Site icon Samastha News

IIT Madras: ಬೆಂಗಳೂರಿನಿಂದ ಮುಂಬೈಗೆ ಕೇವಲ 1 ಗಂಟೆಯಲ್ಲಿ! ಬರುತ್ತಿದೆ ಹಳಿಯ ಮೇಲೆ ಓಡುವ ವಿಮಾನ

IIT Madras

IIT Madras

ಬೆಂಗಳೂರಿನಿಂದ ಮುಂಬೈ ಸುಮಾರು 1000 ಕಿ.ಮೀ ದೂರದಲ್ಲಿದೆ‌. ವಿಮಾನದಲ್ಲಿ ಹೋದರೂ ಬೆಂಗಳೂರಿನಿಂದ ಮುಂಬೈ ತಲುಪಲು ಎರಡು ಗಂಟೆ ಬೇಕು. ಆದರೆ ವಿಮಾನಕ್ಕಿಂತಲೂ ಬೇಗ ನಿಮ್ಮನ್ನು ಬೆಂಗಳೂರಿನಿಂದ ಮುಂಬೈಗೆ ತಲುಪಿಸಬಹುದು ಎಂದರೆ ನಂಬುತ್ತೀರ? ಖಂಡಿತ ನಂಬಲೇ ಬೇಕು. ವಿಮಾನಕ್ಕಿಂತಲೂ ವೇಗವಾಗಿ ಸಂಚರಿಸುವ ರೈಲೊಂದು ಭಾರತದಲ್ಲಿ ಅಭಿವೃದ್ಧಿಯಾಗುತ್ತಿದೆ.

ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಹೈಪರ್ ಲೂಪ್ ಮಾದರಿಯ ಸಾರಿಗೆ ವಾಹನವನ್ನು ತಯಾರು ಮಾಡಿದ್ದಾರೆ. ಇದರ ಪ್ರಯೋಗಾರ್ಥ ಚಾಲನೆಯೂ ನಡೆದಿದೆ. ಹೈಪರ್ ಲೂಪ್ ಪಾಡ್ ಎಂದರೆ ಉದ್ದನೆಯ ಆದರೆ ತುಸು ದೊಡ್ಡ ಟ್ಯೂಬ್ ಗಳನ್ನು ಅಳವಡಿಸಿ ಅದರ ಒಳಗೆ ಮ್ಯಾಗ್ನೆಟಿಕ್ ಅಥವಾ ವಿದ್ಯುತ್ ಚಾಲಿತ ಟ್ರೈನ್ ಅನ್ನು ಓಡಿಸುವ ವ್ಯವಸ್ಥೆ. ಪಾಡ್ ನಿಂದಾಗಿ ವಾಹನವೂ ಹೊರ ವಾತಾವರಣದಲ್ಲಿ ಓಡುವ ಸಾಮಾನ್ಯ ರೈಲುಗಳಿಗಿಂತ 10 ಪಟ್ಟು ಹೆಚ್ಚು ವೇಗದಲ್ಲಿ ಓಡಬಲ್ಲವು. ಈ ಹೈಪರ್ ಲೂಪ್ ಮಾದರಿಯಲ್ಲಿ ಟ್ರೈನ್ 1000 ಕಿಮೀ ಪ್ರತಿ ಗಂಟೆಗೆ ಸಂಚರಿಸಬಲ್ಲದು. ಅದಕ್ಕಿಂತ ಹೆಚ್ಚು ವೇಗದಲ್ಲಿ ಸಹಚರಿಸಬಲ್ಲದು.

ಐಐಟಿ ಮದ್ರಾಸ್’ನಲ್ಲಿ 410 ಮೀಟರ್ ಉದ್ಧದ ಹೈಪರ್ ಲೂಪ್ ಟ್ರ್ಯಾಕ್ ಅನ್ನು ನಿರ್ಮಿಸಲಾಗಿದ್ದು, ಪ್ರಯೋಗಾರ್ಥ ಸಂಚಾರ ಮಾಡಲಾಗುತ್ತಿದೆ. ಇದರ ವಿಡಿಯೋ, ಫೋಟೊಗಳನ್ನು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಡಿದ್ದು ‘ಇದು ಭಾರತದ ಮೊಟ್ಟ ಮೊದಲ ಹೈಪರ್ ಲೂಪ್ ಟೆಸ್ಟಿಂಗ್ ಟ್ರ್ಯಾಕ್, ಐಐಟಿ ಮದ್ರಾಸ್ ಮತ್ತು ರೈಲ್ವೆ ಇಲಾಖೆಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.

IIT: ಕಾಲೇಜು ಮುಗಿಯುವ ಮುನ್ನವೇ ಸಿಕ್ತು‌ 4.3 ಕೋಟಿ ರೂಪಾಯಿ ಸಂಬಳದ ಉದ್ಯೋಗ

ಐಐಟಿ ಮದ್ರಾಸ್’ನ 76 ಮಂದಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ದುಡಿಯುತ್ತಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಎರಡು ಭಾಗಗಳಲ್ಲಿ ಕಾರ್ಯ ರೂಪಕ್ಕೆ ತರಲಾಗುತ್ತದೆಯಂತೆ. ಮೊದಲಿಗೆ 11 ಕಿ.ಮೀ ಪರೀಕ್ಷಾರ್ಥ ಟ್ರ್ಯಾಕ್ ನಿರ್ಮಾಣ ಮಾಡಿ, ಅಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಲ್ಲಿ ಪರೀಕ್ಷೆಗಳು ಯಶಸ್ವಿಯಾದರೆ 100 ಕಿ.ಮೀ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಿ ಅಲ್ಲಿ ಎರಡನೇ ಹಂತದ ಪರೀಕ್ಷೆ ಮಾಡಲಾಗುತ್ತದೆ. ಎರಡನೇ ಹಂತದ ಪರೀಕ್ಷೆಯಲ್ಲಿ ದೊರೆಯುವ ಫಲಿತಾಂಶಗಳನ್ನು ಆಧರಿಸಿ, ಈ ಹೈಪರ್ ಲೂಪ್ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಮುಂಬೈ ಮತ್ತು ಪುಣೆ ನಡುವೆ ದೇಶದ ಮೊದಲ ಹೈಪರ್ ಲೂಪ್ ಟ್ರೈನ್ ಸಂಚಾರ ಮಾಡಲಿದೆ‌.

Exit mobile version