾರಣ, ಭೂಮಿಯ ಗೋಲಾಕಾರ. ಭೂಮಿ ಗೋಲಾಕಾರವಾಗಿರುವ ಕಾರಣ, ಹಾಗೂ ಬೆಳಕು ನೇರವಾಗಿ ಹರಿಯುವ ಕಾರಣ ಮನುಷ್ಯ ಭೂಮಿನ ಮೇಲ್ಮೈನ ಮೇಲಿರುವ ವಸ್ತುವನ್ನು ಯಾವುದೇ ಅಡೆ-ತಡೆ ಇಲ್ಲದೆ ಕೇವಲ ಮೂರು ಅಥವಾ ನಾಲ್ಕು ಮೈಲಿ ದೂರವಷ್ಟೆ ನೋಡಬಲ್ಲ. ಈಗ ತಿಳಿಯಿಯೇ ಮನಿಷ್ಯನ ಕಣ್ಣಿನ ಕಮಾಲ್.

Exit mobile version