Yogi Adityanath
ಲೋಕಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆಯುತ್ತಿದೆ. ಬಿಜೆಪಿಯ ಪ್ರಮುಖ ನಾಯಕರು ಕಾಂಗ್ರೆಸ್ ವಿರುದ್ಧ ಧರ್ಮದ ದಾಳವನ್ನು ಬೀಸಿ ಎಸೆಯುತ್ತಿದ್ದಾರೆ. ನರೇಂದ್ರ ಮೋದಿ ಇತ್ತೀಚೆಗಷ್ಟೆ ಕಾಂಗ್ರೆಸ್ ವಿರುದ್ಧ ಕಟು ಟೀಕೆಗಳನ್ನು ಮಾಡಿದ್ದರು. ಮೋದಿಯ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ದೂರು ನೀಡಿದ್ದು, ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ. ಇದೀಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಕಾಂಗ್ರೆಸ್ ವಿರುದ್ಧ ಧರ್ಮದ ದಾಳ ಉರುಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ, ‘ಕಾಂಗ್ರೆಸ್ ಗೆದ್ದರೆ ರಾಜ್ಯದಲ್ಲಿ (ಉತ್ತರ ಪ್ರದೇಶ) ಮತ್ತೆ ಗೋ ಮಾಂಸ ಭಕ್ಷಣೆಗೆ ಅವಕಾಶ ಕೊಡಲಿದ್ದಾರೆ” ಎಂದಿದ್ದಾರೆ. ಭಾರತದ ಹಿಂದುಗಳು ಗೋವನ್ನು ಪವಿತ್ರ ಎಂದು ನಂಬಿದ್ದಾರೆ. ಗೋ ಮಾಂಸ ಭಕ್ಷಣೆಯನ್ನು ಅವರು ವಿರೋಧಿಸುತ್ತಾರೆ. ಆದರೆ ಕಾಂಗ್ರೆಸ್ ಮುಸ್ಲೀಮರು ಗೋ ಮಾಂಸ ಭಕ್ಷಣೆಗೆ ಅವಕಾಶ ಕೊಡುವ ಗುರಿಯನ್ನು ಹೊಂದಿದ್ದಾರೆ. ಇದನ್ನು ಹಿಂದುಗಳು ವಿರೋಧಿಸುತ್ತಾರೆ’ ಎಂದಿದ್ದಾರೆ.
ಮೊಹಮ್ಮದ್ ಶಮಿಯ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ಉತ್ತರ ಪ್ರದೇಶದಲ್ಲಿ ಗೋ ಮಾಂಸ ಭಕ್ಷಣೆ, ಗೋ ಕಳ್ಳಸಾಗಣೆ ವಿರುದ್ಧ ಕಠಿಣ ಕಾನೂನುಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ರೂಪಿಸಿದೆ. 2020ರ ಗೋ ಹತ್ಯೆ ತಡೆ ಕಾನೂನಿನಂತೆ ಉತ್ತರ ಪ್ರದೇಶದಲ್ಲಿ ಗೋ ವಧೆಗೆ 10 ವರ್ಷಗಳ ಕಾರಾಗೃಹ ಹಾಗೂ 10 ಲಕ್ಷ ಜುಲ್ಮಾನೆ ಇದೆ. ಗೋ ಕಳ್ಳ ಸಾಗಣೆಗೆ ಏಳು ವರ್ಷಗಳ ಜೈಲು ಹಾಗೂ 3 ಲಕ್ಷ ಜುಲ್ಮಾನೆ ವಿಧಿಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿವೆ. ಹಾಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಉತ್ತರ ಪ್ರದೇಶವನ್ನು ತಮ್ಮದಾಗಿಸಿಕೊಳ್ಳುವ ತೀವ್ರ ಪ್ರಯತ್ನದಲ್ಲಿದೆ. ಸಿಎಂ ಯೋಗಿ ಆದಿತ್ಯನಾಥ್ ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದು, ಅವರ ಪ್ರಭಾವ ರಾಜ್ಯದಲ್ಲಿ ಹೆಚ್ಚಿದೆ. ಕಳೆದ ಬಾರಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಅತ್ಯಧಿಕ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಅದೇ ಮುಂದುವರೆಯುವ ಸಾಧ್ಯತೆ ಇದೆ.